ಸನ್ನಿ ಡಿಯೋಲ್ ವಿಡಿಯೋ 
ಬಾಲಿವುಡ್

ಕುಡಿದು ರಸ್ತೆಯಲ್ಲಿ ತೂರಾಡಿದ ವಿಡಿಯೋ: ವದಂತಿಗಳಿಗೆ ತೆರೆ ಎಳೆದ ಬಾಲಿವುಡ್ ನಟ ಸನ್ನಿ ಡಿಯೋಲ್!

ರಾತ್ರಿ ಕುಡಿದು ರಸ್ತೆಯಲ್ಲಿ ತೂರಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ನಟ ಸನ್ನಿ ಡಿಯೋಲ್, ಅದು ತನ್ನ ಮುಂಬರುವ ಚಲನಚಿತ್ರ ಸಫರ್ ಚಿತ್ರೀಕರಣದ ದೃಶ್ಯವಿದು ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.  

ಮುಂಬೈ: ರಾತ್ರಿ ಕುಡಿದು ರಸ್ತೆಯಲ್ಲಿ ತೂರಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ನಟ ಸನ್ನಿ ಡಿಯೋಲ್, ಅದು ತನ್ನ ಮುಂಬರುವ ಚಲನಚಿತ್ರ ಸಫರ್ ಚಿತ್ರೀಕರಣದ ದೃಶ್ಯವಿದು ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.  

ಈ ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು, ಸಾರ್ವಜನಿಕವಾಗಿ ಆಪಾದಿತ ಅನುಚಿತ ವರ್ತನೆಗಾಗಿ ನಟ, ಬಿಜೆಪಿ ಸಂಸದನನ್ನು ನಿಂಧಿಸಿ ವ್ಯಾಪಕವಾಗಿ ಟೀಕಿಸಿದ್ದರು. 

ನಂತರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ  ಟೀಕಿಸಲಾದ ವಿಡಿಯೋವನ್ನು ಹಂಚಿಕೊಂಡಿರುವ ಸನ್ನಿ ಡಿಯೋಲ್,ಇದನ್ನು ವಿಭಿನ್ನ ಆಯಾಮದಲ್ಲಿ ಚಿತ್ರೀಕರಿಸಲಾಗಿದೆ. ಅದರಲ್ಲಿ ಕ್ಯಾಮೆರಾಗಳ ಸೆಟ್ ನ್ನು ಫ್ರೇಮ್‌ನಲ್ಲಿ ಕಾಣಬಹುದು ಎಂದಿದ್ದಾರೆ.

ಸಫರ್ ಚಿತ್ರದ ನಿರ್ಮಾಣ ಸಂಸ್ಥೆಯಾದ ಎಚೆಲೋನ್ ಪ್ರೊಢಕ್ಷನ್ ನ ವಿಶಾಲ್ ರಾಣಾ  ಕೂಡಾ ವೈರಲ್ ಆಗುತ್ತಿರುವ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆಯ 

"ಇದು ನಮ್ಮ ಮುಂಬರುವ  'ಸಫರ್' ಚಿತ್ರದ ದೃಶ್ಯವಾಗಿದ್ದು, ಸನ್ನಿ ಪಾಜಿ ರಾತ್ರಿಯ ವೇಳಾಪಟ್ಟಿಯನ್ನು ಚಿತ್ರೀಕರಿಸುತ್ತಿದ್ದರು. ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡದಂತೆ ಎಲ್ಲಾ ಅಭಿಮಾನಿಗಳಲ್ಲಿ ಅವರು ಮನವಿ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!