ಮುಂಬೈ: ವಿಶಿಷ್ಟವಾದ ಮತ್ತು ಪ್ರಚೋದಕ ಬಟ್ಟೆಗಳಿಂದಲೇ ಖ್ಯಾತಿಗಳಿಸಿರುವ ಖ್ಯಾತ ವಿವಾದಿತ ರೂಪದರ್ಶಿ ಉರ್ಫಿ ಜಾವೆದ್ ಮೊದಲ ಬಾರಿಗೆ ತಮ್ಮ ಬಟ್ಟೆಯಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು.. Met Gala Fashion Showಗೆ ದಿನಗಣನೆ ಆರಂಭವಾಗಿರುವಂತೆಯೇ ಈ ಪ್ರಖ್ಯಾತ ಶೋಗೆ ಭರ್ಜರಿ ಸಿದ್ಧತೆ ನಡೆಸಿರುವ ಬಾಲಿವುಡ್ ನಟಿ-ರೂಪದರ್ಶಿ ಉರ್ಫಿ ಜಾವೆದ್ ತಮ್ಮ ವಿಶಿಷ್ಠ ಗೌನ್ ಮೂಲಕ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ.
ಈ ಹಿಂದೆ ಹಲವು ಬಾರಿ ಪ್ರಚೋದಕ ಬಟ್ಟೆಗಳ ಮೂಲಕ ವಿವಾದಕ್ಕೀಡಾಗುತ್ತಿದ್ದ ಉರ್ಫಿ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಉರ್ಫಿ ಈ ಸಲ 3D ಫ್ಲವರ್ ಗೌನ್ ಧರಿಸಿದ್ದು, ಇದರಲ್ಲಿರುವ ಮ್ಯಾಜಿಕಲ್ ಬಟರ್‌ಫ್ಲೈ, ಪ್ಲವರ್ ಥೀಮ್ ಗೌನ್ ಎಲ್ಲರರ ಗಮನ ಸೆಳೆಯುತ್ತಿದೆ. ಈ ವಿಶಿಷ್ಠ ಗೌನ್ ತೊಟ್ಟ ಉರ್ಫಿ ಚಪ್ಪಾಳೆ ತಟ್ಟುವಾಗ ಉಡುಪಿನಿಂದ ಚಿಟ್ಟೆಗಳು ಹಾರಿಹೋಗುತ್ತವೆ. ಉರ್ಫಿ ಧರಿಸಿರುವ ಬ್ಲ್ಯಾಕ್ ಗೌನ್ ಮೇಲಿರುವ ಎಲೆ, ಹೂಗಳು ತನ್ನಷ್ಟಕ್ಕೆ ಅರಳಿಕೊಳ್ಳುತ್ತವೆ. ಒಂದಿಷ್ಟು ಡಿಸೈನ್ಸ್ ನಟಿಯ ಸುತ್ತ ಬೀಳುತ್ತವೆ. ಅವು ಹೂ ಮತ್ತು ಚಿಟ್ಟೆಯಾಕಾರದಲ್ಲಿ ಕಂಡುಬಂದಿದ್ದು ಅದ್ಭುತ ಗಾರ್ಡನ್ ಥೀಮ್ ಡ್ರೆಸ್ನಂತೆ ಭಾಸವಾಗುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಡ್ರೆಸ್‌ನಲ್ಲಿರುವವಿಡಿಯೊವನ್ನು ಹಂಚಿಕೊಂಡ ಉರ್ಫಿ, “ಮ್ಯಾಜಿಕ್ʼʼ ಎಂದು ಬರೆದಿದ್ದಾರೆ.
ಮೊದಲ ಬಾರಿಗೆ ಬಾಲಿವುಡ್ ನಟಿಯರಿಂದ ಉರ್ಫಿಗೆ ಮೆಚ್ಚುಗೆ
ಇನ್ನು ಉರ್ಫಿ ಜಾವೆದ್ ಈ ವಿಶಿಷ್ಠ ಉಡುಪಿಗೆ ಹಲವು ಬಾಲಿವುಡ್ ನಟಿಯರು ಮೆಚ್ಟುಗೆ ಸೂಚಿಸಿದ್ದು, ಉರ್ಫಿ ವಿಡಿಯೊಗೆ ಪ್ರತಿಕ್ರಿಯಿಸಿದ ಕುಶಾ ಕಪಿಲಾ, “ರಾಣಿ ರೀತಿ ಕಾಣುತ್ತಿದ್ದೀರಾ” ಎಂದು ಬರೆದಿದ್ದಾರೆ. ಅಂತೆಯೇ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ “ಸುಂದರವಾಗಿದೆ ಉರ್ಫಿ”ಎಂದು ಬರೆದುಕೊಂಡಿದ್ದಾರೆ. ಮತ್ತೆ ಕೆಲ ಅಭಿಮಾನಿಗಳು ಉರ್ಫಿಯನ್ನು ಮೆಟ್ ಗಾಲಾ 2024ರಲ್ಲಿ ನೋಡಲು ಬಯಸುತ್ತಿರುವುದಾಗಿ ಹೇಳಿದ್ದಾರೆ.
ಬಾಲಿವುಡ್‌ಗೆ ಪದಾರ್ಪಣೆ
ಇದರ ಜತೆಗೆ ಉರ್ಫಿ ಜಾವೇದ್ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದರು. ಏಪ್ರಿಲ್ 19ರಂದು ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ದಿವಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದರು.