ಸಲ್ಮಾನ್ ಖಾನ್ 
ಬಾಲಿವುಡ್

ತಿಂಡಿ ತಿನ್ನಲು ಒಂದು ಗಂಟೆ ಸಮಯ ಬೇಕಿತ್ತು, ಆ ವೇಳೆ ಆತ್ಮಹತ್ಯೆ ಯೋಚನೆಯೂ ಬಂದಿತ್ತು: ನರಕಯಾತನೆ ಬಿಚ್ಚಿಟ್ಟ ಸಲ್ಮಾನ್ ಖಾನ್

ನರದ ಅಸ್ವಸ್ಥತೆಯಿಂದಾಗಿ ಉಂಟಾಗಿದ್ದ ಟ್ರೈಜಿಮಿನಲ್ ನರರೋಗದ ಬಗ್ಗೆ, ತಾವು ಅನುಭವಿಸಿದ ಯಾತನೆ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಸಾಮಾನ್ಯ ಜೀವನದ ಮೇಲೆಯೂ ತೀವ್ರವಾಗಿ ಪರಿಣಾಮ ಬೀರಿತ್ತು.

ನವದೆಹಲಿ: ತಿಂಡಿ ತಿನ್ನಲೂ ನನಗೆ ಗಂಟೆಗಳ ಅವಧಿ ಬೇಕಿತ್ತು, ಆತ್ಮಹತ್ಯೆ ಯೋಚನೆಗಳು ಬಂದಿದ್ದವು ಎಂದು ಜೀವನದಲ್ಲಿ ಅನುಭವಿಸಿದ ನರರೋಗದ ನರಕಯಾತನೆ ಬಗ್ಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಮಾತನಾಡಿದ್ದಾರೆ.

`ಟು ಮಚ್’ ಎಂಬ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನರದ ಅಸ್ವಸ್ಥತೆಯಿಂದಾಗಿ ಉಂಟಾಗಿದ್ದ ಟ್ರೈಜಿಮಿನಲ್ ನರರೋಗದ ಬಗ್ಗೆ, ತಾವು ಅನುಭವಿಸಿದ ಯಾತನೆ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಸಾಮಾನ್ಯ ಜೀವನದ ಮೇಲೆಯೂ ತೀವ್ರವಾಗಿ ಪರಿಣಾಮ ಬೀರಿತ್ತು. ತಿನ್ನುವದರಿಂದ ಹಿಡಿದು ಎಲ್ಲವನ್ನೂ ಕಷ್ಟವನ್ನಾಗಿಸಿತ್ತು ಎಂದು ತಿಳಿಸಿದ್ದಾರೆ.

2007ರಲ್ಲಿ `ಪಾರ್ಟ್ನರ್’ ಸಿನಿಮಾದ ಸೆಟ್‌ನಲ್ಲಿ ಈ ರೋಗದ ಮೊದಲ ಲಕ್ಷಣ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ನಟಿ ಲಾರಾ ದತ್ತ ಅವರು ನನ್ನ ಮುಖದಿಂದ ಕೂದಲೆಳೆಯನ್ನು ಕಿತ್ತಿದ್ದಾಗ ತೀವ್ರವಾಗಿ ನೋವಾಗಿತ್ತು. ಆಗ ನಾನು ಅದನ್ನು ಹಲ್ಲಿನ ಸಮಸ್ಯೆ ಎಂದುಕೊಂಡಿದ್ದೆ.

ಆದರೆ ಬಳಿಕ ಆಸ್ಪತ್ರೆಗೆ ತೆರಳಿದಾಗ ಇದು ನರಗಳಿಗೆ ಸಂಬಂಧಿಸಿದ್ದು ಎಂದು ತಿಳಿಯಿತು. ಆದರೆ ಅದರ ನೋವು ಎಷ್ಟಿರುತ್ತದೆ ಎಂದರೆ ನಿಮ್ಮ ಶತ್ರುವಿಗೂ ಹಾಗೆ ಆಗಬಾರದು ಎಂದುಕೊಳ್ಳುವಷ್ಟು ತೀವ್ರವಾಗಿರುತ್ತದೆ. ಇಂತಹ ನೋವಿನಿಂದ ಹೆಚ್ಚು ಆತ್ಮಹತ್ಯೆಗಳು ಸಂಭವಿಸುತ್ತವೆ. ನನಗೂ ಕೂಡ ಅಂತಹ ಯೋಚನೆಗಳು ಬಂದಿದ್ದವು. ಆದರೆ ನಾನು ಈ ನೋವನ್ನು ಏಳೂವರೆ ವರ್ಷಗಳ ಕಾಲ ಅನುಭವಿಸಿದ್ದೇನೆ ಎಂದಿದ್ದಾರೆ.

ಈ ನೋವು ನನ್ನ ದೈನಂದಿನ ಜೀವನದ ಮೇಲೆ ತೀವ್ರವಾಗಿ ಪರಿಣಾಮ ಬೀರಿತು. ಪ್ರತಿ 4-5 ನಿಮಿಷಗಳಿಗೊಮ್ಮೆ ನೋವಾಗುತ್ತಿತ್ತು. ತಿಂಡಿ ತಿನ್ನಬೇಕೆಂದರೆ ನನಗೆ ಒಂದು ಗಂಟೆಗೂ ಅಧಿಕ ಸಮಯಬೇಕಿತ್ತು. ಅಗಿಯಲು ಆಗುತ್ತಿರಲಿಲ್ಲ. ಇದೆಲ್ಲದರ ನಂತರ ನಾನು ಗಾಮಾ ನೈಫ್ ಶಸ್ತ್ರಚಿಕಿತ್ಸೆಗೆ ಒಳಗಾದೆ. ಇದು 8 ಗಂಟೆಗಳ ಕಾಲ ನಡೆದಿತ್ತು. ಅದಾದ ಬಳಿಕ ನೋವು ಕಡಿಮೆ ಆಯ್ತು ಎಂದು ಹೇಳಿಕೊಂಡಿದ್ದಾರೆ.

ಟ್ರೈಜಿಮಿನಲ್ ನರರೋಗ ಪ್ರತಿ ವರ್ಷ 1,00,000 ಜನರಲ್ಲಿ ಸರಿಸುಮಾರು ನಾಲ್ಕರಿಂದ 13 ಜನರಲ್ಲಿ ಕಾಣಿಸಿಕೊಳ್ಳುತ್ತದೆ, ಪುರುಷರಿಗಿಂತ ಮಹಿಳೆಯರು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಡಾಕ್ ಲಡಾಯಿ: ಅ. 7 ರ ಮಾತುಕತೆಗೆ ಮುನ್ನ ಪೂರ್ವ ಸಿದ್ಧತಾ ಸಭೆಗೆ ಗೃಹ ಸಚಿವಾಲಯ ಕರೆ

ಜಾತಿಗಣತಿ ಸಮೀಕ್ಷೆಗೆ ನಿತ್ಯವೂ ಸಮಸ್ಯೆ: ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಸಿಎಂ ಮುಂದು, ಇಂದು ಮಹತ್ವದ ಸಭೆ

Donald Trump ಸುಂಕ ಘೋಷಣೆ ಅ.1ರಿಂದ ಜಾರಿ: ಯಾವುದಕ್ಕೆ ಎಷ್ಟು ತೆರಿಗೆ? ಇಲ್ಲಿದೆ ಮಾಹಿತಿ...

ಶಿಕ್ಷಕರ ನೇಮಕಾತಿ ಹಗರಣ: ಪಶ್ಚಿಮ ಬಂಗಾಳ ಮಾಜಿ ಸಚಿವ ಪಾರ್ಥ ಚಟರ್ಜಿಗೆ ಜಾಮೀನು ಮಂಜೂರು

DYSp ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ: ನ್ಯಾ. ಕೇಶವ ನಾರಾಯಣ ಆಯೋಗದ ಶಿಫಾರಸ್ಸು ತಿರಸ್ಕಾರ

SCROLL FOR NEXT