ಹೇಮ ಮಾಲಿನಿ 
ಬಾಲಿವುಡ್

ಹೇಮ ಮಾಲಿನಿ@75: ಜೀವನದ ಅತ್ಯಂತ ಸುಂದರ ಕ್ಷಣಗಳು ಯಾವುದು ಎಂದ ಡ್ರೀಮ್ ಗರ್ಲ್....

"75ನೇ ವರ್ಷ ನನ್ನ ಪಾಲಿಗೆ ಬಹಳ ವಿಶೇಷ, ಪ್ರತಿ ವರ್ಷ ಮತ್ತೊಮ್ಮೆ ಬರುವುದಿಲ್ಲ" ಎನ್ನುತ್ತಾರೆ ಹಿರಿಯ ನಟಿ, ಸಂಸದೆ, ಡ್ರೀಮ್ ಗರ್ಲ್ ಹೇಮಮಾಲಿನಿ.

"75ನೇ ವರ್ಷ ನನ್ನ ಪಾಲಿಗೆ ಬಹಳ ವಿಶೇಷ, ಪ್ರತಿ ವರ್ಷ ಮತ್ತೊಮ್ಮೆ ಬರುವುದಿಲ್ಲ" ಎನ್ನುತ್ತಾರೆ ಹಿರಿಯ ನಟಿ, ಸಂಸದೆ, ಡ್ರೀಮ್ ಗರ್ಲ್ ಹೇಮಮಾಲಿನಿ.

ಬಾಲಿವುಡ್ ನಲ್ಲಿ ತಮ್ಮದೇ ಛಾಪು ಮೂಡಿಸಿದ ಪ್ರತಿಭಾವಂತೆ ಹೇಮಮಾಲಿನಿ ಇಂದು ಅಕ್ಟೋಬರ್ 16ಕ್ಕೆ 75 ವಸಂತಗಳನ್ನು ಪೂರೈಸಿ 76ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.ಇಂದಿಗೂ ಅವರು ತಮ್ಮ ನೆಚ್ಚಿನ ಭರತನಾಟ್ಯ ಡ್ಯಾನ್ಸ್ ಪ್ರದರ್ಶನ ನೀಡುತ್ತಾರೆ. ಮಥುರಾ ಕ್ಷೇತ್ರದ ಬಿಜೆಪಿ ಸಂಸದೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಅವರು ತಮ್ಮ ಜೀವನದ ಬಗ್ಗೆ ಮೆಲುಕು ಹಾಕುತ್ತಾ, ನಾನು ಇಷ್ಟು ವರ್ಷ ಕೆಲಸದಲ್ಲಿ ನಿರತನಾಗಿದ್ದೆ, ಸಮಯ ಎಲ್ಲಿ ಹೋಗಿದೆ ಎಂದು ಗೊತ್ತಾಗುವುದೇ ಇಲ್ಲ, ನನಗೆ ಇಂದು 75 ವರ್ಷ, ಅದನ್ನು ನನಗೇ ನಂಬಲು ಸಾಧ್ಯವಾಗುತ್ತಿಲ್ಲ! ಆದರೆ ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ. ನಿಮ್ಮನ್ನು ನೀವು ಹೇಗೆ ನೋಡಿಕೊಳ್ಳುತ್ತೀರಿ, ಹೇಗೆ ಕಾಣುತ್ತೀರಿ ಎಂಬುದರ ಮೇಲೆ ಜೀವನ ಅವಲಂಬಿತವಾಗಿರುತ್ತದೆ. ನನಗೆ ಸಿಗುವ ಕೆಲಸವನ್ನು ನಾನು ಮಾಡುತ್ತೇನೆ, ನನ್ನ ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಸಮಯ ಕಳೆಯುತ್ತೇನೆ. ಜೀವನವು ಸುಂದರವಾಗಿದೆ ಎಂದು ನಗುತ್ತಾರೆ.

ಪತಿ ಧರ್ಮೇಂದ್ರ, ಮಕ್ಕಳಾದ ಇಶಾ ಡಿಯೋಲ್, ಅಹನಾ ಡಿಯೋಲ್ ಜೊತೆ ಹೇಮ ಮಾಲಿನಿ(ಸಂಗ್ರಹ ಚಿತ್ರ)

ಈ ತಿಂಗಳಿಡೀ ಅವರು ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಮೊದಲು ತಮ್ಮ ಕ್ಷೇತ್ರವಾದ ಮಥುರಾದಲ್ಲಿ ಕೆಲವು ಪ್ರಮುಖರನ್ನು ಭೇಟಿ ಮಾಡಿದ್ದಾರೆ, ಸಾಮಾನ್ಯ ಜನರೊಂದಿಗೆ ಸಭೆ ನಡೆಸಿದ್ದಾರೆ. ನಂತರ ದೆಹಲಿಯಲ್ಲಿ ಮತ್ತೊಂದಕ್ಕೆ ತಮ್ಮ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ. ಮುಂಬೈನಲ್ಲಿ ಗಾಲಾ ಕಾರ್ಯಕ್ರಮ ನಡೆಯಲಿದೆ. 

"ನಾನು ಚಿತ್ರರಂಗಕ್ಕೆ ಬಂದು 75 ವರ್ಷಗಳು. ನಾನು ಕೆಲಸ ಮಾಡಿದ ಅದ್ಭುತ ವ್ಯಕ್ತಿಗಳಿಂದ ನನ್ನ ವೃತ್ತಿಜೀವನವು ತುಂಬಾ ಸುಂದರವಾಗಿತ್ತು, ನಿರ್ಮಾಪಕರು, ನಟರು, ತಂತ್ರಜ್ಞರು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಪ್ರತಿವರ್ಷ ಹುಟ್ಟುಹಬ್ಬ ವಿಭಿನ್ನವಾಗಿರುತ್ತದೆ. ಇತ್ತೀಚೆಗೆ ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯುತ್ತೇನೆ ಎಂದು ಶೋಲೆ, ಸೀತಾ ಔರ್ ಗೀತಾ ಮತ್ತು ಜಾನಿ ಮೇರಾ ನಾಮ್‌ನಂತಹ ಚಿತ್ರಗಳಲ್ಲಿ ನಟಿಸಿದ ಹೇಮಾ ಹೇಳುತ್ತಾರೆ.

ಅವರ ಪತಿ, ನಟ ಧರ್ಮೇಂದ್ರ ಅಮೆರಿಕದಿಂದ ಹಿಂತಿರುಗಿದ್ದಾರೆ. ನನ್ನ ಹುಟ್ಟುಹಬ್ಬವಿದೆಯೆಂದು ಅವರು ಸ್ವದೇಶಕ್ಕೆ ಮರಳಿದ್ದು, ಹುಟ್ಟುಹಬ್ಬ ಸಮಯದಲ್ಲಿ ಅವರು ನನ್ನ ಜೊತೆಗಿರುವುದೇ ನನಗೆ ದೊಡ್ಡ ಉಡುಗೊರೆ ಎಂದಿದ್ದಾರೆ. 

ಪತಿ ಧರ್ಮೇಂದ್ರ ಜೊತೆ ಹೇಮ ಮಾಲಿನಿ(ಸಂಗ್ರಹ ಚಿತ್ರ)

ಇಷ್ಟು ವರ್ಷಗಳಲ್ಲಿ ಅತ್ಯಂತ ಸುಂದರ ಕ್ಷಣಗಳು ಯಾವುದೆಂದು ಕೇಳಿದಾಗ, ನಾನು ಚಲನಚಿತ್ರಗಳಲ್ಲಿ ಕೆಲಸದಲ್ಲಿ ನಿರತನಾಗಿದ್ದಾಗ. 1975 ರಿಂದ 1985 ರವರೆಗೆ, ನಾನು ಚಲನಚಿತ್ರಗಳಲ್ಲಿ ತುಂಬಾ ಬ್ಯುಸಿಯಾಗಿದ್ದೆ. ಶೋಲೆಯಂತಹ ಚಿತ್ರಗಳಲ್ಲಿ ಬಿಡುವಿಲ್ಲದೆ ನಿರಂತರವಾಗಿ ಕೆಲಸ ಮಾಡುತ್ತಿದ್ದೆ. ಒಂದು ದಿನ ಅಫ್ಘಾನಿಸ್ತಾನಕ್ಕೆ, ಮತ್ತೊಂದು ದಿನ ರಷ್ಯಾಕ್ಕೆ, ಇನ್ನೊಂದು ಸಮಯದಲ್ಲಿ ನಾಸಿಕ್ ನಲ್ಲಿ ಹೀಗೆ ಚಿತ್ರೀಕರಣಕ್ಕೆ ಹೋಗುತ್ತಿದ್ದೆ. ನಾನು ನನ್ನ ವೈಯಕ್ತಿಕ ಜೀವನದಲ್ಲೂ ಹಲವಾರು ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದೇನೆ ಎನ್ನುತ್ತಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿ.26ರಿಂದ ರೈಲ್ವೆ ಪ್ರಯಾಣ ದರ ಏರಿಕೆ; 500 ಕಿ.ಮೀವರೆಗಿನ ಪ್ರಯಾಣಕ್ಕೆ ನಾನ್ ಎಸಿ ರೈಲುಗಳಲ್ಲಿ 10 ರೂ. ಹೆಚ್ಚಳ!

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ನೇತೃತ್ವದ ಮಹಾಯುತಿ ಮ್ಯಾಜಿಕ್; ಅಘಾಡಿ ಗಾಡಿ ಪಂಕ್ಚರ್!

Pakistan: 17 ವರ್ಷ ಜೈಲು ಶಿಕ್ಷೆ ಹಿನ್ನೆಲೆ, ದೇಶಾದ್ಯಂತ ಬೀದಿಗಿಳಿದು ಹೋರಾಟಕ್ಕೆ ಸಜ್ಜಾಗಿ, ಇಮ್ರಾನ್ ಖಾನ್ ಕರೆ!

ಬೆಂಗಳೂರು: ರಾಷ್ಟ್ರೀಯ 'ಪಲ್ಸ್ ಪೋಲಿಯೊ ಲಸಿಕಾ' ಅಭಿಯಾನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ರಾಜ್ಯದಲ್ಲಿ 'ಸೀಸನಲ್ ಫ್ಲೂ' ಹೆಚ್ಚಳ ಹಿನ್ನೆಲೆ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ!

SCROLL FOR NEXT