ಐಶ್ವರ್ಯಾ ರೈ 
ಬಾಲಿವುಡ್

Cannes 2025: ಹಣೆಗೆ ಸಿಂಧೂರ ಇಟ್ಟು ಐಶ್ವರ್ಯಾ ರೈ, ಆಪರೇಷನ್ ಸಿಂಧೂರಕ್ಕೆ ಗೌರವ ಸಲ್ಲಿಸಿದ್ರಾ?

ಮಲ್ಹೋತ್ರಾ ವಿನ್ಯಾಸಗೊಳಿಸಿದ ಮಿರಿ ಮಿರಿಯುವ ಸೀರೆಯೊಂದಿಗೆ ರೂಬಿ ಆಭರಣ ತೊಟ್ಟು ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ ಐಶ್ವರ್ಯಾ ರೈ ಬಚ್ಚನ್ ಹಣೆಗೆ ಧರಿಸಿದ ಸಿಂಧೂರ ಆಕರ್ಷಣೆಯಾಗಿತ್ತು.

ಮಾಜಿ ವಿಶ್ವ ಸುಂದರಿ, ನಟಿ ಮತ್ತು 20 ವರ್ಷಗಳಿಂದ ಕಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಪ್ರತಿನಿಧಿಸುತ್ತಿರುವ ಐಶ್ವರ್ಯಾ ರೈ ಬಚ್ಚನ್ ಮತ್ತೊಮ್ಮೆ ಗಾಲಾದ ಪ್ರತಿಷ್ಟಿತ ಚಲನಚಿತ್ರೋತ್ಸವದಲ್ಲಿ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ' ಐವರಿ ಸ್ಯಾರಿ' ಧರಿಸಿ, ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಆದರೆ, ಅವರು ಧರಿಸಿದ ಸಿಂಧೂರ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಭಾರಿ ಸುದ್ದಿಯಾಗ್ತಿದೆ.

ಹೌದು. ಮಲ್ಹೋತ್ರಾ ವಿನ್ಯಾಸಗೊಳಿಸಿದ ಮಿರಿ ಮಿರಿಯುವ ಸೀರೆಯೊಂದಿಗೆ ರೂಬಿ ಆಭರಣ ತೊಟ್ಟು ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ ಐಶ್ವರ್ಯಾ ರೈ ಬಚ್ಚನ್ ಹಣೆಗೆ ಧರಿಸಿದ ಸಿಂಧೂರ ಆಕರ್ಷಣೆಯಾಗಿತ್ತು. ಈ ಮೂಲಕ ಪಾಕಿಸ್ತಾನ ವಿರುದ್ಧದ ಇತ್ತೀಚಿನ ಸೇನಾ ಸಂಘರ್ಷದಲ್ಲಿ ಯಶಸ್ವಿಯಾದ ಭಾರತದ ಸೇನೆಗೆ ಅವರು ಸಲ್ಲಿಸಿದ ಗೌರವವೇ? ಎಂದು ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಫೋಸ್ಟ್ ಮಾಡುತ್ತಿದ್ದಾರೆ.

ಮತ್ತೆ ಕೆಲವರು ಇದು ಪತ್ನಿ ಅಭಿಷೇಕ್ ಬಚ್ಚನ್ ನಡುವಿನ ಧೀರ್ಘ ಮನಸ್ತಾಪ ವದಂತಿಗಳಿಗೆ ಸೈಲೆಂಟ್ ಆಗಿ ನೀಡಿದ ಉತ್ತರವೇ? ಎಂದು ಕೇಳುತ್ತಿದ್ದಾರೆ.

ಬುಧವಾರ ಸಂಜೆ ಕಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡ ಐಶ್ವರ್ಯಾ ರೈ ಬಚ್ಚನ್ ಅವರ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. 2003 ರಲ್ಲಿ ಮೊದಲ ಬಾರಿಗೆ ಕೇನ್ಸ್ ಜ್ಯೂರಿ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದ ಐಶ್ವರ್ಯ ರೈ, 2002 ರಿಂದಲೂ ನಿರಂತರವಾಗಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಐಶ್ವರ್ಯಾ ರೈ ಅವರ ಫೋಟೋವನ್ನು ಆಪರೇಷನ್ ಸಿಂಧೂರ ಗೆ ಹೋಲಿಸಿ ಮಾಡಿದ್ದ ಫೋಸ್ಟನ್ನು ಮಲ್ಹೋತ್ರಾ ಗುರುವಾರ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮರು ಹಂಚಿಕೊಂಡಿದ್ದಾರೆ.

ಐಶ್ವರ್ಯಾ ರೈ ಅವರ ವೈರಲ್ ಪೋಟೋ ಆಫರೇಷನ್ ಸಿಂಧೂರಗೆ ನೀಡಿದ ಮೌನ ಉತ್ತರ ಎಂದು ಅನೇಕರು ಹೇಳುತ್ತಿರುವುದಾಗಿ ಪತ್ರಕರ್ತೆ ಬರ್ಖಾ ದತ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದಾರೆ.

ಐಶ್ವರ್ಯಾ ರೈ ನಿಜವಾದ ದೇಶಭಕ್ತೆ, ಭಾರತೀಯ ನಾರಿ. ಆಕೆ ಕಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿಂಧೂರ ಧರಿಸಿರುವುದು ಆಪರೇಷನ್ ಸಿಂಧೂರ ಯಶಸ್ಸಿಗೆ ನೀಡಿದ ಸ್ಪಷ್ಟ ಗೌರವವಾಗಿದೆ ಎಂದು ಮತ್ತೋರ್ವ ಎಕ್ಸ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT