ರಾಮಾಯಣ ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್ ಮತ್ತು ರಾವಣನಾಗಿ ನಟ ಯಶ್ 
ಬಾಲಿವುಡ್

ರಣಬೀರ್ ಕಪೂರ್, ಯಶ್ ನಟನೆಯ 'ರಾಮಾಯಣ' ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕ ಘೋಷಣೆ!

ನಿತೇಶ್ ತಿವಾರಿ ನಿರ್ದೇಶನದ ಮತ್ತು ಪ್ರೈಮ್ ಫೋಕಸ್‌ನ ಸಂಸ್ಥಾಪಕ ಮತ್ತು ಅಕಾಡೆಮಿ ಪ್ರಶಸ್ತಿ ವಿಜೇತ ವಿಷುಯಲ್ ಎಫೆಕ್ಟ್ಸ್ ಸ್ಟುಡಿಯೋ DNEG ಯ ಜಾಗತಿಕ ಸಿಇಒ ನಮಿತ್ ಮಲ್ಹೋತ್ರಾ ಅವರ ಬೆಂಬಲದೊಂದಿಗೆ, ಚಿತ್ರವು ವ್ಯಾಪಕ ಸಂಚಲನ ಸೃಷ್ಟಿಸಿದೆ.

ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ ನಟನೆಯ 'ರಾಮಾಯಣ' ಚಿತ್ರದ ಅಪ್ಡೇಟ್ಸ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಸಂಭ್ರಮಿಸಲು ಒಂದು ಕಾರಣ ಸಿಕ್ಕಿದೆ. ಚಿತ್ರದ ಬಹುನಿರೀಕ್ಷಿತ ಟ್ರೇಲರ್ ಜುಲೈ 24ರಂದು ವಿಶ್ವದಾದ್ಯಂತ ಪ್ರಥಮ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರತಂಡ ಶನಿವಾರ ಘೋಷಿಸಿದೆ.

ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಣೆ ಹಂಚಿಕೊಂಡಿರುವ ಚಿತ್ರತಂಡ, ಈ ಚಿತ್ರವು ಭಾರತದ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದರಿಂದ ಪ್ರೇರಿತವಾಗಿದ್ದು, ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಕಂಡಿದರ ದೊಡ್ಡ ಪ್ರಮಾಣದಲ್ಲಿ ಚಿತ್ರವನ್ನು ಪ್ರಸ್ತುತಪಡಿಸಲಾಗುತ್ತಿದೆ ಎಂದು ಹೇಳಿದೆ.

'ಭಾರತದಿಂದ ಜಗತ್ತಿಗೆ. ಸಾವಿರಾರು ವರ್ಷಗಳಿಂದ, ರಾಮಾಯಣವು ಧರ್ಮ, ಮರ್ಯಾದೆ, ಧೈರ್ಯ ಮತ್ತು ಕರುಣೆಯ ಕಾಲಾತೀತ ಆದರ್ಶಗಳ ಮೂಲಕ ಪೀಳಿಗೆಗೆ ಸ್ಫೂರ್ತಿ ನೀಡಿದೆ. ಈಗ, ಇದು ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಭಾರತದ ಶ್ರೇಷ್ಠ ನಾಗರಿಕತೆಯ ಮಹಾಕಾವ್ಯಗಳಲ್ಲಿ ಒಂದಾದ, ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಪ್ರಯತ್ನಿಸದ ಪ್ರಮಾಣದಲ್ಲಿ ಜಗತ್ತಿಗೆ ಪ್ರಸ್ತುತಪಡಿಸಲಾಗಿದೆ. ರಾಮಾಯಣದ ಟ್ರೇಲರ್ ಜುಲೈ 24 ರಂದು ವಿಶ್ವದಾದ್ಯಂತ ಪ್ರಥಮ ಪ್ರದರ್ಶನಗೊಳ್ಳಲಿದೆ' ಎಂದು ಬರೆದಿದ್ದಾರೆ.

ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ಚಿತ್ರದ ಪ್ರಸ್ತುತಿಗೆ ಸ್ವಲ್ಪ ಮುಂಚಿತವಾಗಿ ಟ್ರೇಲರ್ ರಿಲೀಸ್ ಮಾಡುವ ಘೋಷಣೆ ಮಾಡಲಾಗಿದೆ. ಅಧಿಕೃತ ಕಾಮಿಕ್-ಕಾನ್ ವೇಳಾಪಟ್ಟಿಯ ಪ್ರಕಾರ, ರಾಮಾಯಣವನ್ನು ಜುಲೈ 23, 2026ರಂದು ಮಧ್ಯಾಹ್ನ 3.15ಕ್ಕೆ (ಭಾರತೀಯ ಕಾಲಮಾನ ಜುಲೈ 24 ರಂದು ಬೆಳಗ್ಗೆ 3.15ಕ್ಕೆ) ಬಾಲ್‌ರೂಮ್ 20 ರಲ್ಲಿ ಪ್ರದರ್ಶಿಸಲಾಗುವುದು. ಈ ವೇಳೆ ನಿರ್ಮಾಪಕ ನಮಿತ್ ಮಲ್ಹೋತ್ರಾ, ನಿರ್ದೇಶಕ ನಿತೇಶ್ ತಿವಾರಿ ಮತ್ತು ನಟರಾದ ರಣಬೀರ್ ಕಪೂರ್ ಮತ್ತು ಯಶ್ ಭಾಗವಹಿಸಲಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ಮತ್ತು ಪ್ರೈಮ್ ಫೋಕಸ್‌ನ ಸಂಸ್ಥಾಪಕ ಮತ್ತು ಅಕಾಡೆಮಿ ಪ್ರಶಸ್ತಿ ವಿಜೇತ ವಿಷುಯಲ್ ಎಫೆಕ್ಟ್ಸ್ ಸ್ಟುಡಿಯೋ DNEG ಯ ಜಾಗತಿಕ ಸಿಇಒ ನಮಿತ್ ಮಲ್ಹೋತ್ರಾ ಅವರ ಬೆಂಬಲದೊಂದಿಗೆ, ರಾಮಾಯಣ ಚಿತ್ರವು ಘೋಷಣೆಯಾದಾಗಿನಿಂದ ವ್ಯಾಪಕ ಸಂಚಲನ ಸೃಷ್ಟಿಸಿದ್ದು, ಇದು ಭಾರತೀಯ ಚಿತ್ರರಂಗದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ.

ಪ್ರಾಚೀನ ಮಹಾಕಾವ್ಯವಾದ ರಾಮಾಯಣದಿಂದ ಪ್ರೇರಿತವಾದ ಈ ಚಿತ್ರವು, ಭಗವಾನ್ ವಿಷ್ಣುವಿನ ಅವತಾರವೆಂದು ನಂಬಲಾದ ರಾಮನ ಕಥೆಯನ್ನು ಒಳಗೊಂಡಿದೆ. ಇದು ಅಯೋಧ್ಯೆಯ ರಾಜಕುಮಾರನಾಗಿ ರಾಮನ ಪಯಣ, ಅವನ ವನವಾಸ ಮತ್ತು ರಾವಣನ ವಿರುದ್ಧದ ಅವನ ಯುದ್ಧವನ್ನು ಚಿತ್ರಿಸುತ್ತದೆ.

ರಣಬೀರ್ ಕಪೂರ್ ಅವರಲ್ಲದೆ, ಚಿತ್ರದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್, ಹನುಮಂತನಾಗಿ ಸನ್ನಿ ಡಿಯೋಲ್ ಮತ್ತು ಲಕ್ಷ್ಮಣನಾಗಿ ರವಿ ದುಬೆ ನಟಿಸಿದ್ದಾರೆ. ಚಿತ್ರಕ್ಕೆ ಹ್ಯಾನ್ಸ್ ಝಿಮ್ಮರ್ ಮತ್ತು ಎಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

'ರಾಮಾಯಣ'ದ ಮೊದಲ ಭಾಗವು 2026ರ ದೀಪಾವಳಿಯ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಎರಡನೇ ಭಾಗವು 2027ರ ದೀಪಾವಳಿಯ ವೇಳೆಗೆ ತೆರೆಗೆ ಬರುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಯೆಟ್ನಾಂ ದೋಣಿ ದುರಂತ: 15 ಭಾರತೀಯ ಪ್ರವಾಸಿಗರು ಸಾವು; ತಮಿಳುನಾಡು, ಆಂಧ್ರ ಮಂದಿ ಸಮುದ್ರಪಾಲು, Video!

ಸರ್ಕಾರ ಉರುಳಿಸಲು BJPಯಿಂದ ಕುದುರೆ ವ್ಯಾಪಾರ: ಒಬ್ಬ ಶಾಸಕನಿಗೆ ಬರೋಬ್ಬರಿ 20-30 ಕೋಟಿ ಆಫರ್: ಸಿಎಂ ಅಬ್ದುಲ್ಲಾ ಆರೋಪ

ಅಕ್ಟೋಬರ್, ನವೆಂಬರ್‌ನಲ್ಲಿ ಪಂಚಾಯತ್ ಚುನಾವಣೆ ಸಾಧ್ಯತೆ; ಗ್ರಾಮಗಳಲ್ಲಿ ಗರಿಗೆದರಲಿದೆ ರಾಜಕೀಯ!

'ಹಿಂದಿನ ಸೀಟಿಗೆ ಬಾ': ಬಸ್ಸಿನಲ್ಲಿ ಕಾಲೇಜ್ ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ವಿಕೃತಿ; ಕಂಡಕ್ಟರ್ ಇರ್ಫಾನ್ ಬಂಧನ

ಪಾಕ್‌ನ ಭಾಗವಾಗಿ ಕಾಶ್ಮೀರ ನಕ್ಷೆ ಪ್ರದರ್ಶನ: ಢಾಕಾದಲ್ಲೇ ಬಾಂಗ್ಲಾ ಮಾಜಿ ರಾಜತಾಂತ್ರಿಕನ ಬೆವರಿಳಿಸಿದ ಭಾರತೀಯ ಅಧಿಕಾರಿ ಪೂಜಾ, Video!