ಕಂಗನಾ ರಣಾವತ್ 
ಬಾಲಿವುಡ್

"ನನಗೊಬ್ಬ ಪಾಕಿಸ್ತಾನಿ ಹುಡುಗನನ್ನು ಹುಡುಕಿ ಕೊಡಿ": ಸಂಘಿ ಹೇಳಿಕೆ ಬೆನ್ನಲ್ಲೇ ಕಂಗನಾ ರಣಾವತ್ ಹಳೆಯ Video ವೈರಲ್!

ಸಾಮಾಜಿಕ ಜಾಲತಾಣದ ಬಳಕೆದಾರರು ಹಳೆಯ ಸಂದರ್ಶನವೊಂದ ವಿಡಿಯೋವೊಂದನ್ನು ಹೊರತಂದಿದ್ದಾರೆ. ಇದರಲ್ಲಿ ಪಾಕಿಸ್ತಾನದ ಹುಡುಗನನ್ನು ಹುಡುಕಿಕೊಡಿ ಎಂದು ಅವರು ಪತ್ರಕರ್ತರೊಬ್ಬರನ್ನು ಕೇಳುವುದು ಇದೆ

Hindu ಆಗಿದ್ದ ನಾನು ಈಗ ಅಪ್ಪಟ ಸಂಘಿ ಎಂದು ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಹೇಳಿಕೊಂಡ ಬೆನ್ನಲ್ಲೇ ಅವರ ಹಳೆಯ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ. ಅದರಲ್ಲಿ ನನಗೊಬ್ಬ ಪಾಕಿಸ್ತಾನಿ ಹುಡುಗನನ್ನು ಹುಡುಕಿ ಕೊಡಿ ಎಂದು ಪತ್ರಕರ್ತರೊಬ್ಬರನ್ನು ಕೇಳಿರುವುದು ಇದೆ.

ಹೌದು, ಸೋಮವಾರ ಇನ್‌ಸ್ಟಾಗ್ರಾಮ್‌ನಲ್ಲಿ ಸೆಲ್ಫಿ ವೀಡಿಯೊವನ್ನು ಹಂಚಿಕೊಂಡಿದ್ದ ಕಂಗನಾ, ತಾನು ಹಿಂದೆ ಮಧ್ಯಮ ಹಿಂದೂ ಆಗಿದ್ದೆ, ಆದರೆ ಈಗ ತಾನು ಹೆಮ್ಮೆಯ ಸಂಘಿ ಎಂದು ಪರಿಗಣಿಸುತ್ತೇನೆ. ಭಾರತೀಯ ಜನತಾ ಪಕ್ಷ (BJP) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಿದ್ಧಾಂತದೊಂದಿಗೆ ಹೊಂದಿಕೊಂಡಿದ್ದೇನೆ ಎಂದು ಹೇಳಿದ್ದರು.

ಈ ಹೇಳಿಕೆ ಬೆನ್ನಲ್ಲೇ, ಸಾಮಾಜಿಕ ಜಾಲತಾಣದ ಬಳಕೆದಾರರು ಹಳೆಯ ಸಂದರ್ಶನವೊಂದ ವಿಡಿಯೋವೊಂದನ್ನು ಹೊರತಂದಿದ್ದಾರೆ. ಇದರಲ್ಲಿ ಪಾಕಿಸ್ತಾನದ ಹುಡುಗನನ್ನು ಹುಡುಕಿಕೊಡಿ ಎಂದು ಅವರು ಪತ್ರಕರ್ತರೊಬ್ಬರನ್ನು ಕೇಳುವುದು ಇದೆ

30 ವಯಸ್ಸಿನ ಆರಂಭದಲ್ಲಿರುವ ಯುವಕನನ್ನು ತಾನು ಬಯಸುತ್ತೇನೆ. ಆ ವ್ಯಕ್ತಿಗೆ ನಾನು ಯಾರೆಂದು ತಿಳಿದಿಲ್ಲದಿದ್ದರೂ ತಮಗೆ ತೊಂದರೆಯಿಲ್ಲ ಎಂದಿದ್ದಾರೆ. ಇದಕ್ಕೆ ಪತ್ರಕರ್ತ, ಹಾಗಾದರೆ ನಾವಿದನ್ನು ಒಪ್ಪಿಕೊಂಡಿದ್ದೇವೆ, ನಾನು ನಿಮಗಾಗಿ ಹುಡುಗನನ್ನು ಹುಡುಕುತ್ತೇನೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಯಾವ ರೀತಿಯ ಹುಡುಗನನ್ನು ಬಯಸುತ್ತೀರಾ ಎಂದಾಗ, 30ರ ಹರೆಯದ ಆರಂಭದಲ್ಲಿರುವವರು. ಅವರಿಗೆ ನನ್ನ ಬಗ್ಗೆ ತಿಳಿದಿಲ್ಲದಿದ್ದರೂ ಪರವಾಗಿಲ್ಲ. ಏಕೆಂದರೆ ನಾನು ನನ್ನ ಸಂಗಾತಿಯೊಂದಿಗೆ ಅತ್ಯಂತ ಸಾಮಾನ್ಯ ಜೀವನವನ್ನು ನಡೆಸಲು ಬಯಸುತ್ತೇನೆ" ಎಂದು ಹೇಳಿದ್ದರು. ತಮ್ಮ ಅಡುಗೆ ಕೌಶಲ್ಯದ ಬಗ್ಗೆಯೂ ಅವರು ಮಾತನಾಡಿದ್ದು, ತಾವು ಚಿಕನ್ ಕರಿ ಮತ್ತು ವಿವಿಧ ರೀತಿಯ ಮೊಘಲಾಯಿ ಖಾದ್ಯಗಳನ್ನು ತಯಾರಿಸುವುದಾಗಿ ತಿಳಿಸಿದ್ದರು.

ಸೋನಾಕ್ಷಿ ಸಿನ್ಹಾ ಅವರನ್ನು ಪರೋಕ್ಷವಾಗಿ ಟೀಕಿಸುವ ಹಾಗೂ "ಎಡಪಂಥೀಯ" ಸಿದ್ಧಾಂತವೆಂದು ಕರೆದು ಟೀಕಿಸುವ ವಿಡಿಯೋ ಹೇಳಿಕೆ ಬೆನ್ನಲ್ಲೇ, ಕಂಗನಾ ಅವರ ಈ ಹಳೆಯ ಸಂದರ್ಶನ ಮತ್ತೆ ಮುನ್ನೆಲೆಗೆ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್