ದೀಪಿಕಾ ಪಡುಕೋಣೆ 
ಬಾಲಿವುಡ್

'ಸೂಪರ್ ಸ್ಟಾರ್ ಗಳು 8 ಗಂಟೆ ಮಾತ್ರ ಕೆಲಸ ಮಾಡ್ತಾರೆ, ಅದರ ಬಗ್ಗೆ ಸುದ್ದಿನೇ ಇಲ್ಲ': ಕೊನೆಗೂ ಮೌನ ಮುರಿದ ದೀಪಿಕಾ ಪಡುಕೋಣೆ

ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ವೃತ್ತಿ ಜೀವನದ ಕಾರಣದಿಂದ ಇತ್ತೀಚೆಗೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು.

ಮುಂಬೈ: ದಕ್ಷಿಣ ಭಾರತದ ಎರಡು ಬಹು ನಿರೀಕ್ಷಿತ ಚಿತ್ರಗಳಿಂದ ತಮ್ಮನ್ನು ಕೈ ಬಿಟ್ಟ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಕೊನೆಗೂ ಮೌನ ಮುರಿದಿದ್ದಾರೆ.

ಹೌದು.. ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ವೃತ್ತಿ ಜೀವನದ ಕಾರಣದಿಂದ ಇತ್ತೀಚೆಗೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಮೊದಲು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಪ್ರಭಾಸ್ ಅಭಿನಯದ ಸ್ಪಿರಿಟ್ ಚಿತ್ರಕ್ಕೆ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದರು.

ಆದರೆ ಬಳಿಕ ಅವರನ್ನು ಚಿತ್ರದಿಂದ ಕೈ ಬಿಡಲಾಗಿತ್ತು. ದೀಪಿಕಾ ಅವರ ಕೆಲ ಷರತ್ತುಗಳು ಹಾಗೂ ಚಿತ್ರಕಥೆ ಸೋರಿಕೆ ಮಾಡಿದ ವಿಚಾರವಾಗಿ ಅಸಮಾಧಾನಗೊಂಡಿದ್ದ ಸಂದೀಪ್ ರೆಡ್ಡಿ ವಂಗಾ ಆಕೆಯನ್ನು ಚಿತ್ರತಂಡದಿಂದ ಕೈ ಬಿಟ್ಟಿರುವುದಾಗಿ ಘೋಷಿಸಿದ್ದರು.

ಈ ಘಟನೆ ಭಾರತೀಯ ಸಿನಿಮಾರಂಗದಲ್ಲೇ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಈ ಘಟನೆ ಬಳಿಕ ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಚಿತ್ರದ ಸೀಕ್ವೆಲ್ ಚಿತ್ರದಿಂದಲೂ ದೀಪಿಕಾ ಅವರನ್ನು ಕೈ ಬಿಡಲಾಗಿತ್ತು. ಕಲ್ಕಿ 2898 ಎಡಿ ಚಿತ್ರದ ಮೊದಲ ಅವತರಿಣಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ದೀಪಿಕಾ ಸೀಕ್ವೆಲ್ ಚಿತ್ರದಲ್ಲೂ ಮುಂದುವರೆಯುತ್ತಾರೆ ಎಂದು ಹೇಳಲಾಗಿತ್ತು. ಆದರೆ ಆ ಬಳಿಕ ನಡೆದ ವಿದ್ಯಮಾನಗಳಿಂದಾಗಿ ಅಲ್ಲಿಂದಲೂ ಅವರನ್ನು ಕೈ ಬಿಡಲಾಗಿತ್ತು.

ದೀಪಿಕಾ ಪಡುಕೋಣೆ ಸಿನಿಮಾಗಳಿಂದ ಹಿಂದೆ ಸರಿಯಲು ಹಲವು ಕಾರಣಗಳಿವೆ ಎಂದು ಹೇಳಲಾಯಿತು. ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಲು ಅವರು ಸಾಕಷ್ಟು ಷರತ್ತುಗಳನ್ನು ಹಾಕಿದ್ದರು. 8 ಗಂಟೆ ಕೆಲಸ ಮಾಡೋದು, ಪ್ರಾಫಿಟ್ ಶೇರ್ ಮಾಡಿಕೊಳ್ಳುವುದು ಮತ್ತಿತ್ಯಾದಿ ವಿಚಾರಗಳು ಇದರಲ್ಲಿ ಸೇರಿವೆ ಎಂದು ಹೇಳಲಾಗಿತ್ತು.

ಈ ಬೆಳವಣಿಗೆಗಳ ಬೆನ್ನಲ್ಲೇ ನಟಿ ದೀಪಿಕಾ ಮೌನಕ್ಕೆ ಶರಣಾಗಿದ್ದರು. ಇದೀಗ ಇದೇ ಮೊದಲ ಬಾರಿಗೆ ದೀಪಿಕಾ ಈ ವಿವಾದಗಳ ಕುರಿತು ಮಾತನಾಡಿದ್ದು, 'ತಮ್ಮ ಮಗಳಿಗೆ ಹೆಚ್ಚಿನ ಸಮಯ ನೀಡುವುದು.. ನನ್ನ ಷರತ್ತಾಗಿತ್ತು' ಎಂದು ಹೇಳಿದ್ದಾರೆ.

ಮೌನವಾಗಿ ಹೋರಾಡಿದ್ದೇನೆ

ನನ್ನನ್ನು ಚಿತ್ರಗಳಿಂದ ಕೈ ಬಿಡುವ ವೇಳೆ ಸಾಕಷ್ಟು ಅಂಶಗಳ ಉಲ್ಲೇಖವಾಗಿತ್ತು. 8 ಗಂಟೆ ಕೆಲಸ ಮಾಡೋದು, ಪ್ರಾಫಿಟ್ ಶೇರ್ ಮಾಡಿಕೊಳ್ಳುವುದು ಮತ್ತಿತ್ಯಾದಿ ವಿಚಾರಗಳ ಜೊತೆಗೆ ನನ್ನ ಮಗಳಿಗೆ ಸಮಯ ನೀಡುವುದೂ ಕೂಡ ನನ್ನ ಅಂಶವಾಗಿತ್ತು ಎಂದಿದ್ದಾರೆ.

'ನಾನು ಮೌನವಾಗಿ ಹೋರಾಡಿದ್ದೇನೆ. ನಾನು ಈ ಹೋರಾಟವನ್ನು ಹಲವು ಹಂತಗಳಲ್ಲಿ ಮಾಡಿದ್ದೇನೆ. ಇದು ನನಗೆ ಹೊಸದಲ್ಲ. ವೇತನದ ವಿಷಯ ಹಾಗೂ ಅದರೊಂದಿಗೆ ಬರುವ ಎಲ್ಲಾ ಸಮಸ್ಯೆಯನ್ನು ನಾನು ಎದುರಿಸಬೇಕಾಗಿತ್ತು. ಅದನ್ನು ಏನು ಕರೆಯಬೇಕೆಂದು ನನಗೆ ತಿಳಿದಿಲ್ಲ.

ಆದರೆ ನಾನು ಯಾವಾಗಲೂ ನನ್ನ ಹೋರಾಟಗಳನ್ನು ಮೌನವಾಗಿ ಮಾಡಿದ್ದೇನೆ. ಕೆಲವೊಮ್ಮೆ ಅವು ಸಾರ್ವಜನಿಕವಾಗುತ್ತವೆ. ಅದು ನನಗೆ ತಿಳಿದಿರುವ ರೀತಿಯಲ್ಲಿ ಅಲ್ಲ ಮತ್ತು ನಾನು ಬೆಳೆದ ರೀತಿಯಲ್ಲಿ ಅಲ್ಲ. ಆದರೆ ಹೌದು, ನನ್ನ ಹೋರಾಟಗಳನ್ನು ಮೌನವಾಗಿ ಮತ್ತು ಗೌರವಯುತ ರೀತಿಯಲ್ಲಿ ಹೋರಾಡುವುದು ನನಗೆ ತಿಳಿದಿರುವ ಮಾರ್ಗ’ ಎಂದು ದೀಪಿಕಾ ಹೇಳಿದ್ದಾರೆ.

ಸೂಪರ್ ಸ್ಟಾರ್ ಗಳು 8 ಗಂಟೆ ಕೆಲಸ ಮಾಡ್ತಾರೆ

ಭಾರತೀಯ ಚಲನಚಿತ್ರೋದ್ಯಮದಲ್ಲಿ ಬಹಳಷ್ಟು ಸೂಪರ್‌ಸ್ಟಾರ್‌ಗಳು, ಪುರುಷ ಸೂಪರ್‌ಸ್ಟಾರ್‌ಗಳು ವರ್ಷಗಳಿಂದ 8 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಅದು ಎಂದಿಗೂ ಸುದ್ದಿಗಳ ಹೆಡ್ ಲೈನ್ ಗಳಲ್ಲಿ ಬರುವುದಿಲ್ಲ. ನಾನು ಈಗ ಹೆಸರುಗಳನ್ನು ತೆಗೆದುಕೊಂಡು ಇದನ್ನು ಸಂಪೂರ್ಣ ವಿಷಯವಾಗಿ ಮಾಡಲು ಬಯಸುವುದಿಲ್ಲ, ಆದರೆ ಬಹಳಷ್ಟು ಪುರುಷ ನಟರು ವರ್ಷಗಳಿಂದ ದಿನಕ್ಕೆ 8 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ.

ಅವರಲ್ಲಿ ಹಲವರು ಸೋಮವಾರದಿಂದ ಶುಕ್ರವಾರದವರೆಗೆ ಕೇವಲ 8 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರು ವಾರಾಂತ್ಯದಲ್ಲಿ ಕೆಲಸ ಮಾಡುವುದಿಲ್ಲ. ಅವರು ಉದ್ಯಮದ ಬೇರುಬಿಟ್ಟ "ಚಲ್ತಾ ಹೈ" (ಅದು ಇರಲಿ) ಸಂಸ್ಕೃತಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅದು ಅಸ್ತವ್ಯಸ್ತ ಮತ್ತು ಅಸಂಘಟಿತ ಎಂದು ದೀಪಿಕಾ ಕರೆದರು.

ಉದ್ಯಮವನ್ನು ಒಂದು ಉದ್ಯಮ ಎಂದು ಕರೆಯಲಾಗಿದ್ದರೂ, ನಾವು ಎಂದಿಗೂ ನಿಜವಾಗಿಯೂ ಒಂದೇ ರೀತಿ ಕೆಲಸ ಮಾಡಿಲ್ಲ. ದೀರ್ಘ ಸಮಯ, ಕಳಪೆ ಪರಿಸ್ಥಿತಿಗಳು ಮತ್ತು ಆಹಾರವಿಲ್ಲದಂತಹ ಮೂಲಭೂತ ಸಮಸ್ಯೆಗಳ ಹೊರತಾಗಿಯೂ ಕೆಲಸ ಮಾಡಿದ್ದೇವೆ ಎಂದು ದೀಪಿಕಾ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಬುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT