ಪೃಥ್ವಿರಾಜ್ ಸುಕುಮಾರನ್ 
ಬಾಲಿವುಡ್

'L2 ಎಂಪುರಾನ್' ವಿವಾದ: 'ಪೃಥ್ವಿರಾಜ್ ರಾಷ್ಟ್ರವಿರೋಧಿಗಳ ಧ್ವನಿ'- RSS ಮುಖವಾಣಿ

L2 ಎಂಪುರಾನ್ ಚಿತ್ರವು ವಿಶ್ವಾದ್ಯಂತ ಭಾರಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ದಾಖಲೆಗಳನ್ನು ಬರೆಯುತ್ತಿದೆ.

L2 ಎಂಪುರಾನ್ ಚಿತ್ರವು ವಿಶ್ವಾದ್ಯಂತ ಭಾರಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ದಾಖಲೆಗಳನ್ನು ಬರೆಯುತ್ತಿದ್ದರೇ ಇತ್ತ ನಟ-ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರನ್ನು ಗುರಿಯಾಗಿಸಿಕೊಂಡು RSS ಮುಖವಾಣಿ ಆರ್ಗನೈಸರ್ ದಾಳಿ ಮುಂದುವರಿಸಿದೆ.

ನಟ-ಚಲನಚಿತ್ರ ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ಎಂಪುರಾನ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಿಂದ ಉಂಟಾದ ತೊಂದರೆಗೆ ವಿಷಾದ ವ್ಯಕ್ತಪಡಿಸಿ ನಟ-ನಿರ್ದೇಶಕ ಮೋಹನ್ ಲಾಲ್ ಫೇಸ್‌ಬುಕ್ ಪೋಸ್ಟ್ ನಲ್ಲಿ ಬಹಿರಂಗವಾಗಿ ಕ್ಷಣೆಯಾಚಿಸಿದ್ದು ಆರ್ಗನೈಸರ್ ಒಪ್ಪಿಕೊಂಡಿದೆ. ವಿವಾದಕ್ಕೆ ಪ್ರತಿಕ್ರಿಯೆಯಾಗಿ 'ಎಂಪುರಾನ್' ಚಿತ್ರದ 17 ದೃಶ್ಯಗಳಿಗೆ ಕತ್ತರಿ ಪ್ರಯೋಗಕ್ಕೂ ಚಿತ್ರತಂಡ ಒಪ್ಪಿಕೊಂಡಿದೆ ಎಂದು ಕೂಡ ಆರ್ಗನೈಸರ್ ಹೇಳಿದೆ.

ಅಲ್ಲದೆ ಪೃಥ್ವಿರಾಜ್ ರಾಷ್ಟ್ರವಿರೋಧಿಗಳ ಧ್ವನಿಯಾಗಿದ್ದಾರೆ. ಇದು ಅವರು ಲಕ್ಷದ್ವೀಪವನ್ನು ಉಳಿಸಿ ಅಭಿಯಾನದ ಹಿಂದಿನ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು ಎಂಬ ಅಂಶದಿಂದ ಸ್ಪಷ್ಟವಾಗುತ್ತದೆ. ಈ ಅಭಿಯಾನವು ಕೇಂದ್ರ ಸರ್ಕಾರವು ದ್ವೀಪಗಳನ್ನು ಆಧುನೀಕರಿಸಲು ಪರಿಚಯಿಸಿದ ಪ್ರಗತಿಪರ ಕ್ರಮಗಳನ್ನು ವಿರೋಧಿಸುವ ಪ್ರಯತ್ನವಾಗಿದ್ದು, ಅವುಗಳನ್ನು ಕೋಮು ದೃಷ್ಟಿಕೋನದಿಂದ ಚಿತ್ರಿಸಲಾಗಿದೆ. ಪೃಥ್ವಿರಾಜ್ CAA ಆಂದೋಲನದ ಸಮಯದಲ್ಲಿಯೂ ಸಹ ಬಹಳ ಧ್ವನಿ ಎತ್ತಿದರು. CAA ಪ್ರತಿಭಟನೆಯ ಸಮಯದಲ್ಲಿ ಜಾಮಿಯಾ ವಿದ್ಯಾರ್ಥಿಗಳನ್ನು ಬೆಂಬಲಿಸಿದವರು ಎಂದು ಆರ್ಗನೈಸರ್ ದಾಳಿ ಮುಂದುವರಿಸಿದರು.

ಎಂಪುರಾನ್ ಚಿತ್ರವನ್ನು ಬಲಪಂಥೀಯರು "ಹಿಂದೂ ವಿರೋಧಿ" ಎಂದು ಗುರಿಯಾಗಿಸಿಕೊಂಡರು. ಆದರೆ ಎಡಪಂಥೀಯರ ಒಂದು ವರ್ಗವು ಸಂಘ ಪರಿವಾರದ ಒತ್ತಡದಿಂದಾಗಿ ಮೋಹನ್ ಲಾಲ್ ಕ್ಷಮೆಯಾಚಿಸಿದ್ದಾರೆ. ಇದು ಸರಿಯಲ್ಲ ಎಂದು ವಾದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!