ವಿಕ್ರಾಂತ್ ಮಾಸ್ಸೆ 
ಬಾಲಿವುಡ್

ಬಾಲಿವುಡ್ ನಟ ವಿಕ್ರಾಂತ್ ಮಾಸ್ಸೆ ನಟನೆಗೆ ದಿಢೀರ್ ವಿದಾಯ!

2025ರಲ್ಲಿ ಕೊನೆಯದಾಗಿ ತಮ್ಮ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ವಿಕ್ರಾಂತ್ ಸದ್ಯ ಯಾರ್ ಜಿಗ್ರಿ ಮತ್ತು ಆಂಖೋನ್ ಕಿ ಗುಸ್ತಾಖಿಯಾನ್ ಚಿತ್ರಗಳ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ.

‘ದಿ ಸಾಬರಮತಿ ರಿಪೋರ್ಟ್’ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸೌಂಡ್ ಮಾಡುತ್ತಿರುವಂತೆಯೇ , ಚಿತ್ರದ ನಾಯಕ ವಿಕ್ರಾಂತ್ ಮಾಸ್ಸೆ ದಿಢೀರ್ ನಟನೆಗೆ ವಿದಾಯ ಹೇಳುವ ಮೂಲಕ ಅಭಿಮಾನಿಗಳಲ್ಲಿ ಆಘಾತ ಮೂಡಿಸಿದ್ದಾರೆ.

ಈ ಕುರಿತು Instagram ನಲ್ಲಿ ಫೋಸ್ಟ್ ಮಾಡಿರುವ ವಿಕ್ರಾಂತ್ ಮಾಸ್ಸೆ, 2025ರಲ್ಲಿ ಕೊನೆಯದಾಗಿ ತಮ್ಮ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ವಿಕ್ರಾಂತ್ ಸದ್ಯ ಯಾರ್ ಜಿಗ್ರಿ ಮತ್ತು ಆಂಖೋನ್ ಕಿ ಗುಸ್ತಾಖಿಯಾನ್ ಚಿತ್ರಗಳ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.

ಹಲೋ, ಕಳೆದ ಕೆಲವು ವರ್ಷಗಳು ಅದ್ಭುತವಾಗಿದ್ದವು. ನಿಮ್ಮೆಲ್ಲರ ಬೆಂಬಲಕ್ಕಾಗಿ ನಾನು ಪ್ರತಿಯೊಬ್ಬರಿಗೂ ಧನ್ಯವಾದಗಳನ್ನ ತಿಳಿಸುತ್ತೇನೆ. ಈಗ ಮುಂದೆ ಹೆಜ್ಜೆ ಇಡುತ್ತಾ.. ಮನೆಗೆ ಹಿಂತಿರುಗಲು ಇದು ಸಮಯ ಎಂದು ನಾನು ಅರಿತುಕೊಂಡಿದ್ದೇನೆ. ಪತಿಯಾಗಿ, ತಂದೆ ಮತ್ತು ಮಗನಾಗಿ, ಮತ್ತು ನಟನಾಗಿಯೂ ಸಹ. ಆದ್ದರಿಂದ 2025 ರಲ್ಲಿ, ನಾವು ಕೊನೆಯ ಬಾರಿಗೆ ಪರಸ್ಪರ ಭೇಟಿಯಾಗುತ್ತೇವೆ. ಕಳೆದ 2 ಚಲನಚಿತ್ರಗಳು ಮತ್ತು ಹಲವು ವರ್ಷಗಳ ನೆನಪುಗಳು. ಮತ್ತೊಮ್ಮೆ ಧನ್ಯವಾದಗಳು. ಎಂದೆಂದಿಗೂ ಋಣಿ’’ ಎಂದು 12th fail ಮತ್ತು ಸೆಕ್ಟರ್ 36 ನಟ ಪೋಸ್ಟ್ ಹಾಕಿದ್ದಾರೆ.

ಧೂಮ್ ಮಚಾವೋ ಧೂಮ್ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ್ದ ವಿಕ್ರಾಂತ್ ಮಾಸ್ಸೆ, 2009 ರಲ್ಲಿ ಬಾಲಿಕಾ ವಧು ಮೂಲಕ ಖ್ಯಾತಿ ಪಡೆದಿದ್ದರು. ಕೊಂಕಣ ಸೇನ್ ಶರ್ಮಾ ನಿರ್ದೇಶನದ ಎ ಡೆತ್ ಇನ್ ದಿ ಗುಂಜ್‌ನಲ್ಲಿ ತಮ್ಮ ಅದ್ಬುತ ಪ್ರದರ್ಶನದಿಂದ ವೀಕ್ಷಕರ ಮನ ಸೆಳೆದಿದ್ದರು.

ಛಪಾಕ್, ರಾಮಪ್ರಸಾದ್ ಕಿ ತೆಹ್ರ್ವಿ, ಹಸೀನ್ ದಿಲ್ರುಬಾ, ಗ್ಯಾಸ್ಲೈಟ್ ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದಾರೆ. ಬ್ರೋಕನ್ ಬಟ್ ಬ್ಯೂಟಿಫುಲ್, ಕ್ರಿಮಿನಲ್ ಜಸ್ಟೀಸ್, ಮಿರ್ಜಾಪುರದಂತಹ ವೆಬ್ ಸರಣಿಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT