ಬಾಲಿವುಡ್

'ಲಗಾನ್' ಖ್ಯಾತಿಯ ನಟ ಜಾವೇದ್ ಖಾನ್ ಅಮ್ರೋಹಿ ನಿಧನ

Nagaraja AB

ಮುಂಬೈ: ಹಿರಿಯ ರಂಗಭೂಮಿ ಮತ್ತು  ಬಾಲಿವುಡ್ ನಟ ಜಾವೇದ್ ಖಾನ್ ಅಮ್ರೋಹಿ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಜನಪ್ರಿಯ ಡಿಡಿ ಧಾರಾವಾಹಿ ನುಕ್ಕಡ್, ಲಗಾನ್ ಮತ್ತು ಚಕ್ ದೇ ಮತ್ತಿತರ ಚಿತ್ರಗಳಲ್ಲಿನ ಅಮೋಘ ಅಭಿನಯದಿಂದ ಅವರು ಪ್ರಸಿದ್ದರಾಗಿದ್ದರು.

ಶ್ವಾಸಕೋಶದ ವೈಫಲ್ಯದಿಂದಾಗಿ ಮುಂಬೈನ ಆಸ್ಪತ್ರೆಯೊಂದರಲ್ಲಿ ಅವರು ಇಂದು ಕೊನೆಯುಸಿರೆಳೆದರು ಎಂದು ಬಾಲಿವುಡ್ ಚಿತ್ರ ನಿರ್ಮಾಪಕ ರಮೇಶ್ ತಲ್ವಾರ್ ಹೇಳಿದ್ದಾರೆ.

ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಕಳೆದ ಒಂದು ವರ್ಷದಿಂದ ಹಾಸಿಗೆ ಹಿಡಿದಿದ್ದರು. ಸೂರ್ಯ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಎರಡೂ ಶ್ವಾಸಕೋಶಗಳು ವೈಫಲ್ಯದ ಕಾರಣ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ನಿಧನರಾದರು ತಲ್ವಾರ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಮ್ರೋಹಿ 1970 ರ ದಶಕದಿಂದಲೂ ಇಪ್ಟಾ (ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್) ಮುಂಬೈನ ಸಕ್ರಿಯ ಸದಸ್ಯರಾಗಿದ್ದರು ಎಂದು ನಟ ಅಖಿಲೇಂದ್ರ ಮಿಶ್ರಾ ಹೇಳಿದ್ದಾರೆ. ಅಮ್ರೋಹಿ 150 ಕ್ಕೂ ಹೆಚ್ಚು ಚಲನಚಿತ್ರ  ಮತ್ತು ಸುಮಾರು ಒಂದು ಡಜನ್ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. 

1980 ರ ದಶಕದ ಕೊನೆಯಲ್ಲಿ ಡಿಡಿಯಲ್ಲಿ ಪ್ರಸಾರವಾಗುತ್ತಿದ್ದ ನುಕ್ಕಡ್‌ ಧಾರವಾಹಿಯಲ್ಲಿ ಕ್ಷೌರಿಕ ಕರೀಮ್ ಪಾತ್ರದಲ್ಲಿ ಅವರು ಹೆಚ್ಚು ಹೆಸರುವಾಸಿಯಾಗಿದ್ದರು. ಲಗಾನ್‌ನಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆಗಾರ ಮತ್ತು ಚಕ್ ದೆ ಇಂಡಿಯಾದಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ಸಿಬ್ಬಂದಿ ಪಾತ್ರದಲ್ಲಿ ಅಮ್ರೋಹಿ ನಟಿಸಿದ್ದಾರೆ. 

SCROLL FOR NEXT