ಬಾಲಿವುಡ್ ನ ಜನಪ್ರಿಯ ಜೋಡಿ ಕತ್ರಿಕಾ ಕೈಫ್ ಮತ್ತು ವಿಕ್ಕಿ ಕೌಶಲ್(vicky Kaushal) ಜೀವನದಲ್ಲಿ ಇಂದು ಮಗುವಿನ ಆಗಮನವಾಗಿದೆ. ಈ ಸಂತೋಷದ ಸುದ್ದಿಯನ್ನು ಅವರು ಸೋಷಿಯಲ್ ಮೀಡಿಯಾ ಮೂಲಕ ಇಂದು ಹಂಚಿಕೊಂಡಿದ್ದಾರೆ.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್(Katrina Kaif) ತಮ್ಮ ಪುಟ್ಟ ಮಗುವಿನ ಆಗಮನವನ್ನು ಮುದ್ದಾದ ಪೋಸ್ಟ್ ಮೂಲಕ ಹಂಚಿಕೊಂಡಿದ್ದು, ನಮ್ಮ ಜೀವನದಲ್ಲಿ ಗಂಡು ಮಗುವಿನ ಜನನವಾಗಿದೆ ಎಂದು ತಿಳಿಸಿದ್ದಾರೆ.
ಸ್ಟಾರ್ ಜೋಡಿ ಖುಷಿಯನ್ನು ಹಂಚಿಕೊಳ್ಳುತ್ತಿದ್ದಂತೆ ಅನೇಕರು ದಂಪತಿಗೆ ಶುಭಾಶಯ ತಿಳಿಸಿದ್ದಾರೆ. ಕಳೆದ ಸೆಪ್ಟೆಂಬರ್ 23 ರಂದು ದಂಪತಿ ತಾವು ಪೋಷಕರಾಗುವುದಾಗಿ ಘೋಷಿಸಿದ್ದರು. ಕತ್ರಿನಾ ಮತ್ತು ವಿಕ್ಕಿ, ಡಿಸೆಂಬರ್ 2021 ರಲ್ಲಿ ರಾಜಸ್ಥಾನದಲ್ಲಿ ವಿವಾಹವಾಗಿದ್ದರು.
ವರ್ಷದ ಹಿಂದೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದ ಕತ್ರಿನಾ
ಕಳೆದ ಮಾರ್ಚ್ ತಿಂಗಳಲ್ಲಿ ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿ ಸರ್ಪ ಸಂಸ್ಕಾರ ಮಾಡಿಸಿಕೊಂಡಿದ್ದರು. ಸಂತಾನಕ್ಕೋಸ್ಕರ ಕತ್ರಿನಾ ಪೂಜೆ ಮಾಡಿಸಿದ್ದರು. 42 ವರ್ಷಕ್ಕೆ ಕತ್ರಿನಾ ಕೈಫ್ ಅವರು ಮಗುವಿಗೆ ಜನ್ಮ ನೀಡಿದ್ದಾರೆ. ಸರ್ಪದೋಷವಿದ್ದರೆ ಮಕ್ಕಳಾಗುವುದಿಲ್ಲ, ಚರ್ಮದ ಸಮಸ್ಯೆ ಬರುತ್ತದೆ ಎಂದು ಇದ್ದವರು ಕುಕ್ಕೆಗೆ ಭೇಟಿ ನೀಡಿ ಸರ್ಪ ಸಂಸ್ಕಾರ, ಹೋಮ, ಪೂಜೆ ಮಾಡಿಸುತ್ತಾರೆ.