ಮುಂಬೈ: ನಟ ಸಲ್ಮಾನ್ ಖಾನ್ ರ ಬಹು ನಿರೀಕ್ಷಿತ ಆಕ್ಷನ್ ಚಿತ್ರ ತಮಿಳಿನ ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ ನಿರ್ದೇಶನದ ಸಿಕಂದರ್‌ನ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಸಿಕಂದರ್ ಚಿತ್ರದ ಮೂಲಕ ಸಲ್ಮಾನ್ ಖಾನ್ ಕಮ್ ಬ್ಯಾಕ್ ಮಾಡುವ ಉತ್ಸಾಹದಲ್ಲಿದ್ದಾರೆ.
ಆದರೆ ಇದೀಗ ಸಿಕಂದರ್ ಚಿತ್ರದಲ್ಲಿನ ಟೀಸರ್ ನಲ್ಲಿ ಈ ಮಧ್ಯೆ ಸಲ್ಮಾನ್ ಖಾನ್ ಟೀಸರ್ ನಲ್ಲಿ ಹೊಡೆದಿರುವ ಡೈಲಾಗ್ ಒಂದು ವೈರಲ್ ಆಗಿದೆ. ಹೌದು... ಸಲ್ಮಾನ್ ಖಾನ್ ತುಂಬಾ ಜನ ನನ್ನ ಹಿಂದೆ ಬಿದ್ದಿದ್ದಾರೆ ಎಂದು ಕೇಳಿದ್ದೇನೆ. ಆದರೆ ನಾನು ತಿರುಗಿ ಬೀಳುವವರೆಗೆ ಮಾತ್ರ ಎಂದು ಡೈಲಾಗ್ ಹೊಡೆದಿದ್ದಾರೆ. ಈ ಮೂಲಕ ರಿಯಲ್ ಆಗಿಯೂ ಎದುರಾಳಿಗಳಿಗೆ ಠಕ್ಕರ್ ಕೊಡುವಂತಿದೆ. ಈ ಡೈಲಾಗ್ ಇದೀಗ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
ನಟ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಇದೆ. ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಬಹಿರಂಗವಾಗಿಯೇ ನಾನು ಸಲ್ಮಾನ್ ಖಾನ್ ನನ್ನು ಹತ್ಯೆ ಮಾಡುತ್ತೇನೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಸಹ ನಡೆದಿತ್ತು. ಇದನ್ನು ಬಿಷ್ಣೋಯ್ ಗ್ಯಾಂಗ್ ಮಾಡಿದ್ದಾಗಿ ಹೇಳಿಕೊಂಡಿತ್ತು. ಹೀಗಾಗಿ ಬಿಗಿ ಭದ್ರತೆಯಲ್ಲಿ ಸಲ್ಮಾನ್ ಖಾನ್ ಓಡಾಡುವಂತಾಗಿದೆ.
ಇದರ ಮಧ್ಯೆಯೇ ಸಿಕಂದರ್ ಚಿತ್ರದ ಶೂಟಿಂಗ್ ಮುಗಿಸಿರುವ ಸಲ್ಮಾನ್ ಖಾನ್ ಇದೀಗ ಬಿರಡುಗಡೆಯಾಗಿರುವ ಟೀಸರ್ ನಲ್ಲಿ ತನ್ನನ್ನು ಹತ್ಯೆ ಮಾಡಲು ವೇಷಧರಿಸಿದ್ದ ವಿಲನ್ ಗಳನ್ನು ತೋರಿಸಿದ್ದು ಅವರನ್ನು ಭೀಕರವಾಗಿ ಹತ್ಯೆ ಮಾಡುವುದನ್ನು ಚಿತ್ರಿಸಿದ್ದಾರೆ. ಮುಖವಾಡ ಮತ್ತು ಕಿರೀಟವನ್ನು ಹೈಲೈಟ್ ಆಗಿ ತೋರಿಸಿದ್ದಾರೆ. ಅದರಲ್ಲಿ ಒಬ್ಬನ ತಲೆಯ ಮೇಲೆ ಜಿಂಕೆಯ ಕೊಂಬಿನಂತ ಕಿರೀಟವಿದೆ. ಇದು ಬಿಷ್ಣೋಯ್ ಸಮುದಾಯ ದೇವರಂತೆ ನಂಬುವ ಕೃಷ್ಣಮೃಗದ ಕೊಂಬಿಗೆ ಹೋಲುತ್ತಿದೆ. ಈ ಮೂಲಕ ಸಲ್ಮಾನ್ ಖಾನ್ ಲಾರೆನ್ಸ್ ಬಿಷ್ಣೋಯ್ ರನ್ನು ಬಹಿರಂಗವಾಗಿಯೇ ರೋಸ್ಟ್ ಮಾಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.