ತಾಪ್ಸಿ ಪನ್ನು 
ಬಾಲಿವುಡ್

ಬಾಲಿವುಡ್ ನಟಿ ತಾಪ್ಸಿ ಪನ್ನು ತನ್ನ ದೇಹಕ್ಕೆ ತಾನೇ ಟಾರ್ಚರ್ ಕೊಟ್ಟಿದ್ದೇಕೆ?

ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಒಂದು ಟಿಪ್ಪಣಿಯನ್ನು ಹಂಚಿಕೊಂಡಿರುವ ಬಾಲಿವುಡ್ ನಟಿ ತಾಪ್ಸಿ ಪನ್ನು, ಹಠಕ್ಕೆ ಬಿದ್ದು ತನ್ನ ದೇಹಕ್ಕೆ ತಾನೇ ಟಾರ್ಚರ್ ಕೊಟ್ಟಿರುವುದಾಗಿ ಹೇಳಿದ್ದಾರೆ.

ಹೊಟ್ಟೆಯ ಬೊಜ್ಜು ಕರಗಿಸಲು ಹೋಗಿ ಸಮಸ್ಯೆ ಮಾಡಿಕೊಂಡ ಬಾಲಿವುಡ್ ನಟಿ ತಾಪ್ಸಿ ಪನ್ನು, ಇದೀಗ ಮಹಿಳೆಯರು ಅವಾಸ್ತವಿಕ ಸೌಂದರ್ಯ ಮಾನದಂಡಗಳನ್ನು ಪೂರೈಸಲು ತಮ್ಮನ್ನು ತಾವು ಹಿಂಸಿಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದ್ದಾರೆ.

ಭಾನುವಾರ ತಮ್ಮ ಇನ್ಸ್ಟಾಗ್ರಾಮ್ ಕಥೆಯಲ್ಲಿ ಒಂದು ಟಿಪ್ಪಣಿಯನ್ನು ಹಂಚಿಕೊಂಡಿರುವ ಬಾಲಿವುಡ್ ನಟಿ, ಆ ಫ್ಲಾಟ್ ಬೆಲ್ಲಿ ಹೊಂದುವ ಹಠಕ್ಕೆ ಬಿದ್ದು ತನ್ನ ದೇಹಕ್ಕೆ ತಾನೇ ಟಾರ್ಚರ್ ಕೊಟ್ಟಿರುವುದಾಗಿ ಹೇಳಿದ್ದಾರೆ.

"ನನಗೆ ಈ ಗೀಳು ಇತ್ತು. ಏಕೆಂದರೆ ನಾನು ಬೆಳೆಯುತ್ತಿರುವಾಗ, ತುಂಬಾ ಫಿಟ್ ಆಗಿದ್ದೆ. ಆದರೆ ಕೆಳ ಹೊಟ್ಟೆಯ ಬೊಜ್ಜು ಏಕೆ ಕರಗುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ನಾನು ಮಿತಿ ಮೀರಿ ವರ್ಕೌಟ್ ಮಾಡಲು ಶುರುಮಾಡಿದೆ. ನನ್ನ ದೇಹಕ್ಕೆ ನಾನೇ ಅತಿಯಾದ ಒತ್ತಡ ಹೇರಿದೆ. ಆದರೆ ನಾವು ಯಾವಾಗ ದೇಹವನ್ನು ಮಿತಿ ಮೀರಿ ದಂಡಿಸುತ್ತೇವೋ, ಆಗ ಮೆದುಳು ನಮ್ಮ ದೇಹಕ್ಕೆ ರಕ್ಷಣೆಯ ಅಗತ್ಯವಿದೆ ಎಂಬ ಅಲಾರಾಂ ಸಂದೇಶ ರವಾನಿಸುತ್ತದೆ’ ಎಂದು ತಾಪ್ಸಿ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

‘ನಾವು ಅತಿಯಾಗಿ ದಂಡಿಸಿದಾಗ ದೇಹವು ನೀರನ್ನು ಹಿಡಿದಿಟ್ಟುಕೊಳ್ಳಲು ಆರಂಭಿಸುತ್ತದೆ. ಆ ಕೆಳಹೊಟ್ಟೆಯಲ್ಲಿ ಕಾಣಿಸುವುದು ಕೇವಲ ಕೊಬ್ಬು ಮಾತ್ರವಲ್ಲ, ಅದು ನೀರು ಕೂಡ ಆಗಿರುತ್ತದೆ. ಅತಿಯಾದ ವರ್ಕೌಟ್‌ನಿಂದ ಅದು ಮತ್ತಷ್ಟು ಹೆಚ್ಚಾಗುತ್ತದೆಯೇ ಹೊರತು ಕರಗುವುದಿಲ್ಲ. ಹೀಗಾಗಿ ಯಾರೂ ಕೂಡ ಅತಿಯಾಗಿ ಜಿಮ್‌ನಲ್ಲಿ ಕಸರತ್ತು ಮಾಡಬಾರದು’ ಎಂದು ಅವರು ಸಲಹೆ ನೀಡಿದ್ದಾರೆ.

ತಾಪ್ಸಿ ಪನ್ನು ಹೊಟ್ಟೆಯ ಬೊಜ್ಜು ಕರಗಿಸುವುದು ಆರೋಗ್ಯಕರ ಎಂದು ಹೇಳಿದ್ದರೂ ಮಹಿಳೆಯರು ಅತಿಯಾದ ವರ್ಕೌಟ್‌ ಮಾಡಬಾರದು. ಪ್ರತಿಯೊಬ್ಬ ಮಹಿಳೆಯ ದೇಹದ ಪ್ರಕೃತಿಯೂ ವಿಭಿನ್ನವಾಗಿರುತ್ತದೆ. ನನಗೂ ಇದನ್ನು ಅರ್ಥ ಮಾಡಿಕೊಳ್ಳಲು ತುಂಬಾ ಸಮಯ ಬೇಕಾಯಿತು. ಸಾಕಷ್ಟು ಹಿಂಸೆ ಅನುಭವಿಸಿದ ಬಳಿಕವಷ್ಟೇ ನನಗೆ ಸತ್ಯದ ಅರಿವಾಯಿತು ಎಂದು ಬರೆದುಕೊಂಡಿದ್ದಾರೆ.

‘ಇದು ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಒಳ್ಳೆಯದು. ಕೇವಲ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳು ಪರ್ಫೆಕ್ಟ್‌ ಆಗಿ ಬರಲಿ ಎಂಬ ಒಂದೇ ಕಾರಣಕ್ಕೆ ನಿಮ್ಮ ದೇಹಕ್ಕೆ ಹಿಂಸೆ ಕೊಡಬೇಡಿ. ಹೊಟ್ಟೆಯ ಭಾಗದಲ್ಲಿ ಸ್ವಲ್ಪ ಉಬ್ಬು ಇರುವುದು ಸಹಜ ಮತ್ತು ಆರೋಗ್ಯಕರ. ಪ್ಲೀಸ್, ನಿಮ್ಮ ದೇಹಕ್ಕೆ ನೀವೇ ಟಾರ್ಚರ್ ಮಾಡಬೇಡಿ’ ಎಂದು ತಾಪ್ಸಿ ಪನ್ನು ಮಹಿಳೆಯರಲ್ಲಿ ವಿನಂತಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!