ತಿರುಪತಿ ದೇವಸ್ಥಾನದಲ್ಲಿ ದೀಪಿಕಾ ಪಡುಕೋಣೆ 
ಬಾಲಿವುಡ್

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ: 'ಫೈಟರ್' ಚಿತ್ರ ಜನವರಿಯಲ್ಲಿ ತೆರೆಗೆ

ಚಿತ್ರ ಬಿಡುಗಡೆಗೆ ಮುನ್ನ ಬಾಲಿವುಡ್ ನಟರು ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದು ಇತ್ತೀಚೆಗೆ ಜೋರಾಗಿದೆ. ಶಾರೂಕ್ ಖಾನ್ ಇತ್ತೀಚೆಗೆ ಜಮ್ಮುವಿನ ವೈಷ್ಣೋದೇವಿ ಮತ್ತು ಶಿರಡಿ ಸಾಯಿಬಾಬನ ದರ್ಶನ ಪಡೆದಿದ್ದರು. 

ತಿರುಪತಿ: ಚಿತ್ರ ಬಿಡುಗಡೆಗೆ ಮುನ್ನ ಬಾಲಿವುಡ್ ನಟರು ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದು ಇತ್ತೀಚೆಗೆ ಜೋರಾಗಿದೆ. ಶಾರೂಕ್ ಖಾನ್ ಇತ್ತೀಚೆಗೆ ಜಮ್ಮುವಿನ ವೈಷ್ಣೋದೇವಿ ಮತ್ತು ಶಿರಡಿ ಸಾಯಿಬಾಬನ ದರ್ಶನ ಪಡೆದಿದ್ದರು. ಬಾಲಿವುಡ್ ಖ್ಯಾತ ನಟಿ  ಬೆಂಗಳೂರು ಮೂಲದ ದೀಪಿಕಾ ಪಡುಕೋಣೆ ನಿನ್ನೆ ಶುಕ್ರವಾರ ಬೆಳಗ್ಗೆ ತಿರುಪತಿ ದೇವಸ್ಥಾನಕ್ಕೆ ತಮ್ಮ ತಂದೆ-ತಾಯಿ ಮತ್ತು ಸೋದರಿ ಜೊತೆ ಭೇಟಿ ನೀಡಿದ್ದರು.

ಸೋದರಿ ಅನಿಶಾ ಪಡುಕೋಣೆ ಹಾಗೂ ತಂದೆ ಪ್ರಕಾಶ್ ಪಡುಕೋಣೆ ಮತ್ತು ತಾಯಿ ಉಜ್ಜಲಾ ಪಡುಕೋಣೆ ಅವರೊಂದಿಗೆ ಕಾಣಿಸಿಕೊಂಡರು. ಬಿಗಿ ಭದ್ರತೆಯ ನಡುವೆ ದೀಪಿಕಾ ಪಡುಕೋಣೆ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಬಾಲಾಜಿ ದೇವರ ದರ್ಶನ ಪಡೆದರು. 

ದೀಪಿಕಾ ಕೆನೆ ಮತ್ತು ಗೋಲ್ಡನ್ ಬಣ್ಣದ ಸಾಂಪ್ರದಾಯಿಕ ಉಡುಗೊರೆ ಧರಿಸಿದ್ದರು. ದೇವಸ್ಥಾನದ ಆವರಣದಿಂದ ಹೊರಡುವಾಗ ಸುತ್ತಲೂ ಕೆಂಪು ಶಾಲು ಹೊತ್ತುಕೊಂಡು ಹೊರಬಂದರು. 

ದೀಪಿಕಾ ಪಡುಕೋಣೆ ತಿರುಪತಿ ಭೇಟಿ: ಗುರುವಾರ ಸಾಯಂಕಾಲವೇ ದೀಪಿಕಾ ತಮ್ಮ ಸೋದರಿ ಜೊತೆ ತಿರುಪತಿಗೆ ಆಗಮಿಸಿದ್ದರು. ಈ ವೇಳೆ ಕಪ್ಪು ಬಟ್ಟೆ ಧರಿಸಿದ್ದರು. ಕಾಲ್ನಡಿಗೆ ಮೂಲಕ ತಿರುಪತಿ ದರ್ಶನ ಪಡೆದರು. ಹೃತಿಕ್ ರೋಷನ್ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಅವರ ಚಲನಚಿತ್ರ ಫೈಟರ್ ಬಿಡುಗಡೆಗೆ ಸಜ್ಜಾಗುತ್ತಿರುವ ಸಮಯದಲ್ಲಿ ದೀಪಿಕಾ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. 

ನಿನ್ನೆ ಫೈಟರ್‌ನ ಮೊದಲ ಹಾಡು ಶೇರ್ ಖುಲ್ ಗಯೆಯನ್ನು ಪಾತ್ರವರ್ಗ ಮತ್ತು ತಯಾರಕರು ಅನಾವರಣಗೊಳಿಸಿದರು. ಫೈಟರ್ ಮುಂದಿನ ವರ್ಷ ಜನವರಿ 25 ರಂದು ಚಿತ್ರಮಂದಿರಗಳಿಗೆ ಬರಲಿದೆ.

ನಂತರ ದೀಪಿಕಾ ಪಡುಕೋಣೆ ಅವರು ವೈಜ್ಞಾನಿಕ ಆಕ್ಷನ್ ಚಿತ್ರ ಕಲ್ಕಿ 2898 ಎಡಿಯಲ್ಲಿ ಪ್ರಭಾಸ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟರಾದ ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಕೂಡ ಇದ್ದಾರೆ. ದೀಪಿಕಾ ಅವರ ಮುಂಬರುವ ಚಿತ್ರಗಳಲ್ಲಿ ರೋಹಿತ್ ಶೆಟ್ಟಿಯವರ ಸಿಂಗಂ ಅಗೇನ್ ಕೂಡ ಒಂದು. ಆಕ್ಷನ್ ಚಿತ್ರದ ತಾರಾ-ಸಮೂಹದ ತಾರಾಗಣದಲ್ಲಿ ಅಜಯ್ ದೇವಗನ್, ರಣವೀರ್ ಸಿಂಗ್, ಅಕ್ಷಯ್ ಕುಮಾರ್, ಕರೀನಾ ಕಪೂರ್ ಮತ್ತು ಅನೇಕರು ಇದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT