ದೀಪಿಕಾ-ರಣವೀರ್ ಮದುವೆ ಫೋಟೋಗಳು 
ಬಾಲಿವುಡ್

ವಿವಾಹವಾದ 5 ವರ್ಷ ಬಳಿಕ ವಿಡಿಯೊ ಬಿಡುಗಡೆ ಮಾಡಿದ ರಣವೀರ್-ದೀಪಿಕಾ: ಇಲ್ಲಿದೆ ಸ್ಟಾರ್ ಜೋಡಿಯ ಮದುವೆ ವಿಡಿಯೊ ತುಣುಕು

ಬಾಲಿವುಡ್ ನ ಸ್ಟಾರ್ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2018 ರ ನವೆಂಬರ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ ಮದುವೆಯಾದ ಐದು ವರ್ಷಗಳ ನಂತರ ಇದೀಗ ದೀಪಿಕಾ ಮತ್ತು ರಣವೀರ್ ತಮ್ಮ ಮದುವೆಯ ವಿಡಿಯೋವನ್ನು ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಕಾಫಿ ವಿತ್ ಕರಣ್ ಶೋನಲ್ಲಿ ಬಿಡುಗಡೆ ಮಾಡಿದ್ದಾರೆ. 

ಮುಂಬೈ: ಬಾಲಿವುಡ್ ನ ಸ್ಟಾರ್ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2018 ರ ನವೆಂಬರ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ ಮದುವೆಯಾದ ಐದು ವರ್ಷಗಳ ನಂತರ ಇದೀಗ ದೀಪಿಕಾ ಮತ್ತು ರಣವೀರ್ ತಮ್ಮ ಮದುವೆಯ ವಿಡಿಯೋವನ್ನು ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಕಾಫಿ ವಿತ್ ಕರಣ್ ಶೋನಲ್ಲಿ ಬಿಡುಗಡೆ ಮಾಡಿದ್ದಾರೆ. 

ಕರಣ್ ಜೋಹರ್ ತಮ್ಮ ಸೆಲೆಬ್ರಿಟಿ ಚಾಟ್ ಶೋ 8 ನೇ ಸೀಸನ್‌ನೊಂದಿಗೆ ಮತ್ತೆ ಮರಳಿದ್ದು, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಕಾಫಿ ವಿಥ್ ಕರಣ್ ಶೋನಲ್ಲಿ ಭಾಗವಹಿಸಿದ್ದಾರೆ. ಹೊಸ ಸೀಸನ್​​​ನಲ್ಲಿ ಅವರ ಮೊದಲ ಅತಿಥಿಗಳು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ.

ರಣವೀರ್ ಮತ್ತು ದೀಪಿಕಾ, ಅಭಿಮಾನಿಗಳು ಮತ್ತು ಕರಣ್​​​​​​ಗೆ ತಮ್ಮ ಮದುವೆಯ ಸೆಲೆಬ್ರೇಷನ್ ವಿಡಿಯೋ ತೋರಿಸಿದರು. ವಿಡಿಯೋದಲ್ಲಿ ನಿಶ್ಚಿತಾರ್ಥ, ಮೆಹೆಂದಿ, ಆನಂದ್​​​ ಕರಜ್ ಮತ್ತು ಮಂಟಪ ಸೇರಿದಂತೆ ಹಲವು ಆಚರಣೆಗಳನ್ನು ನೋಡಬಹುದು.

ದೀಪಿಕಾಗೆ ಪ್ರಪೋಸ್ ಮಾಡಿದ ರಣವೀರ್: ರಣವೀರ್ ಸಿಂಗ್‌ ನಿಂದ ವಿಡಿಯೋ ಪ್ರಾರಂಭವಾಗುತ್ತದೆ. ಮಾಲ್ಡೀವ್ಸ್‌ನಲ್ಲಿ ದೀಪಿಕಾ ಪಡುಕೋಣೆಗೆ ಪ್ರಪೋಸ್ ಮಾಡಿದ್ದನ್ನು ರಣವೀರ್ ಸಿಂಗ್ ಹೇಳಿದ್ದಾರೆ. ಇದಾದ ನಂತರ ಇಬ್ಬರೂ ಕುಟುಂಬವನ್ನು ಭೇಟಿ ಮಾಡಿ ತಮ್ಮ ಎಂಗೇಜ್ ಬಗ್ಗೆ ಹೇಳಲು ಬೆಂಗಳೂರಿಗೆ ತೆರಳಿದರು. ಮಗಳ ಆಯ್ಕೆಯಿಂದ ದೀಪಿಕಾ ತಾಯಿಗೆ ಅಷ್ಟಾಗಿ ಸಂತೋಷವಾಗದಿದ್ದರೂ, ನಂತರ ರಣವೀರ್ ಅವರನ್ನು ಮೆಚ್ಚಿಸಿದ್ದರು.

ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ತಂದೆ ಹಾಗೂ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಕೂಡ ತಮ್ಮ ಅಳಿಯನನ್ನು ಹೊಗಳಿರುವುದು ಕಂಡುಬಂದಿದೆ. ಪ್ರಕಾಶ್ ಪಡುಕೋಣೆ, ಅಳಿಯ ತಮ್ಮ ಕುಟುಂಬಕ್ಕೆ ಜೀವ ತುಂಬಿದರು. ರಣವೀರ್ ಉತ್ಸಾಹಭರಿತ ವ್ಯಕ್ತಿ. ತನ್ನ ಕುಟುಂಬಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾನೆ ಎಂದು ಪ್ರಶಂಸಿಸಿದ್ದಾರೆ.

ಭಾವುಕರಾದ ದೀಪಿಕಾ: ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಅನೇಕ ಗಮನ ಸೆಳೆಯುವ ಕ್ಷಣಗಳೂ ಇಲ್ಲಿವೆ. ವಿಶೇಷವಾಗಿ ಮೆಹಂದಿ ಸಮಾರಂಭದಲ್ಲಿ ಆ ಸುಂದರವಾದ ಕ್ಷಣ ಕಂಡುಬಂದಿದೆ. ಸಮಾರಂಭದಲ್ಲಿ ರಣವೀರ್ ಡ್ಯಾನ್ಸ್ ಮಾಡಿದ್ದಾರೆ. ಇದೇ ವೇಳೆ ಭಾವುಕಳಾದ ದೀಪಿಕಾ ಕೂಡ ಮೆಹಂದಿ ಕಾರ್ಯಕ್ರಮದಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ಇಟಲಿಯಲ್ಲಿ ಮದುವೆಯಾದ ರಣವೀರ್ ಸಿಂಗ್ ಹಾಗೂ ದೀಪಿಕಾ ಬಳಿಕ ಬೆಂಗಳೂರು ಹಾಗೂ ಮುಂಬೈನಲ್ಲಿ ರಿಸೆಪ್ಷನ್ ಮಾಡಿಕೊಂಡಿದ್ದರು. ಇವರ ಮದುವೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಈಗ ವೃತ್ತಿಬದುಕಿನಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'Sheikh Hasinaರನ್ನು ಹಸ್ತಾಂತರಿಸಿ'; ಪ್ರಧಾನಿ ತಾರಿಕ್ ರಹಮಾನ್ ಭೇಟಿಗೂ ಮುನ್ನ ಭಾರತಕ್ಕೆ ಬಾಂಗ್ಲಾದೇಶ ಷರತ್ತು!

ಕಾಂಗ್ರೆಸ್‌ಗೆ ರಾಷ್ಟ್ರಗೀತೆ ‘ವಂದೇ ಮಾತರಂ’ ಬಗ್ಗೆ ತೀವ್ರ ಅಸಹನೆ, ಅಗೌರವ: Manoj Tiwari

ಉತ್ತರ ಪ್ರದೇಶ: 19 ವರ್ಷದ ಯುವತಿಯ ಮೇಲೆ ಸ್ನೇಹಿತ, ಸಹಚರರಿಂದ ಸಾಮೂಹಿಕ ಅತ್ಯಾಚಾರ, 3 ಯುವಕರ ಬಂಧನ

ನನ್ನನ್ನು ಕಾಫಿರ್ ಅಂತೀರಾ?.. ದ್ವೇಷ ಬೆಳಸಿಕೊಂಡು ಅಲ್ಲಾನ ಹುಡುಕಿದರೇ ಸಿಗಲ್ಲ: ಮತಾಂದರರ ವಿರುದ್ಧ ನಟಿ ಫರಿಯಾ ಅಬ್ದುಲ್ಲಾ ಕಿಡಿ, Video

Shocking: ವಾರಾಣಾಸಿ ಏರ್‌ಪೋರ್ಟ್‌ನಲ್ಲಿ ಆಕಸ್ಮಿಕ ಗುಂಡಿನ 'ದಾಳಿ': ಭದ್ರತಾ ಸಿಬ್ಬಂದಿ ಸೇರಿ ಇಬ್ಬರಿಗೆ ಗಾಯ