ಸೂರ್ಯವಂಶಂ ಸಿನಿಮಾ ಸ್ಟಿಲ್ 
ಬಾಲಿವುಡ್

ಪದೇ ಪದೇ ಸೂರ್ಯವಂಶಂ ಸಿನಿಮಾ ಪ್ರಸಾರ! ನಮ್ಮ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಿದರೆ ಇದಕ್ಕೆ ಯಾರು ಹೊಣೆ? ಚಾನೆಲ್ ಗೆ ಪತ್ರ

ಸಿನಿಮಾ ಒಂದನ್ನು ಟಿವಿ ಚಾನೆಲ್ ವೊಂದರಲ್ಲಿ ಪದೇ ಪದೇ ಪ್ರಸಾರ ಮಾಡಿದ್ದಕ್ಕೆ ಬೇಸರಗೊಂಡ ಅಭಿಮಾನಿ ಟಿವಿ ಚಾನೆಲ್  ಗೆ ಪತ್ರ ಬರೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಒಂದು ಸಿನಿಮಾವನ್ನು ಎಷ್ಟು ಸಲ ನೋಡಬಹುದು? ಅದು ಸೂಪರ್ ಹಿಟ್ ಕಂಡಿರುವ ಚಿತ್ರವಾಗಲಿ ಇಲ್ಲ ಫ್ಲಾಪ್ ಆದ ಚಿತ್ರವೇ ಆಗಿರಲಿ. ಸಾಮಾನ್ಯವಾಗಿ ಬೇಸರ ಬರುವ ತನಕ ನೋಡಿ ಮತ್ತೆ ಸುಮ್ಮನಾಗಬಹುದು. ಆದರೆ ನಂತರವೂ ಪದೇ ಪದೇ ಅದೇ ಸಿನಿಮಾವನ್ನು ಹಾಕಿದರೆ ನೋಡಿ ನೋಡಿ ನಮಗೆ ಏನನಿಸಬೇಡ ಹೇಳಿ! ಸಿನಿಮಾ ಕುರಿತು ಜಿಗುಪ್ಸೆಯೇ ಬರಬಹುದು.

ಇದೇ ರೀತಿ ಸಿನಿಮಾ ಒಂದನ್ನು ಟಿವಿ ಚಾನೆಲ್ ವೊಂದರಲ್ಲಿ ಪದೇ ಪದೇ ಪ್ರಸಾರ ಮಾಡಿದ್ದಕ್ಕೆ ಬೇಸರಗೊಂಡ ಅಭಿಮಾನಿ ಟಿವಿ ಚಾನೆಲ್  ಗೆ ಪತ್ರ ಬರೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಅಮಿತಾಭ್ ಬಚ್ಚನ್ ಅವರ ಸೂರ್ಯವಂಶಂ ಚಿತ್ರವನ್ನು ಟಿವಿ ಚಾನೆಲ್ ವೊಂದರಲ್ಲಿ ಪದೇ ಪದೇ ಪ್ರಸಾರ ಮಾಡಿದ್ದಕ್ಕೆ ಬೇಸರಗೊಂಡ ಅಭಿಮಾನಿ ಟಿವಿ ಚಾನೆಲ್ ಹೆಸರಲ್ಲಿ ಪತ್ರ ಬರೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಬಾಲಿವುಡ್ ನ ಬಿಗ್ ಬಿ ಖ್ಯಾತಿಯ ಅಮಿತಾಭ್ ಬಚ್ಚನ್ ಅವರ ಸೂರ್ಯವಂಶಂ ಚಿತ್ರವನ್ನು ಟಿವಿ ಚಾನೆಲ್ ವೊಂದರಲ್ಲಿ ಪದೇ ಪದೇ ಪ್ರಸಾರ ಮಾಡಿದ್ದಕ್ಕೆ ಬೇಸರಗೊಂಡ ಅಭಿಮಾನಿ ಟಿವಿ ಚಾನೆಲ್ ಹೆಸರಲ್ಲಿ ಪತ್ರ ಬರೆದಿರುವ ಘಟನೆ ನಡೆದಿದೆ. ಸೂರ್ಯವಂಶಂ ಸಿನಿಮಾ ಪ್ರಸಾರ ಹಕ್ಕು ಸದ್ಯ ಸೋನಿ ಮ್ಯಾಕ್ಸ್ ಬಳಿ ಇದೆ. ಈ ಕಾರಣಕ್ಕೆ ಹಲವು ಬಾರಿ ಈ ಚಿತ್ರವನ್ನು ಪ್ರಸಾರ ಮಾಡಲಾಗಿದೆ. ಈ ಸಿನಿಮಾವನ್ನು ಈಗಲೂ ನೋಡುವ ಅಭಿಮಾನಿಗಳಿದ್ದಾರೆ.

ನೋಡಿ ನೋಡಿ ಬೇಸತ್ತ ವ್ಯಕ್ತಿಯೊಬ್ಬ ಚಾನೆಲ್ಗೆ ಪತ್ರ ಬರೆದಿದ್ದು ‘ಸೂರ್ಯವಂಶಂ ಚಿತ್ರದ ಪ್ರಸಾರ ಹಕ್ಕು ನಿಮ್ಮ ಬಳಿ ಇದೆ. ನಿಮ್ಮ ಕೃಪೆಯಿಂದ ಹೀರಾ ಸಿಂಗ್ ಕುಟುಂಬದ ಬಗ್ಗೆ ತಿಳಿದುಕೊಂಡಿದ್ದೇವೆ. ನೀವು ಎಷ್ಟು ಬಾರಿ ಈ ಚಿತ್ರವನ್ನು ಟೆಲಿಕಾಸ್ಟ್ ಮಾಡಿದ್ದೀರಿ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಸೂರ್ಯವಂಶಂ ಸಿನಿಮಾವನ್ನು ಭವಿಷ್ಯದಲ್ಲಿ ಎಷ್ಟು ಬಾರಿ ಪ್ರಸಾರ ಮಾಡಬೇಕು ಎಂದುಕೊಂಡಿದ್ದೀರಿ ಎಂಬುದು ನನಗೆ ಗೊತ್ತಾಗಬೇಕಿದೆ’ ಎಂದು ಉಲ್ಲೇಖಿಸಿದ್ದಾನೆ. ಈ ಸಿನಿಮಾ ನಮ್ಮ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಿದರೆ ಇದಕ್ಕೆ ಯಾರು ಹೊಣೆ. ದಯವಿಟ್ಟು ತಿಳಿಸಿ ಎಂದು ವೀಕ್ಷಕನೋರ್ವ ಪ್ರಶ್ನೆ ಮಾಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT