ಕಂಗನಾ ರಣಾವತ್-ಹೇಮಮಾಲಿನಿ 
ಬಾಲಿವುಡ್

ನೆಕ್ಸ್ಟ್ ರಾಖಿ ಸಾವಂತ್; ಕಂಗನಾ ರಾಜಕೀಯ ಪ್ರವೇಶದ ಬಗ್ಗೆ ಸಂಸದೆ ಹೇಮಮಾಲಿನಿ ಹೀಗೆ ಹೇಳಿದ್ದೇಕೆ?

ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ತಾವು ಪ್ರತಿನಿಧಿಸುವ ಕ್ಷೇತ್ರವಾದ ಮಥುರಾದಿಂದ ನಟಿ ಕಂಗನಾ ರಣಾವತ್ ಅವರ ರಾಜಕೀಯ ಎಂಟ್ರಿ ವದಂತಿಯ ಬಗ್ಗೆ ಪ್ರಶ್ನಿಸಿದಾಗ ನಟಿ ಅನಿರೀಕ್ಷಿತ ಪ್ರತಿಕ್ರಿಯೆ ನೀಡಿದ್ದಾರೆ.

ಮಥುರಾ: ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ತಾವು ಪ್ರತಿನಿಧಿಸುವ ಕ್ಷೇತ್ರವಾದ ಮಥುರಾದಿಂದ ನಟಿ ಕಂಗನಾ ರಣಾವತ್ ಅವರ ರಾಜಕೀಯ ಎಂಟ್ರಿ ವದಂತಿಯ ಬಗ್ಗೆ ಪ್ರಶ್ನಿಸಿದಾಗ ನಟಿ ಅನಿರೀಕ್ಷಿತ ಪ್ರತಿಕ್ರಿಯೆ ನೀಡಿದ್ದಾರೆ.

ಬಹುಶಃ ಮಥುರಾದಿಂದ ಕಂಗನಾ ರಣಾವತ್ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಕೇಳಲಾಯಿತು. ಇದಕ್ಕೆ ನಟಿ ನನಗೇನು ಗೊತ್ತು. 'ಇದು ದೇವರಿಗೆ ಬಿಟ್ಟದ್ದು, ಶ್ರೀಕೃಷ್ಣ ಬಯಸಿದ್ದನ್ನು ಮಾಡುತ್ತಾನೆ" ಎಂದು ಹೇಳಿದರು.

'ಮಥುರಾದಿಂದ ಬರೀ ಸಿನಿಮಾ ನಟಿಯರೇ ಆಯ್ಕೆಯಾಗಬೇಕಾ, ನಿಮ್ಮ ತಲೆಯಲ್ಲಿ ಸಿನಿಮಾ ನಟಿಯರು ಮಾತ್ರ ಚುನಾವಣೆಗೆ ಸ್ಪರ್ಧಿಸಬೇಕು ಅಂತಿದಿಯಾ? ನಾಳೆ ರಾಖಿ ಸಾವಂತ್ ಕೂಡ ಚುನಾವಣೆಗೆ ಸ್ಪರ್ಧಿಸುತ್ತಾರೆ ಬಿಡಿ ಎಂದು ಹೇಳಿದರು.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದಕ್ಕೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. 'ಓಹ್ ಸ್ವತಃ ನಟಿ, ಮತ್ತು ಅವರ ಪತಿ ಮತ್ತು ಮಗ(ಅವರು) ರಾಜಕೀಯದಲ್ಲಿದ್ದಾರೆ. ಇನ್ನು ಈ ನಟಿಗೆ ಬೇರೆ ಸಿನಿಮಾ ನಟಿಯರು ರಾಜಕೀಯಕ್ಕೆ ಬರಲು ಸಮಸ್ಯೆ ಇದೆಯೇ?" ಎಂದು ಪ್ರಶ್ನಿಸಿದ್ದಾರೆ.

ನಟಿ ಕಂಗನಾ ರಣಾವತ್ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇತ್ತೀಚಿನ ಯಾವುದೇ ಸೂಚನೆಗಳಿಲ್ಲದಿದ್ದರೂ, ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಥುರಾಗೆ ಬಂದಿದ್ದಾಗ ತಾವು ಯಾವುದೇ ಪಕ್ಷಕ್ಕೆ ಸೇರದಿದ್ದರೂ, 'ರಾಷ್ಟ್ರೀಯವಾದಿಗಳ ಪರವಾಗಿ ಪ್ರಚಾರ ಮಾಡುವುದಾಗಿ' ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ