ಪ್ರಶಸ್ತಿ ಪಡೆದ ಶಂಕರ್ ಮಹಾದೇವನ್ ತಂಡ 
ಬಾಲಿವುಡ್

Grammy Awards 2024: ಶಂಕರ್‌ ಮಹದೇವನ್‌ ರ ಫ್ಯುಷನ್ ಬ್ಯಾಂಡ್ ಶಕ್ತಿ ತಂಡಕ್ಕೆ ಬೆಸ್ಟ್‌ ಗ್ಲೋಬಲ್ ಮ್ಯೂಸಿಕ್ ಆಲ್ಬಮ್ ಅವಾರ್ಡ್‌!

ಭಾರತದ ಖ್ಯಾತ ಗಾಯಕ ಶಂಕರ್‌ ಮಹದೇವನ್‌ ರ ತಂಡಕ್ಕೆ 2024ರ ಗ್ರ್ಯಾಮಿ ಪ್ರಶಸ್ತಿ ಲಭಿಸಿದ್ದು, ಫ್ಯುಷನ್ ಬ್ಯಾಂಡ್ ಶಕ್ತಿ ತಂಡಕ್ಕೆ ಬೆಸ್ಟ್‌ ಗ್ಲೋಬಲ್ ಮ್ಯೂಸಿಕ್ ಆಲ್ಬಮ್ ಅವಾರ್ಡ್‌ ಲಭಿಸಿದೆ.

ವಾಷಿಂಗ್ಟನ್: ಭಾರತದ ಖ್ಯಾತ ಗಾಯಕ ಶಂಕರ್‌ ಮಹದೇವನ್‌ ರ ತಂಡಕ್ಕೆ 2024ರ ಗ್ರ್ಯಾಮಿ ಪ್ರಶಸ್ತಿ ಲಭಿಸಿದ್ದು, ಫ್ಯುಷನ್ ಬ್ಯಾಂಡ್ ಶಕ್ತಿ ತಂಡಕ್ಕೆ ಬೆಸ್ಟ್‌ ಗ್ಲೋಬಲ್ ಮ್ಯೂಸಿಕ್ ಆಲ್ಬಮ್ ಅವಾರ್ಡ್‌ ಲಭಿಸಿದೆ.

ಗಾಯಕ ಶಂಕರ್ ಮಹದೇವನ್ ರ ಶಕ್ತಿ ಬ್ಯಾಂಡ್​ಗೆ ‘ಅತ್ಯುತ್ತಮ ಗ್ಲೋಬಲ್ ಮ್ಯೂಸಿಕ್ ಆಲ್ಬಂ’ ಪ್ರಶಸ್ತಿ ದೊರೆತಿದ್ದು, ಅಲ್ಲದೆ ಸಮಕಾಲೀನ ವಾದ್ಯಗಳ ಆಲ್ಬಮ್ ಹಾಗೂ ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್ ಕೆಟಗರಿಯಲ್ಲಿ ರಾಕೇಶ್ ಅವಾರ್ಡ್ ಪಡೆದಿದ್ದಾರೆ. ಈ ಮೊದಲು ರಿಕ್ಕಿ ಕೇಜ್ ಅವರನ್ನು ಸೇರಿಸಿ ಭಾರತದ ಅನೇಕರಿಗೆ ಈ ಪ್ರಶಸ್ತಿ ಸಿಕ್ಕಿತ್ತು.

ಭಾರತ ಮೂಲದ ಜಾಕಿರ್ ಹುಸೇನ್​ಗೆ (ಶಕ್ತಿ ಬ್ಯಾಂಡ್) ಒಂದು ಹಾಗೂ ಕೊಳಲು ವಾದಕ ರಾಕೇಶ್ ಚೌರಾಸಿಯಾ ಅವರಿಗೆ ಎರಡು ಅವಾರ್ಡ್ ಸಿಕ್ಕಿದೆ. ‘ಅತ್ಯುತ್ತಮ ಗ್ಲೋಬಲ್ ಮ್ಯೂಸಿಕ್ ಆಲ್ಬಂ’ ಪ್ರಶಸ್ತಿ ಶಕ್ತಿ ಬ್ಯಾಂಡ್​ಗೆ ದೊರೆತಿದೆ. ಸಮಕಾಲೀನ ವಾದ್ಯಗಳ ಆಲ್ಬಮ್ ಹಾಗೂ ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್ ಕೆಟಗರಿಯಲ್ಲಿ ರಾಕೇಶ್ ಅವಾರ್ಡ್ ಗೆದ್ದಿದ್ದಾರೆ. ಈ ಮೊದಲು ರಿಕ್ಕಿ ಕೇಜ್ ಅವರನ್ನು ಸೇರಿಸಿ ಭಾರತದ ಅನೇಕರಿಗೆ ಈ ಪ್ರಶಸ್ತಿ ಸಿಕ್ಕಿದೆ. ಫ್ಯೂಷನ್ ಬ್ಯಾಂಡ್ ಶಕ್ತಿಯಲ್ಲಿ ಗಾಯಕ ಶಂಕರ್ ಮಹಾದೇವನ್, ಜಾನ್ ಮೆಕ್‌ಲಾಲಿನ್, ತಾಳವಾದ್ಯ ವಾದಕ ವಿ ಸೆಲ್ವಗಣೇಶ್, ಜಾಕಿರ್ ಹುಸೇನ್ ಮತ್ತು ಪಿಟೀಲು ವಾದಕ ಗಣೇಶ್ ರಾಜಗೋಪಾಲನ್ ತಂಡದಲ್ಲಿದ್ದಾರೆ.

ಪ್ರಶಸ್ತಿ ರೇಸ್ ನಲ್ಲಿ ದಿಗ್ಗಜರು
ಇನ್ನು ಅತ್ಯುತ್ತಮ ಜಾಗತಿಕ ಸಂಗೀತ ಆಲ್ಬಮ್‌ ನ ಪ್ರಶಸ್ತಿ ರೇಸ್ ನಲ್ಲಿ  ಹಲವು ದಿಗ್ಗಜ ತಂಡಗಳಿದ್ದವು. 'ಎಪಿಫಾನಿಯಾಸ್' (ಸುಸಾನಾ ಬಾಕಾ), 'ಹಿಸ್ಟರಿ' (ಬೊಕಾಂಟೆ), 'ಐ ಟೋಲ್ಡ್ ದೆಮ್' (ಬರ್ನಾ ಬಾಯ್) ಮತ್ತು 'ಟೈಮ್‌ಲೆಸ್' (ಡೇವಿಡೋ) ತಂಡಗಳು ನಾಮ ನಿರ್ದೇಶನಗೊಂಡಿದ್ದವು. ಅಂತಿಮವಾದಿ ಶಂಕರ್ ಮಹಾದೇವನ್, ಝಾಕಿರ್ ಹುಸೇನ್ ಮತ್ತು ರಾಕೇಶ್ ಚೌರಾಸಿಯಾರ ಫ್ಯೂಷನ್ ಬ್ಯಾಂಡ್ ಶಕ್ತಿಗೆ ಪ್ರಶಸ್ತಿ ಲಭಿಸಿದೆ.

ಟೇಲರ್ ಸ್ವಿಫ್ಟ್ ಗೆ 13ನೇ ಗ್ರ್ಯಾಮಿ ಅವಾರ್ಡ್
ಗ್ಲೋಬಲ್ ಸೆನ್ಸೇಶನ್ ಎಂದೇ ಹೆಸರು ಮಾಡಿರುವ ಗಾಯಕಿ ಟೇಲರ್ ಸ್ವಿಫ್ಟ್ 13ನೇ ಗ್ರ್ಯಾಮಿ ಅವಾರ್ಡ್ ಅನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ ಬಾರ್ಬಿ ಚಿತ್ರದ ಬಿಲ್ಲಿ ಎಲಿಶ್ ಅವರ ‘ವಾಟ್ ವಾಸ್ ಐ ಮೇಡ್ ಫಾರ್? ಹಾಡನ್ನು ವರ್ಷದ ಅತ್ಯುನ್ನತ ಹಾಡು ಎಂದು ಘೋಷಿಸಲಾಯಿತು.

ಝಾಕಿರ್ ಹುಸೇನ್
ಝಾಕಿರ್ ಹುಸೇನ್ ತಬಲಾ ವಾದನಕ್ಕೆ ಅನೇಕರು ಮರುಳಾಗಿದ್ದಾರೆ. ಸಂಗೀತ ಲೋಕಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದ್ದು. 2008ರಲ್ಲಿ ಝಾಕಿರ್ ಹುಸೇನ್ ಗ್ರ್ಯಾಮಿ ಗೆದ್ದರು. ‘ಗ್ಲೋಬಲ್ ಡ್ರಂ ಪ್ರಾಜೆಕ್ಟ್​’ಗೆ ಈ ಪ್ರಶಸ್ತಿ ದೊರೆತಿತ್ತು. ಈ ಬಾರಿ ಅವರು ಮತ್ತೆ ಅವಾರ್ಡ್ ಗೆದ್ದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT