ಬಾಲಿವುಡ್

ಪುಸ್ತಕ ರೂಪದಲ್ಲಿ ಬರಲಿದೆ ದಿವಂಗತ ನಟಿ ಶ್ರೀದೇವಿ ಅವರ ಜೀವನ ಚರಿತ್ರೆ; ಬೋನಿ ಕಪೂರ್ ಘೋಷಣೆ

Ramyashree GN

ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಗುರುವಾರ ತಮ್ಮ ದಿವಂಗತ ಪತ್ನಿ ಮತ್ತು ನಟಿ ಶ್ರೀದೇವಿ ಅವರ ಜೀವನ ಚರಿತ್ರೆಯನ್ನು ಶ್ರೀದೇವಿ 'ದಿ ಲೈಫ್ ಆಫ್ ಎ ಲೆಜೆಂಡ್' ಎಂಬ ಶೀರ್ಷಿಕೆಯಲ್ಲಿ ಪುಸ್ತಕದ ರೂಪದಲ್ಲಿ ಹೊರಬರಲಿದೆ ಎಂದು ಘೋಷಿಸಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ಅಧಿಕೃತ ಘೋಷಣೆ ಮಾಡಿದ್ದು, 'ಶ್ರೀದೇವಿ ಪ್ರಕೃತಿಯ ಶಕ್ತಿಯಾಗಿದ್ದರು. ಅವರು ತಮ್ಮ ಕಲೆಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಾಗ ಅವರು ತುಂಬಾ ಸಂತೋಷವಾಗಿರುತ್ತಿದ್ದರು. ಆದರೆ, ಅವರು ತುಂಬಾ ಖಾಸಗಿ ವ್ಯಕ್ತಿಯಾಗಿದ್ದರು' ಎಂದು ಬರೆದಿದ್ದಾರೆ.

ಶ್ರೀದೇವಿ, ಬೋನಿ ಕಪೂರ್ ಅವರ ಆಪ್ತರಾದ ಧೀರಜ್ ಕುಮಾರ್ ಅವರು ಶ್ರೀದೇವಿ ಅವರಿಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನ ಒಳಗೊಂಡ ಪುಸ್ತವನ್ನು ಈಗಾಗಲೇ ಬರೆದಿದ್ದಾರೆ. ಈ ಪುಸ್ತಕವನ್ನು ವೆಸ್ಟ್‌ಲ್ಯಾಂಡ್ ಕಂಪನಿ ಈ ಪುಸ್ತಕವನ್ನು ಬಿಡುಗಡೆ ಮಾಡಲಿದೆ.

ಧೀರಜ್ ಕುಮಾರ್ ಅವರು ಕುಟುಂಬ ಎಂದು ಪರಿಗಣಿಸಿದ್ದೇವೆ. ಅವರು ಸಂಶೋಧಕ, ಬರಹಗಾರ ಮತ್ತು ಅಂಕಣಕಾರರಾಗಿದ್ದರು. ಆಕೆಯ ಅಸಾಧಾರಣ ಜೀವನಕ್ಕೆ ತಕ್ಕ ಪುಸ್ತಕವನ್ನು ಅವರು ಬರೆಯುತ್ತಿರುವುದು ನಮಗೆ ಸಂತಸ ತಂದಿದೆ ಎಂದು ಬೋನಿ ಕಪೂರ್ ಹೇಳಿದ್ದಾರೆ.

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿ ಶ್ರೀದೇವಿ ಅವರು, 50 ವರ್ಷದ ತಮ್ಮ ಸಿನಿ ಜರ್ನಿಯಲ್ಲಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.  ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿದ್ದ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 

ಅವರಿಗೆ ಪದ್ಮಶ್ರೀ ಪ್ರಶಸ್ತಿ, ನ್ಯಾಷನಲ್ ಫಿಲ್ಮ್ ಅವಾರ್ಡ್, ಹಲವಾರು ಫಿಲ್ಮ್‌ಫೇರ್ ಪ್ರಶಸ್ತಿಗಳು, ರಾಜ್ಯ ಸರ್ಕಾರದ ಪ್ರಶಸ್ತಿಗಳು ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. 1996ರಲ್ಲಿ ಬೋನಿ ಕಪೂರ್ ಅವರನ್ನ ಮದುವೆಯಾದ ಶ್ರೀದೇವಿ ಅವರು, 2013ರಲ್ಲಿ ಇಂಗ್ಲೀಷ್ ವಿಂಗ್ಲೀಷ್ ಸಿನಿಮಾ ಮೂಲಕ ಕಮ್ ಬ್ಯಾಕ್  ಮಾಡಿದ್ದರು.

2018ರಲ್ಲಿ ಶ್ರೀದೇವಿ ಅವರು ನಿಧನರಾದರು. ಅವರ ಅನಿರೀಕ್ಷಿತ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದೆ.

SCROLL FOR NEXT