ಬಾಲಿವುಡ್

All Eyes on Palestine: ಪ್ಯಾಲೆಸ್ತೀನ್ ಅಟ್ಯಾಕ್ ಖಂಡಿಸಿದ್ದ ಬಾಲಿವುಡಿಗರು ಇದೀಗ ಪಹಲ್ಗಾಮ್ ಉಗ್ರ ದಾಳಿ ಬಗ್ಗೆ ಏನಂದ್ರು....!

ಏಪ್ರಿಲ್ 22ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 28 ಜನರು ಸಾವನ್ನಪ್ಪಿದ್ದರು. ಈ ದಾಳಿಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಇದರಲ್ಲಿ ಜನರ ಸಾವಿನ ಬಗ್ಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ದುಃಖ ವ್ಯಕ್ತಪಡಿಸಿದರು.

ಏಪ್ರಿಲ್ 22ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 28 ಜನರು ಸಾವನ್ನಪ್ಪಿದ್ದರು. ಈ ದಾಳಿಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಇದರಲ್ಲಿ ಜನರ ಸಾವಿನ ಬಗ್ಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ದುಃಖ ವ್ಯಕ್ತಪಡಿಸಿದರು. ಈ ಪಟ್ಟಿಗೆ ಸಲ್ಮಾನ್ ಖಾನ್ ಕೂಡ ಸೇರ್ಪಡೆಗೊಂಡಿದ್ದಾರೆ. ಈ ಹೇಯ ಕೃತ್ಯದಲ್ಲಿ ಮುಗ್ಧ ಜನರನ್ನು ಗುರಿಯಾಗಿಸಿಕೊಂಡಿರುವುದನ್ನು ಅವರು ಖಂಡಿಸಿದರು.

ಅಕ್ಷಯ್ ಕುಮಾರ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಬರೆದಿದ್ದಾರೆ, "ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಕೇಳಿ ತುಂಬಾ ದುಃಖವಾಯಿತು. ಅಮಾಯಕ ಜನರ ಇಂತಹ ಹತ್ಯೆ ಮಾನವೀಯತೆಗೆ ಕಳಂಕ. ಮೃತರ ಕುಟುಂಬಗಳಿಗೆ ನನ್ನ ಸಂತಾಪ ಎಂದು ಬರೆದಿದ್ದಾರೆ.

ಸಲ್ಮಾನ್ ಖಾನ್

ಪಹಲ್ಗಾಮ್‌ನಲ್ಲಿ ನಡೆದ ಆಘಾತಕಾರಿ ಭಯೋತ್ಪಾದಕ ದಾಳಿಯನ್ನು ಸಲ್ಮಾನ್ ಖಾನ್ ಖಂಡಿಸಿದ್ದಾರೆ. ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲ್ಪಡುವ ಕಾಶ್ಮೀರವನ್ನು ನರಕವಾಗಿ ಪರಿವರ್ತಿಸಲಾಗುತ್ತಿದೆ ಎಂದು ಅವರು ಹೇಳಿದರು. ಪ್ರಾಣ ಕಳೆದುಕೊಂಡ ಅಮಾಯಕ ಜನರು. ಒಬ್ಬ ಅಮಾಯಕನನ್ನು ಕೊಲ್ಲುವುದು ಇಡೀ ವಿಶ್ವವನ್ನೇ ಕೊಂದಂತೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸೋನು ಸೂದ್

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಹೇಡಿತನದ ದಾಳಿ ಅತ್ಯಂತ ಖಂಡನೀಯ. ನಾಗರಿಕ ಸಮಾಜದಲ್ಲಿ ಭಯೋತ್ಪಾದನೆಗೆ ಸ್ಥಾನವಿರಬಾರದು. ಮೃತ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಓಂ ಸಾಯಿ ರಾಮ್ ಎಂದು ನಟ ಸೋನು ಸೂದ್ ಟ್ವೀಟ್ ಮಾಡಿದ್ದಾರೆ.

ಸಂಜಯ್ ದತ್ ಮತ್ತು ಮೋಹನ್ ಲಾಲ್ ಕಠಿಣ ಕ್ರಮಕ್ಕೆ ಒತ್ತಾಯ

ಉಗ್ರರು ನಮ್ಮ ಮುಗ್ಧ ನಾಗರಿಕರನ್ನು ಕ್ರೂರವಾಗಿ ಕೊಂದರು. ಇದು ಕ್ಷಮಿಸಲಾಗದು. ಈಗ ಪ್ರತಿಕ್ರಿಯಿಸುವ ಸಮಯ. ಈ ಭಯೋತ್ಪಾದಕರಿಗೆ ಅವರ ಜಾಗ ತೋರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ನಾನು ವಿನಂತಿಸುತ್ತೇನೆ ಎಂದು ಸಂಜಯ್ ದತ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. ದಕ್ಷಿಣದ ಹಿರಿಯ ನಟ ಮೋಹನ್ ಲಾಲ್ ಕೂಡ ತೀವ್ರ ಸಂತಾಪ ಸೂಚಿಸಿದ್ದಾರೆ. "ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳಿಗೆ ನನ್ನ ಸಂತಾಪಗಳು. ಇಂತಹ ಕ್ರೌರ್ಯ ಅಸಹನೀಯ. ಯಾವುದೇ ಉದ್ದೇಶವು ಮುಗ್ಧ ಜನರ ಜೀವ ತೆಗೆಯುವುದನ್ನು ಸಮರ್ಥಿಸಲು ಸಾಧ್ಯವಿಲ್ಲ. ಇಡೀ ರಾಷ್ಟ್ರವು ದುಃಖಿತ ಕುಟುಂಬಗಳೊಂದಿಗೆ ನಿಂತಿದೆ. ನಾವೆಲ್ಲರೂ ಪರಸ್ಪರ ಬೆಂಬಲಿಸೋಣ ಮತ್ತು ಶಾಂತಿಯ ಭರವಸೆಯನ್ನು ಜೀವಂತವಾಗಿಡೋಣ" ಎಂದು ಅವರು ಬರೆದಿದ್ದಾರೆ.

ರವೀನಾ ಟಂಡನ್

"ಓಂ ಶಾಂತಿ. ದುಃಖವನ್ನು ವ್ಯಕ್ತಪಡಿಸಲು ಪದಗಳಿಲ್ಲ. ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಲು ಮತ್ತು ನಿಜವಾದ ಶತ್ರುವನ್ನು ಗುರುತಿಸಲು ಈಗ ಸಮಯ" ಎಂದು ರವೀನಾ ಟಂಡನ್ ಬರೆದಿದ್ದಾರೆ.

ಕಮಲ್ ಹಾಸನ್

ದಕ್ಷಿಣ ಚಿತ್ರರಂಗದ ಹಿರಿಯ ನಟ ಕಮಲ್ ಹಾಸನ್ ಕೂಡ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರಿಗೆ ಶಕ್ತಿ ಮತ್ತು ಶೀಘ್ರ ಚೇತರಿಕೆ ಸಿಗಲಿ ಎಂದು ಹಾರೈಸುತ್ತೇನೆ. ಭಾರತವು ಒಗ್ಗಟ್ಟಾಗಿದ್ದು, ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ದೃಢನಿಶ್ಚಯ ಹೊಂದಿದೆ ಎಂದು ಅವರು ಬರೆದಿದ್ದಾರೆ.

ಆಲಿಯಾ ಭಟ್

ಪಹಲ್ಗಾಮ್‌ನಿಂದ ಬಂದ ಸುದ್ದಿ ಹೃದಯವಿದ್ರಾವಕವಾಗಿದೆ. ಅಮಾಯಕ ಜೀವಗಳು ಬಲಿಯಾಗಿವೆ. ಪ್ರವಾಸಿಗರು, ಕುಟುಂಬಗಳು, ಜನರು ಸೌಂದರ್ಯವನ್ನು ಹುಡುಕುತ್ತಿದ್ದರು. ಶಾಂತಿಯನ್ನು ಹುಡುಕುತ್ತಿದ್ದರು. ಆದರೆ ಈಗ ದುಃಖ ಮಾತ್ರ ಇದೆ. ಇಂತಹ ಘಟನೆಗಳು ಪ್ರತಿ ಬಾರಿ ಸಂಭವಿಸಿದಾಗ, ಅದು ನಮ್ಮ ಹಂಚಿಕೆಯ ಮಾನವೀಯತೆಯನ್ನು ಛಿದ್ರಗೊಳಿಸುತ್ತದೆ. ಆ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಬರೆದಿದ್ದಾರೆ.

ಶಾರುಖ್ ಖಾನ್

ಪಹಲ್ಗಾಮ್ ಉಗ್ರ ದಾಳಿ "ವಿಶ್ವಾಸಘಾತುಕ ಮತ್ತು ಅಮಾನವೀಯ ಹಿಂಸಾಚಾರ"ವನ್ನು ಖಂಡಿಸಿದ್ದಾರೆ. ಇಂತಹ ದುರಂತದ ಸಂದರ್ಭದಲ್ಲಿ ನ್ಯಾಯ ಮತ್ತು ಏಕತೆಗಾಗಿ ಒತ್ತಾಯಿಸಿದ್ದಾರೆ. "ಪಹಲ್ಗಾಮ್‌ನಲ್ಲಿ ನಡೆದಿರುವ ವಿಶ್ವಾಸಘಾತುಕ ಮತ್ತು ಅಮಾನವೀಯ ಹಿಂಸಾಚಾರದ ಬಗ್ಗೆ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಲು ಪದಗಳು ವಿಫಲವಾಗಿವೆ. ಇಂತಹ ಸಮಯದಲ್ಲಿ, ನಾವು ದೇವರ ಕಡೆಗೆ ತಿರುಗಿ ಬಳಲುತ್ತಿರುವ ಕುಟುಂಬಗಳಿಗಾಗಿ ಪ್ರಾರ್ಥನೆ ಸಲ್ಲಿಸಬಹುದು ಮತ್ತು ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಬಹುದು. ಒಂದು ರಾಷ್ಟ್ರವಾಗಿ ನಾವು ಒಗ್ಗಟ್ಟಿನಿಂದ, ಬಲವಾಗಿ ನಿಂತು ಈ ಘೋರ ಕೃತ್ಯಕ್ಕೆ ತಕ್ಕ ಶಾಸ್ತಿಯಾಗಲಿ ಎಂದು ಹಾರೈಸೋಣ ಶಾರುಖ್ ಖಾನ್ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯದುವೀರ್ ಒಡೆಯರ್ ರಿಂದ ಬನ್ನಿ ಮರಕ್ಕೆ ಶಮಿ ಪೂಜೆ: ಅರಮನೆ ದಸರಾ ಮುಕ್ತಾಯ

ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ: NCRB ವರದಿ

ಸ್ವದೇಶಿ-ಸ್ವಾವಲಂಬನೆಗೆ ಪರ್ಯಾಯವಿಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್

ಯಾರೂ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಬೇಡಿ, ಅದರಿಂದ ಪಕ್ಷಕ್ಕೆ ಡ್ಯಾಮೇಜ್: ಡಿ ಕೆ ಶಿವಕುಮಾರ್

1st Test: Mohammed Siraj ದಾಳಿಗೆ ಪತರುಗುಟ್ಟಿದ West Indies, ಭೋಜನ ವಿರಾಮದ ವೇಳೆಗೆ 90/5

SCROLL FOR NEXT