ಬಾಲಿವುಡ್

ಬೆತ್ತಲೆ ಫೋಟೋಶೂಟ್ ಪ್ರಕರಣ: ಒಂದು ಫೋಟೊವನ್ನು ದುರುದ್ದೇಶದಿಂದ ತಿರುಚಲಾಗಿದೆ ಎಂದ ನಟ ರಣವೀರ್ ಸಿಂಗ್

Ramyashree GN

ಮುಂಬೈ: ನಟ ರಣವೀರ್ ಸಿಂಗ್ ಅವರ ನಗ್ನ ಫೋಟೋಶೂಟ್ ರಾಷ್ಟ್ರವ್ಯಾಪಿ ವಿವಾದವನ್ನು ಹುಟ್ಟುಹಾಕಿತ್ತು. ನಟನ ವಿರುದ್ಧ ಮುಂಬೈನಲ್ಲಿ ಪ್ರಕರಣ ದಾಖಲಾಗಿದ್ದು, ತನ್ನ ಫೋಟೊಗಳಲ್ಲಿ ಒಂದನ್ನು ದುರುದ್ಧೇಶಪೂರಿತವಾಗಿ ತಿದ್ದಲಾಗಿದೆ ಎಂದು ರಣವೀರ್ ಸಿಂಗ್ ಹೇಳಿರುವುದಾಗಿ ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.

ಆಗಸ್ಟ್ 29 ರಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಮುಂಬೈ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ರಣವೀರ್ ಸಿಂಗ್ ಅವರು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಸರ್ಕಾರೇತರ ಸಂಸ್ಥೆಯ (ಎನ್‌ಜಿಒ) ಪದಾಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಜುಲೈನಲ್ಲಿ ಚೆಂಬೂರು ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಅಶ್ಲೀಲತೆ ಮತ್ತು ಮಹಿಳೆಯರ ಭಾವನೆಗಳಿಗೆ ಧಕ್ಕೆಯನ್ನುಂಟುಮಾಡುವ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ದೂರುದಾರರು, ನಟ ತಮ್ಮ ನಗ್ನ ಫೋಟೊಗಳ ಮೂಲಕ 'ಸಾಮಾನ್ಯ ಮಹಿಳೆಯರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ' ಎಂದು ಹೇಳಿದ್ದರು.

ಇದಾದ ನಂತರ, ತನಿಖೆಗೆ ಹಾಜರಾಗುವಂತೆ ನಟನಿಗೆ ನೋಟಿಸ್ ನೀಡಲಾಯಿತು. ಹೀಗಾಗಿ ಅವರು ಆಗಸ್ಟ್ 29 ರಂದು ಪೊಲೀಸರ ಮುಂದೆ ಹಾಜರಾಗಿದ್ದರು ಮತ್ತು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು.

ಅದನ್ನು ತಿದ್ದಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಇದೀಗ ಛಾಯಾಚಿತ್ರವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಫೋಟೊವನ್ನು ತಿದ್ದಲಾಗಿದೆ ಎಂದು ತಿಳಿದುಬಂದರೆ, ಸಿಂಗ್ ಅವರ ಖಾಸಗಿ ಭಾಗಗಳು ಒಂದು ಛಾಯಾಚಿತ್ರದಲ್ಲಿ ಗೋಚರಿಸುತ್ತದೆ ಎಂಬ ಕಾರಣಕ್ಕಾಗಿ ಎಫ್‌ಐಆರ್ ದಾಖಲಾಗಿರುವುದರಿಂದ ಅವರಿಗೆ ಕ್ಲೀನ್ ಚಿಟ್ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT