ಸಿನಿಮಾ ನಿರ್ದೇಶಕ ರಾಜ್ ಕುಮಾರ್ ಸಂತೋಷಿ
ಸಿನಿಮಾ ನಿರ್ದೇಶಕ ರಾಜ್ ಕುಮಾರ್ ಸಂತೋಷಿ PTI
ಬಾಲಿವುಡ್

ಚೆಕ್ ಬೌನ್ಸ್ ಪ್ರಕರಣ: ಸಿನಿಮಾ ನಿರ್ದೇಶಕ ರಾಜ್ ಕುಮಾರ್ ಸಂತೋಷಿಗೆ 2 ವರ್ಷಗಳ ಜೈಲು ಶಿಕ್ಷೆ

Srinivas Rao BV

ಚಿತ್ರ ನಿರ್ದೇಶಕ ರಾಜ್ ಕುಮಾರ್ ಸಂತೋಷಿಗೆ ಚೆಕ್ ಪ್ರಕರಣದಲ್ಲಿ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಲಾಹೋರ್ 1947 ರಾಜ್ ಕುಮಾರ್ ಸಂತೋಷಿ ಅವರ ಮುಂದಿನ ಚಿತ್ರವಾಗಿದ್ದು, ಸನ್ನಿ ಡಿಯೋಲ್, ಪ್ರೀತಿ ಝಿಂಟಾ ಮುಖ್ಯಭೂಮಿಕೆಯಲ್ಲಿದ್ದಾರೆ.

ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್ ಕುಮಾರ್ ಸಂತೋಷಿಗೆ ಜಾಮ್ ನಗರ್ ಕೋರ್ಟ್ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಪ್ರಮುಖ ಕೈಗಾರಿಕೋದ್ಯಮಿ ಅಶೋಕ್ ಲಾಲ್ ತಾವು ಚಿತ್ರ ನಿರ್ದೇಶಕನಿಂದ ತಲಾ 10 ಲಕ್ಷ ರೂಪಾಯಿ ಮೌಲ್ಯದ 10 ಚೆಕ್ ಗಳನ್ನು ಪಡೆದಿದ್ದೇನೆ ಅದು ಆ ನಂತದಲ್ಲಿ ಬೌನ್ಸ್ ಆಗಿತ್ತು ಎಂದು ಆರೋಪಿಸಿದ್ದರು.

ಪ್ರಕರಣದಲ್ಲಿ ಉದ್ಯಮಿಯ ಪರ ವಕೀಲರಾದ ಪೀಯೂಷ್ ಭೋಜನಿ ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್ ಕುಮಾರ್ ಸಂತೋಷಿಗೆ ಜೈಲು ಶಿಕ್ಷೆಯಾಗಿರುವುದನ್ನು ದೃಢಪಡಿಸಿದ್ದಾರೆ. ಲಾಲ್ ಅವರು ರಾಜ್ ಕುಮಾರ್ ಸಂತೋಷಿ ಅವರ ಸಿನಿಮಾಗೆ ಸಾಲ ನೀಡಿದ್ದರು. ಅದನ್ನು ವಾಪಸ್ ನೀಡುವುದಕ್ಕಾಗಿ 10 ಲಕ್ಷ ರೂ ಗಳ 10 ಚೆಕ್ ಗಳನ್ನು ಸಂತೋಷಿ ಉದ್ಯಮಿಗೆ ನೀಡಿದ್ದರು.

ಜೈಲು ಶಿಕ್ಷೆಯ ಜೊತೆಗೆ ಉದ್ಯಮಿಗೆ ನೀಡಬೇಕಿದ್ದ ಹಣದ ದುಪ್ಪಟ್ಟು ಹಣವನ್ನು ನೀಡುವಂತೆ ಸಂತೋಷಿಗೆ ಕೋರ್ಟ್ ಆದೇಶಿಸಿದೆ.

SCROLL FOR NEXT