ಶಿಲ್ಪಾ ಶಿರೋಧ್ಕರ್‌ 
ಬಾಲಿವುಡ್

ಮತ್ತೆ ಕೊರೊನಾವೈರಸ್ ಆತಂಕ; ಬಾಲಿವುಡ್ ನಟಿ ಶಿಲ್ಪಾ ಶಿರೋಧ್ಕರ್‌ಗೆ ಕೋವಿಡ್ ಪಾಸಿಟಿವ್!

ಸಿಂಗಾಪುರ ಮತ್ತು ಹಾಂಗ್ ಕಾಂಗ್ ಸೇರಿದಂತೆ ಹಲವಾರು ಏಷ್ಯಾದ ದೇಶಗಳಲ್ಲಿ ಇತ್ತೀಚಿನ ವಾರಗಳಲ್ಲಿ COVID-19 ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ.

ಮುಂಬೈ: ನಟಿ ಶಿಲ್ಪಾ ಶಿರೋಧ್ಕರ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ತಮಗೆ ಕೋವಿಡ್-19 ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ, 'ನಮಸ್ಕಾರ ಜನರೇ! ನನಗೆ ಕೋವಿಡ್ ಪಾಸಿಟಿವ್ ಬಂದಿದೆ. ಸುರಕ್ಷಿತವಾಗಿರಿ ಮತ್ತು ನೀವು ಮಾಸ್ಕ್ ಧರಿಸಿ!' ಶಿಲ್ಪಾ ಶಿರೋಧ್ಕರ್' ಎಂದು ಬರೆದಿರುವ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ. "ಸುರಕ್ಷಿತರಾಗಿರಿ" ಎಂದು ಶೀರ್ಷಿಕೆ ನೀಡಿದ್ದಾರೆ.

ಶಿಲ್ಪಾ ಶಿರೋಧ್ಕರ್ ಅವರ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಅಭಿಮಾನಿಗಳು, ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಜಾಗೃತಿ ಮೂಡಿಸಿದ್ದಕ್ಕಾಗಿ ಅನೇಕರು ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು ಇತರರು ತಮ್ಮ ದೈನಂದಿನ ಜೀವನದಲ್ಲಿ ಜಾಗರೂಕರಾಗಿರಲು ತಿಳಿಸಿದ್ದಾರೆ.

ಸಿಂಗಾಪುರ ಮತ್ತು ಹಾಂಗ್ ಕಾಂಗ್ ಸೇರಿದಂತೆ ಹಲವಾರು ಏಷ್ಯಾದ ದೇಶಗಳಲ್ಲಿ ಇತ್ತೀಚಿನ ವಾರಗಳಲ್ಲಿ COVID-19 ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಜನರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುವುದು ಮತ್ತು ಕಡಿಮೆ ಸಂಖ್ಯೆಯ ವೃದ್ಧರು ಬೂಸ್ಟರ್ ಡೋಸ್ ತೆಗೆದುಕೊಂಡಿರುವುದೇ ಈ ಏರಿಕೆಗೆ ಕಾರಣವಾಗಿರಬಹುದು ಎಂದು ಆರೋಗ್ಯ ಅಧಿಕಾರಿಗಳು ಸೂಚಿಸುತ್ತಾರೆ.

ವರದಿ ಪ್ರಕಾರ, ಸಿಂಗಾಪುರದಲ್ಲಿ ಕೋವಿಡ್ ಪ್ರಕರಣಗಳ ಏರಿಕೆ ಕಂಡುಬಂದಿದ್ದು, ಮೇ 3ರ ವೇಳೆಗೆ ಸುಮಾರು 14,200 ಪ್ರಕರಣಗಳು ದಾಖಲಾಗಿವೆ. ಹಿಂದಿನ ವರ್ಷ ಇದೇ ಅವಧಿಗೆ ಹೋಲಿಸಿದರೆ ಇದು ಶೇ 28 ರಷ್ಟು ಹೆಚ್ಚಳವಾಗಿದೆ. ಚೀನಾದಲ್ಲಿ, ಕಳೆದ ಬೇಸಿಗೆಯಲ್ಲಿ ಸೋಂಕಿನ ಸಂಖ್ಯೆಗಳು ಕಡಿಮೆಯಾಗಿದ್ದು, ಏಪ್ರಿಲ್‌ನಲ್ಲಿ ಸಾಂಗ್‌ಕ್ರಾನ್ ಹಬ್ಬದ ನಂತರ ಥೈಲ್ಯಾಂಡ್‌ನಲ್ಲಿ ಸೋಂಕು ಪ್ರಕರಣಗಳು ಏರಿಕೆಯಾಗಿವೆ.

ಶಿಲ್ಪಾ ಶಿರೋಧ್ಕರ್ ತಮ್ಮ ಮುಂದಿನ ಯೋಜನೆ 'ಜಟಾಧರ' ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಇದು ಸೋನಾಕ್ಷಿ ಸಿನ್ಹಾ ಅವರ ಚೊಚ್ಚಲ ತೆಲುಗು ಚಿತ್ರವಾಗಲಿದ್ದು, ಚಿತ್ರದಲ್ಲಿ ಸುಧೀರ್ ಬಾಬು, ರವಿ ಪ್ರಕಾಶ್, ದಿವ್ಯಾ ವಿಜ್ ಮತ್ತು ರೈನ್ ಅಂಜಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

'ಜಟಾಧರ' ಚಿತ್ರದ ಬಗ್ಗೆ ಮಾತನಾಡಿದ ಶಿಲ್ಪಾ, 'ಜಟಾಧರ ನನಗೆ ಒಂದು ಅವಾಸ್ತವಿಕ ಅನುಭವ. ನನ್ನ ಅನುಭವ ನಂಬಲಾಗದಷ್ಟು ಸಕಾರಾತ್ಮಕವಾಗಿದೆ ಮತ್ತು ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿ ತುಂಬಾ ಆತ್ಮೀಯರಾಗಿದ್ದಾರೆ. ಕ್ಯಾಮೆರಾ ಮುಂದೆ ನಿಂತು ಇಂತಹ ವಿಶಿಷ್ಟ ಪಾತ್ರವನ್ನು ನಿರ್ವಹಿಸುವುದು ನಿಜಕ್ಕೂ ಅದ್ಭುತವೆನಿಸುತ್ತದೆ' ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್ ವಿಜಯ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

450 ಕೋಟಿ ರೂ. ಮೌಲ್ಯದ ಧರ್ಮೇಂದ್ರ ಆಸ್ತಿ ಯಾರ ಪಾಲಾಗುತ್ತೆ? ಕುತೂಹಲ ಕೆರಳಿಸಿದ ಹೇಮಾ ಮಾಲಿನಿ ಪೋಸ್ಟ್!

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

SCROLL FOR NEXT