ಮುಂಬೈ: ಸೀತಾರಾಮಂ ಖ್ಯಾತಿಯ ನಟಿ ಮೃಣಾಲ್ ಠಾಕೂರ್ ತಮ್ಮ ಬಾಯ್ ಫ್ರೆಂಡ್ ಕುರಿತ ಊಹಾಪೋಹಗಳಿಗೆ ಕೊನೆಗೂ ಮೌನಮುರಿದ್ದು, ನಟ ಧನುಷ್ ಮತ್ತು ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಕುರಿತ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ಈ ಹಿಂದೆ ನಟ ಧನುಷ್ ಜೊತೆ ತಳುಕು ಹಾಕಿಕೊಂಡಿದ್ದ ನಟಿ ಮೃಣಾಲ್ ಠಾಕೂರ್ ಹೆಸರು ಬಳಿಕ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಜೊತೆ ಕೇಳಿಬಂದಿತ್ತು. ಕಳೆದ ಒಂದೆರಡು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರೂ ಡೀಪ್ ಲವ್ನಲ್ಲಿದ್ದಾರೆ, ಜೊತೆಯಾಗಿ ಸುತ್ತಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಮೃಣಾಲ್ ಠಾಕೂರ್ ತಮಿಳು ನಾಯಕ ಧನುಷ್ ಕೂಡ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಬಂದವು. ಆದರೆ ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಹೇಳುವ ಮೂಲಕ ಮೃಣಾಲ್ ವದಂತಿಗಳಿಗೆ ತೆರೆ ಎಳೆದಿದ್ದರು.
ಇದೀಗ ಈ ಎಲ್ಲ ಊಹಾಪೋಹಗಳಿಗೆ ನಟಿ ಮೃಣಾಲ್ ಠಾಕೂರ್ ತೆರೆ ಎಳೆದಿದ್ದು, ತಾನು ಯಾವುದೇ ಕ್ರಿಕೆಟಿಗ ಅಥವಾ ಯಾವುದೇ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊಂದನ್ನ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ತನ್ನ ತಾಯಿಯೊಂದಿಗೆ ನಗುತ್ತಿರುವಂತೆ ಕಂಡುಬರುವ ಮೃಣಾಲ್ ಠಾಕೂರ್, 'ಇಂತಹ ವಿಷಯಗಳನ್ನು ನೋಡಿದಾಗ ನಾನು ನಗುತ್ತೇನೆ. ವದಂತಿಗಳು ನನಗೆ ಉಚಿತ ಪಿಆರ್ ನೀಡುತ್ತವೆ. ನನಗೆ ಇಂತಹ ಫ್ರಿ ಪಬ್ಲಿಸಿಟಿ ಕೊಡುವ ವಿಷಯಗಳು ಇಷ್ಟವಾಗುತ್ತವೆ. ತಮ್ಮ ಸಂಬಂಧದ ಬಗ್ಗೆ ನೇರವಾಗಿ ಮಾತನಾಡದಿದ್ದರೂ, ಅವರು ತಮ್ಮ ಬಗ್ಗೆ ಬಂದ ವರದಿಗಳನ್ನು 'ಉಚಿತ ಪ್ರಚಾರ' ಎಂದು ನಟಿ ತಳ್ಳಿಹಾಕಿದ್ದಾರೆ.
ಅವರು ಮಾತಾಡ್ತಾರೆ, ನಾವು ನಗ್ತೀವಿ
ತಮ್ಮ ವಿರುದ್ಧದ ಆರೋಪಗಳಿಗೆ ನೇರವಾಗಿ ಪ್ರತಿಕ್ರಿಯಿಸದಿದ್ದರೂ, ತಾಯಿ ಹೆಡ್ ಮಸಾಜ್ ಮಾಡುವಾಗ ನಗುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಶ್ರೇಯಸ್ ಅಯ್ಯರ್ ಜೊತೆಗಿನ ವದಂತಿಯನ್ನು ಹಾಸ್ಯಮಯವಾಗಿ ತಳ್ಳಿಹಾಕಿದ್ದಾರೆ. "ಅವರು ಮಾತಾಡ್ತಾರೆ, ನಾವು ನಗ್ತೀವಿ" ಎಂದಿದ್ದಾರೆ.