ಕೆಎಲ್ ರಾಹುಲ್ ಮತ್ತು ಸುನೀಲ್ ಶೆಟ್ಟಿ-ಆಥಿಯಾ ಶೆಟ್ಟಿ 
ಬಾಲಿವುಡ್

ಟ್ರೋಲ್ ಮಾಡಿದಾಗ ಕೆಎಲ್ ರಾಹುಲ್- ಅಥಿಯಾ ಶೆಟ್ಟಿಗಿಂತ ನನಗೆ 100 ಪಟ್ಟು ಹೆಚ್ಚು ನೋವಾಗುತ್ತದೆ: ಸುನೀಲ್ ಶೆಟ್ಟಿ

ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮಗಳು ಅಥಿಯಾ ಶೆಟ್ಟಿ ಅವರು ಕ್ರಿಕೆಟಿಗ ಕೆಎಲ್ ರಾಹುಲ್ ಅವರನ್ನು 2023ರ ಜನವರಿಯಲ್ಲಿ ವಿವಾಹವಾದರು. ಇದೀಗ, ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಸುನೀಲ್ ಶೆಟ್ಟಿ ಅವರು, ಜನರು ಕೆಎಲ್ ರಾಹುಲ್ ಅವರನ್ನು ಟ್ರೋಲ್ ಮಾಡಿದಾಗ ತಮಗೆ ಹೇಗೆ ಅನ್ನಿಸುತ್ತದೆ ಎಂಬ ಕುರಿತು ಮಾತನಾಡಿದ್ದಾರೆ.

ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮಗಳು ಅಥಿಯಾ ಶೆಟ್ಟಿ ಅವರು ಕ್ರಿಕೆಟಿಗ ಕೆಎಲ್ ರಾಹುಲ್ ಅವರನ್ನು 2023ರ ಜನವರಿಯಲ್ಲಿ ವಿವಾಹವಾದರು. ಶೀಘ್ರದಲ್ಲೇ ದಂಪತಿ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆಥಿಯಾ ಮತ್ತು ರಾಹುಲ್ ನಡುವಿನ ಸಂಬಂಧ ಅಧಿಕೃತವಾಗಿ ಘೋಷಣೆಯಾದಾಗಿನಿಂದ ಸುನೀಲ್ ಅವರು ಕೆಎಲ್ ರಾಹುಲ್ ಅವರ ಬಗ್ಗೆ ತುಂಬಾ ಹೆಮ್ಮೆಪಟ್ಟಿದ್ದಾರೆ. 

ಇದೀಗ, ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಸುನೀಲ್ ಶೆಟ್ಟಿ ಅವರು, ಜನರು ಕೆಎಲ್ ರಾಹುಲ್ ಅವರನ್ನು ಟ್ರೋಲ್ ಮಾಡಿದಾಗ ತಮಗೆ ಹೇಗೆ ಅನ್ನಿಸುತ್ತದೆ ಎಂಬ ಕುರಿತು ಮಾತನಾಡಿದ್ದಾರೆ.

ಸುದ್ದಿಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ, ಕೆಎಲ್ ರಾಹುಲ್ ಅವರನ್ನು ಟ್ರೋಲ್ ಮಾಡಿದಾಗ ನೋವಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುನೀಲ್, 'ಇದು ಬಹುಶಃ ರಾಹುಲ್‌ಗೆ ನೋವುಂಟುಮಾಡುವುದಕ್ಕಿಂತ ಹೆಚ್ಚು ನನಗೆ ನೋವುಂಟುಮಾಡುತ್ತದೆ' ಎಂದರು.

ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಬೇಡಿ ಮತ್ತು ಅವುಗಳಿಗೆ 'ಡ್ಯಾಡ್ ನನ್ನ ಬ್ಯಾಟ್ ಮಾತನಾಡುತ್ತದೆ' ಎಂದು ರಾಹುಲ್ ಹೇಳುತ್ತಿದ್ದರು ಎಂದ ಅವರು, 'ಅವರ ಬ್ಯಾಟ್ ಮಾತನಾಡಿದೆ. ರಾಹುಲ್ ಅವರ ಮೇಲೆ ಜನರು, ಆಯ್ಕೆದಾರರು ಮತ್ತು ನಾಯಕ ಇಟ್ಟಿರುವ ನಂಬಿಕೆಯೇ ಎಲ್ಲವನ್ನೂ ಹೇಳುತ್ತದೆ. ಟ್ರೋಲ್‌ನಿಂದ ರಾಹುಲ್ ಅಥವಾ ಅಥಿಯಾಗೆ ನೋವುಂಟಾಗುವುದಕ್ಕಿಂತ 100 ಪಟ್ಟು ಹೆಚ್ಚು ನನಗೆ ನೋವುಂಟಾಗುತ್ತದೆ' ಎಂದು ಸುನೀಲ್ ಹೇಳಿದರು.

ಭಾರತ ಆಡುವಾಗ ನಾನು ಅತಿಯಾದ ವಿಶ್ವಾಸದಿಂದ ಕೂಡಿರುತ್ತೇನೆ. ಇಡೀ ವಿಶ್ವಕಪ್ ಪಂದ್ಯಾವಳಿಯನ್ನು ತನ್ನ ಹೆಂಡತಿ ಮನ ಶೆಟ್ಟಿಯೊಂದಿಗೆ ಕೋಣೆಯೊಂದರಲ್ಲಿ ಕುಳಿತು ನೋಡಿದ್ದೇನೆ. ನೆಲದ ಮೇಲೆ ಕುಳಿತೇ ಎಲ್ಲಾ ಪಂದ್ಯಗಳನ್ನು ವೀಕ್ಷಿಸಿದ್ದೇನೆ ಎಂದಿದ್ದಾರೆ.

ಕೆಎಲ್ ರಾಹುಲ್ ಆಡುವಾಗ ನಾನು ತುಂಬಾ ಆತಂಕಕ್ಕೆ ಒಳಗಾಗುತ್ತೇನೆ. ರಾಹುಲ್ ಆಡುವಾಗಲೆಲ್ಲಾ ನನ್ನ ಮಗು ಆಡುತ್ತಿದೆ ಎಂದು ನಾನು ಆತಂಕಪಡುತ್ತೇನೆ. ನಾನು ಯಾವಾಗಲೂ ಅವನಿಗೆ ಒಳ್ಳೆಯದನ್ನು ಬಯಸುತ್ತೇನೆ. ಅವರ ಕಣ್ಣುಗಳನ್ನು ನೋಡುತ್ತಾ, ನಾನು ಪ್ರತಿಯೊಬ್ಬ ಕ್ರಿಕೆಟಿಗರ ಬಗ್ಗೆಯೂ ಸಹಾನುಭೂತಿ ಹೊಂದಲು ಪ್ರಾರಂಭಿಸಿದೆ ಮತ್ತು ಪ್ರಶಂಸಿಸಲು ಪ್ರಾರಂಭಿಸಿದೆ. ನಿಮ್ಮ ಮಗುವಿನ ಪ್ರದರ್ಶನ ಕಡಿಮೆಯಾದಾಗ, ಅದು ನಿಮ್ಮನ್ನು ಬೆಚ್ಚಿಬೀಳಿಸುತ್ತದೆ. ಆತ ಆ ವೃತ್ತಿಯ ಯಜಮಾನ. ಆದರೆ, ನೀವು ಆಟವನ್ನು ಅವರ ತಂದೆಯಾಗಿ ನೋಡುತ್ತಿದ್ದೀರಿ ಮತ್ತು ನಂತರ ಆತ ಫೀನಿಕ್ಸ್‌ನಂತೆ ಏರಿದಾಗ ಖುಷಿಯಾಗುತ್ತದೆ' ಎಂದಿದ್ದಾರೆ.

ನಟ ಸುನೀಲ್ ಕೊನೆಯದಾಗಿ ಒಟಿಟಿಯ 'ಹಂಟರ್' ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನಟ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಅವರೊಂದಿಗೆ 'ಹೇರಾ ಫೇರಿ 3' ಅನ್ನು ಪ್ರಾರಂಭಿಸಲು ಉತ್ಸುಕರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Goa Nightclub Tragedy: ನೈಟ್‌ಕ್ಲಬ್‌ ಮ್ಯಾನೇಜರ್‌ ಬಂಧನ, ಮಾಲೀಕನ ವಿರುದ್ಧ ವಾರಂಟ್‌ ಜಾರಿ

RCB ಫ್ಯಾನ್ಸ್ ಗೆ ಗುಡ್ ನ್ಯೂಸ್: ಚಿನ್ನಸ್ವಾಮಿಯಿಂದ IPL ಪಂದ್ಯಗಳು ಸ್ಥಳಾಂತರವಾಗಲು ಬಿಡಲ್ಲ; ಡಿ.ಕೆ. ಶಿವಕುಮಾರ್

'ಮದುವೆ ರದ್ದಾಗಿದೆ': ಪಲಾಶ್ ಮುಚ್ಚಲ್ ಜೊತೆಗಿನ ವಿವಾಹದ ಬಗ್ಗೆ ಮೌನ ಮುರಿದ ಸ್ಮೃತಿ ಮಂಧಾನ!

'ಮುಂದುವರಿಯಲು ನಿರ್ಧರಿಸಿದ್ದೇನೆ': ಸ್ಮೃತಿ ಮಂಧಾನ ಬಳಿಕ ಮದುವೆ ರದ್ದಾದ ಬಗ್ಗೆ ಪಲಾಶ್ ಮುಚ್ಚಲ್ ಮಾತು!

500 ಕೋಟಿ ರು ಕೊಟ್ಟು ಪಂಜಾಬ್ CM ಕುರ್ಚಿಯಲ್ಲಿ ಕುಳಿತುಕೊಳ್ಳಲು ನಮ್ಮ ಬಳಿ ಹಣವಿಲ್ಲ; ನವಜೋತ್ ಸಿಧು ಪತ್ನಿ ಹೇಳಿಕೆ

SCROLL FOR NEXT