ಮುಂಬೈ: ನಟ ವಿಕ್ಕಿ ಕೌಶಲ್ ಅಭಿನಯದ ಐತಿಹಾಸಿಕ ಆ್ಯಕ್ಷನ್ ಚಿತ್ರ 'ಛಾವಾ' ಬಿಡುಗಡೆಯಾದ ಮೊದಲ ದಿನವೇ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ಗಳಿಸಿದೆ ಎಂದು ಸಿನಿಮಾ ನಿರ್ಮಾಪಕರು ಶನಿವಾರ ತಿಳಿಸಿದ್ದಾರೆ.
ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರವನ್ನು ದಿನೇಶ್ ವಿಜನ್ ತಮ್ಮ ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ಅಕ್ಷಯ್ ಖನ್ನಾ ನಟಿಸಿರುವ ಈ ಚಿತ್ರ ಶುಕ್ರವಾರ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವು ಶಿವಾಜಿ ಸಾವಂತ್ ಅವರ ಪ್ರಸಿದ್ಧ ಕಾದಂಬರಿ “ಛಾವಾ” ವನ್ನು ಆಧರಿಸಿದೆ.
'ಛಾವಾ' ಚಿತ್ರ ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ 50 ಕೋಟಿ ರೂಪಾಯಿ ಗಳಿಸಿದೆ. "ಐತಿಹಾಸಿಕ ಹಿಂದಿ ಚಿತ್ರಕ್ಕೆ ಇದುವರೆಗಿನ ಅತಿದೊಡ್ಡ ಓಪನಿಂಗ್" ದಾಖಲೆಯನ್ನು ನಿರ್ಮಿಸಿದೆ ಎಂದು ನಿರ್ಮಾಣ ಸಂಸ್ಥೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ನಿರ್ಮಾಪಕರ ಪ್ರಕಾರ, ಚಿತ್ರವು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 33.1 ಕೋಟಿ ರೂ. ಗಳಿಸಿದೆ.