ಬಾಲಿವುಡ್

ಸುರಕ್ಷತೆಗಾಗಿ ಎರಡು ಕಾಂಡೋಮ್ ಬಳಸಬಹುದಾ? ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಲೈಂಗಿಕ ಶಿಕ್ಷಣ; ವಿಡಿಯೋ

Nagaraja AB

ಮುಂಬೈ:  ತಮ್ಮ ಇತ್ತೀಚಿನ 'ಛತ್ರಿವಾಲಿ' ಚಿತ್ರದಲ್ಲಿ ಸುರಕ್ಷಿತ ಲೈಂಗಿಕತೆ ಮತ್ತು ಪುರುಷ ಗರ್ಭನಿರೋಧಕಗಳ ಬಗ್ಗೆ ನಟಿ ರಾಕುಲ್ ಪ್ರೀತ್ ಸಿಂಗ್ ಅರಿವು ಮೂಡಿಸಿದ್ದಾರೆ. ಇದು ಮಡಿವಂತಿಕೆಯ ಸಮಾಜದಲ್ಲಿ ಯುವ ಜನತೆಗೆ ಲೈಂಗಿಕ ಶಿಕ್ಷಣದ ಬಗ್ಗೆ ಇರುವ ಸಾಮಾಜಿಕ ನಿಷೇಧದ ವಿರುದ್ಧ ಹೋರಾಡುವ ಗುರಿಯನ್ನು ಹೊಂದಿದೆ. ಯೂ ಟ್ಯೂಬ್ ಚಾನಲ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು, ಲೈಂಗಿಕತೆ ಕುರಿತ ಕೆಲವೊಂದು ಸುಳ್ಳು, ತಪ್ಪು ಕಲ್ಪನೆಗಳ ಬಗ್ಗೆಯೂ ಅವರು ಹಂಚಿಕೊಂಡಿದ್ದಾರೆ. 

ವಿಡಿಯೋದಲ್ಲಿ ಮಲವಿಸರ್ಜನೆಗಾಗಿ ಶೌಚಗೃಹಕ್ಕೆ ಹೋಗುವ ಮಹಿಳೆ ಕೊನೆಯಲ್ಲಿ ಮಗುವೊಂದಕ್ಕೆ ಜನ್ಮ ನೀಡುತ್ತಾಳೆ ಎಂಬ ಪತ್ರಿಕೆಯಲ್ಲಿನ ಸುದ್ದಿಯೊಂದನ್ನು ಓದುವ ರಾಕುಲ್, ಆಕೆ ಗರ್ಭಿಣಿ ಎಂಬುದು ಆಕೆಗೆ ತಿಳಿದಿರಲಿಲ್ಲವೇ? ಅದು ಹೇಗೆ ಸಾಧ್ಯ ಎನ್ನುತ್ತಾರೆ, ನಂತರ ರಹಸ್ಯ ಗರ್ಭಧಾರಣೆಯ ಕಾರಣದಿಂದಾಗಿ ಇದು ಸಂಭವಿಸಬಹುದು ಎಂದು ವಿಡಿಯೋದಲ್ಲಿ ವಿವರಿಸಲಾಗುತ್ತದೆ.

ನಂತರ  51 ವರ್ಷದ ಮಹಿಳೆ ತನ್ನ ಮೊಮ್ಮಗಳಿಗೆ ಜನ್ಮ ನೀಡಿದಳು' ಎಂಬ ಸುದ್ದಿಯನ್ನು ಓದುವ ನಟಿ, ಇದು ಹೇಗೆ ಸಂಭವಿಸುತ್ತದೆ ಎಂಬುದನ್ನು ವಿವರಿಸುತ್ತಾರೆ. ಇದು ಬಾಡಿಗೆ ತಾಯ್ತನದ ಪ್ರಕರಣವಾಗಿದೆ ಮತ್ತು ಪ್ರಪಂಚದಾದ್ಯಂತ ಬಹಳಷ್ಟು ಜನರು ಇದನ್ನು ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಬಾಡಿಗೆ ತಾಯ್ತನ ನಿಷೇಧಿತ ವಿಷಯವಾಗಿದ್ದರೂ, ಗರ್ಭಿಣಿಯಾಗಲು ಸಾಧ್ಯವಾಗದ ಪೋಷಕರಿಗೆ ಗರ್ಭಧರಿಸಲು ಇದು ಒಂದು ಮಾರ್ಗ ಎನ್ನುತ್ತಾರೆ. 

ತದನಂತರ, ಗರ್ಭಧರಿಸದಂತೆ ಪುರುಷರು ಎರಡು ಕಾಂಡೋಮ್ ಬಳಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಕುಲ್, ಈ ರೀತಿ ಮಾಡದಂತೆ ಸಲಹೆ ನೀಡಿದ್ದಾರೆ. ಇದು ಒಳ್ಳೆಯ ಆಲೋಚನೆ ಇಲ್ಲ. ಇದು ಕೆಟ್ಟ ಐಡಿಯಾ, ಏಕೆಂದರೆ ಏಕಕಾಲದಲ್ಲಿ ಹಾಕಿಕೊಂಡು ಎರಡು ಕಾಂಡೋಮ್ ಗಳ ನಡುವಿನ ಘರ್ಷಣೆ ಸಂತೋಷಕ್ಕಿಂತ ದು:ಖ ತರಬಹುದು. ಹಾಗಾಗಿ ನಿಜವಾಗಿಯೂ ಜಾಗರೂಕರಾಗಲು ಬಯಸಿದರೆ ಐಯುಡಿ ಅಥವಾ ಎರಡನೇ ರೀತಿಯ ಗರ್ಭ ನಿರೋಧಕಗಳನ್ನು ಬಳಸಿ ಎಂದು ಸಲಹೆ ನೀಡಿದ್ದಾರೆ.

SCROLL FOR NEXT