ಸೋನಾಲಿ ಬೇಂದ್ರೆ 
ಬಾಲಿವುಡ್

ಅಂಡರ್‌ವರ್ಲ್ಡ್‌ ಪ್ರಭಾವದಿಂದ ಹಲವು ಸಿನಿಮಾಗಳನ್ನು ಕಳೆದುಕೊಂಡೆ: ಸೋನಾಲಿ ಬೇಂದ್ರೆ

ಬಾಲಿವುಡ್ ನಲ್ಲಿ ಹಲವು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ನಟಿ ಸೋನಾಲಿ ಬೇಂದ್ರೆ ಅವರು 2013ರಿಂದ ಯಾವುದೇ ಚಿತ್ರಗಳಲ್ಲಿ ನಟಿಸಿಲ್ಲ.

ಮುಂಬೈ: ಬಾಲಿವುಡ್ ನಲ್ಲಿ ಹಲವು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ನಟಿ ಸೋನಾಲಿ ಬೇಂದ್ರೆ ಅವರು 2013ರಿಂದ ಯಾವುದೇ ಚಿತ್ರಗಳಲ್ಲಿ ನಟಿಸಿಲ್ಲ. 

ಆದರೆ ಇದೀಗ ದಿ ಬ್ರೋಕನ್ ನ್ಯೂಸ್ ವೆಬ್ ಸರಣಿ ಮೂಲಕ ಕಂಬ್ಯಾಕ್ ಮಾಡುತ್ತಿರುವ ನಟಿ ಬಾಲಿವುಡ್ ಮೇಲೆ ಅಂಡರ್‌ವರ್ಲ್ಡ್‌ ನಿಯಂತ್ರಣವಿದ್ದು ಇದರಿಂದಾಗಿ ನಾನು ಹಲವು ಚಿತ್ರಗಳ ಅವಕಾಶ ಕಳೆದುಕೊಂಡೆ ಎಂದು ಹೇಳಿದ್ದಾರೆ. 

1994ರಲ್ಲಿ ಬಿಡುಗಡೆಯಾಗಿದ್ದ ಆಗ್ ಚಿತ್ರದ ಮೂಲಕ ಸೋನಾಲಿ ಬೇಂದ್ರೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಒಟ್ಟಾರೆ 46 ಚಿತ್ರಗಳಲ್ಲಿ ನಟಿಸಿರುವ ಸೋನಾಲಿ ಬೇಂದ್ರೆ ಅವರು 2013ರಲ್ಲಿ ಬಿಡುಗಡೆಯಾಗಿದ್ದ ಓನ್ಸ್ ಅಪನ್ ಎ ಟೈಮ್ ಇನ್ ಮುಂಬೈ ದರ್ಬಾರ್ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. 

ಕೆಲ ಸಿನಿಮಾಗಳಲ್ಲಿ ನನಗೆ ನಟಿಸಲು ಅವಕಾಶ ಬರುತ್ತಿತ್ತು. ಆದರೆ ನಂತರ ಆ ಪಾತ್ರಕ್ಕೆ ಬೇರೆ ನಟಿಯರು ಆಯ್ಕೆಯಾಗುತ್ತಿದ್ದರು. ಈ ಬಗ್ಗೆ ಕೇಳಿದಾಗ ನಿರ್ದೇಶಕರು ನಮಗೆ ಬೇರೆ ಕಡೆಯಿಂದ ಒತ್ತಡವಿದೆ. ಹೀಗಾಗಿ ಬೇರೆ ನಟಿಯನ್ನು ಆಯ್ಕೆ ಮಾಡಿದ್ದಾಗಿ ಹೇಳುತ್ತಿದ್ದರು. 

ಇಲ್ಲಿ ಕೆಲ ಸಿನಿಮಾ ನಿರ್ಮಾಣ ಸಂಸ್ಥೆಗಳು ಬಂಡವಾಳ ಹೂಡುತ್ತವೆ. ಅದೇ ರೀತಿ ಭೂಗತಲೋಕದಿಂದಲೂ ಸಿನಿಮಾ ನಿರ್ಮಾಣಕ್ಕೆ ಹಣ ಬರುತ್ತಿತ್ತು ಎಂದು ನಟಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel