ಬಾಲಿವುಡ್ ಹಿರಿಯ ನಟ ʻಜೂನಿಯರ್ ಮೆಹಮೂದ್ʼ 
ಬಾಲಿವುಡ್

'ಮೇರಾ ನಾಮ್ ಜೋಕರ್' ಖ್ಯಾತಿಯ ಬಾಲಿವುಡ್ ಹಿರಿಯ ನಟ ʻಜೂನಿಯರ್ ಮೆಹಮೂದ್ʼನಿಧನ

ಹಾಥಿ ಮೇರೆ ಸಾಥಿ, ಮೇರಾ ನಾಮ್ ಜೋಕರ್ ಪಾತ್ರಗಳಿಂದ ಹೆಸರುವಾಸಿಯಾಗಿದ್ದ ಬಾಲಿವಿಡ್ ಹಿರಿಯ ನಟ ಜೂನಿಯರ್ ಮೆಹಮೂದ್ ಅವರು ವಿಧಿವಶರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಮುಂಬೈ: ಹಾಥಿ ಮೇರೆ ಸಾಥಿ, ಮೇರಾ ನಾಮ್ ಜೋಕರ್ ಪಾತ್ರಗಳಿಂದ ಹೆಸರುವಾಸಿಯಾಗಿದ್ದ ಬಾಲಿವಿಡ್ ಹಿರಿಯ ನಟ ಜೂನಿಯರ್ ಮೆಹಮೂದ್ ಅವರು ವಿಧಿವಶರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಹೊಟ್ಟೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮೆಹಮೂದ್ ಅವರು ಇಂದು (ಡಿಸೆಂಬರ್ 8ರ) ಮುಂಜಾನೆ 2 ಗಂಟೆಗೆ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

 ಜೂನಿಯರ್ ಮೆಹಮೂದ್ ಅವರು ಕಳೆದ ಎರಡು ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದು ಈ ಕುರಿತು ಹೇಳಿಕೆ ನೀಡಿದ ಅವರ ಆಪ್ತ ಸ್ನೇಹಿತ ಸಲಾಂ ಖಾಜಿ ಅವರು ಆರಂಭದಲ್ಲಿ ನಾವು ಆರೋಗ್ಯದಲ್ಲಿ ಸಣ್ಣ ಸಮಸ್ಯೆ ಇರಬಹುದು ಎಂದು ಭಾವಿಸಿದ್ದೆವು. ಆದರೆ, ಇದ್ದಕಿದ್ದಂತೆ ಅವರ ದೇಹದ ತೂಕದಲ್ಲಿ ಬಾರಿ ಇಳಿಕೆಯಾಗಲು ಪ್ರಾಂಭವಾಯಿತು ಆ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಆದರೆ ಅಷ್ಟೋತ್ತಿಗಾಗಲೇ ಅದು ನಾಲ್ಕನೇ ಹಂತಕ್ಕೆ ತಲುಪಿತ್ತು ಎಂದು ವೈದ್ಯರು ಹೇಳಿದ್ದರು ಎಂದು ಹೇಳಿದ್ದಾರೆ.

ಮೆಹಮೂದ್ ಅವರ ಆರೋಗ್ಯ ಹದಗೆಡುತ್ತಿರುವ ಸಂದರ್ಭದಲ್ಲಿ ಹಿರಿಯ ನಟರಾದ ಜೀತೇಂದ್ರ ಮತ್ತು ಬಾಲ್ಯದ ಸ್ನೇಹಿತ ಸಚಿನ್ ಪಿಲ್ಗಾಂವ್ಕರ್ ಅವರನ್ನು ಭೇಟಿ ಮಾಡವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಅದರಂತೆ ಜೀತೆಂದ್ರ ಹಾಗೂ ಸಚಿನ್ ಪಿಲ್ಗಾಂವ್ಕರ್ ಅವರೂ ಬಂದು ಮೆಹಬೂಬ್ ಅವರನ್ನು ಭೇಟಿಯಾಗಿ ಅರೋಗ್ಯ ವಿಚಾರಿಸಿದ್ದರು.

ಜೂನಿಯರ್ ಮೆಹಮೂದ್ ಅವರ ನಿಜವಾದ ಹೆಸರು ನಯೀಮ್ ಸೈಯದ್. ಅವರು ನವೆಂಬರ್ 15, 1956 ರಂದು ಜನಿಸಿದರು. ಅವರು 1967 ರಲ್ಲಿ ಸಂಜೀವ್ ಕುಮಾರ್ ಅವರ ನೌನಿಹಾಲ್ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆಗ ಅವರಿಗೆ ಕೇವಲ 11 ವರ್ಷ. ಅದಾದ ಬಳಿಕ ತನ್ನ ವೃತ್ತಿಜೀವನದಲ್ಲಿ ಮೆಹಮೂದ್ ಅವರು ಸುಮಾರು 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ‘ಕಟಿ ಪತಂಗ್’, ‘ಬ್ರಹ್ಮಚಾರಿ’, ‘ಮೇರಾ ನಾಮ್ ಜೋಕರ್’, ‘ಹಾಥಿ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಹೆಸರುವಾಸಿಯಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT