ರಣವೀರ್​ ಸಿಂಗ್ - ಕಂಗನಾ ಗರಂ 
ಬಾಲಿವುಡ್

ಬಾಲಿವುಡ್​ನಲ್ಲಿ 'ಪಾಕ್ ಮೇಲಿನ ಪ್ರೀತಿ' ಇನ್ನೂ ಕಮ್ಮಿಯಾಗಿಲ್ಲ: ರಣವೀರ್​ ಸಿಂಗ್ ನಿಷೇಧಕ್ಕೆ ಕಂಗನಾ ಗರಂ!​

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ, ಬಾಲಿವುಡ್​ನಲ್ಲಿ ಪಾಕಿಸ್ತಾನವನ್ನು ಮಿತ್ರದೇಶ ಎಂದು, ಅವರು ಸಜ್ಜನರೆಂದು ತೋರಿಸುವ ಒಂದು ಚಾಳಿಯಿದೆ.

ಬಾಲಿವುಡ್ ನಲ್ಲಿ ನಟ ರಣವೀರ್ ಸಿಂಗ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಪ್ರತಿಕ್ರಿಯಿಸಿದ್ದು, ಇದಕ್ಕೆ ಅವರ ಇತ್ತೀಚಿನ ಚಿತ್ರ ಧುರಂಧರ್ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

ಕಳೆದ ತಿಂಗಳು ರಣವೀರ್ ಸಿಂಗ್ ಅವರು ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್ 3’ ಚಿತ್ರದಿಂದ ಹೊರಬಂದಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಚಲನಚಿತ್ರ ಕಾರ್ಮಿಕರ ಒಕ್ಕೂಟ ಅವರ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಬಹಿಷ್ಕಾರ ಹಾಕಿತ್ತು. ಆದರೆ, ಕೆಲ ದಿನಗಳ ತರುವಾಯ ಈ ನಿಷೇಧವನ್ನು ಒಕ್ಕೂಟ ಹಿಂಪಡೆದಿತ್ತು.

ಈ ಬಗ್ಗೆ ಮಾತನಾಡಿರುವ ಕಂಗನಾ, ಬಾಲಿವುಡ್​​ನಲ್ಲಿ ಪಾಕಿಸ್ತಾನದ ಮೇಲಿನ ಪ್ರೀತಿ ಇನ್ನೂ ಕಮ್ಮಿಯಾಗಿಲ್ಲ. ರಣವೀರ್​ ನಟನೆಯ ಧುರಂಧರ್​ ಸಕ್ಸಸ್​​ ಜೀರ್ಣಿಸಿಕೊಳ್ಳಲು ಆಗದಿದ್ದವರು ನಟನ ವಿರುದ್ದ ಈ ಪಿತೂರಿ ರೂಪಿಸಿದ್ದರೆಂದು ನಾನು ನಂಬಿದ್ದೆನೆಂದು ನಟಿ ಹೇಳಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ, ಬಾಲಿವುಡ್​ನಲ್ಲಿ ಪಾಕಿಸ್ತಾನವನ್ನು ಮಿತ್ರದೇಶ ಎಂದು, ಅವರು ಸಜ್ಜನರೆಂದು ತೋರಿಸುವ ಒಂದು ಚಾಳಿಯಿದೆ. ಅದರೆ ಧುರಂಧರ್ ಸಿನಿಮಾದಲ್ಲಿ ಪಾಕಿಸ್ತಾನದ ನಿಜವಾದ ಮುಖ ಅನಾವರಣ ಆಗಿದ್ದು, ಇದು ಕೆಲವರ ಕೋಪಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಹೀಗಾಗಿ ನಟ ರಣವೀರ್​ನನ್ನು ಟಾರ್ಗೆಟ್​ ಮಾಡಿದ್ದರು. ಆದರೆ ಜನರ ಪ್ರೀತಿ, ಮತ್ತು ಒತ್ತಡಕ್ಕೆ ಮಣಿದು ಹೇರಲಾಗಿದ್ದ ನಿಷೇಧವನ್ನು ಹಿಂತೆಗೆದುಕೊಂಡಿದ್ದಾರೆ ಎಂದರು.

ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ಗಳಿಕೆ ಮಾಡಿ ದಾಖಲೆ ನಿರ್ಮಿಸಿತ್ತು. ಈ ಚಿತ್ರದಲ್ಲಿ ರಣವೀರ್ ಅವರು ಭಾರತೀಯ ಗೂಡಾಚಾರಿಯಾಗಿ ಪಾಕಿಸ್ತಾನದ ಭಯೋತ್ಪಾದಕ ಜಾಲವನ್ನು ಧ್ವಂಸ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಯಶಸ್ಸಿನ ನಂತರವೇ ರಣವೀರ್ ಅವರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತಿದೆ ಎಂಬುದು ಕಂಗನಾ ಅವರ ವಾದ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮಿತ್ ಶಾ ಭೇಟಿ ಮಾಡಿದ ಸಿಎಂ ಡಿಕೆಶಿ; ಪೊಲೀಸ್ ಸಾಮರ್ಥ್ಯ ಸುಧಾರಣೆಗೆ ನೆರವಾಗುವಂತೆ ಮನವಿ

ಕೋಲ್ಕತಾ ಸರ್ಕಾರಿ ಕಟ್ಟಡದಲ್ಲಿ ಅಗ್ನಿ ದುರಂತ: ಚುನಾವಣೆಯಲ್ಲಿ ಬಳಸಲಾಗಿದ್ದ 4,000 ಇವಿಎಂ ಭಸ್ಮ; ಅವಘಡದ ಸುತ್ತ ಅನುಮಾನದ ಹುತ್ತ!

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಸಾವಿಗೆ ಡಿಜಿಪಿ ಅಲೋಕ್ ಕುಮಾರ್ ಕಿರುಕುಳ ಕಾರಣ ಎಂದ ಪತ್ನಿ!

Kalaburgi: ತರಗತಿ ನಡೆಯುತ್ತಿದ್ದಾಗಲೇ ಕುಸಿದ ಸರ್ಕಾರಿ ಶಾಲಾ ಛಾವಣಿ, 5 ವಿದ್ಯಾರ್ಥಿನಿಯರಿಗೆ ಗಾಯ, Video

ಇರಾನ್ ಸಂಘರ್ಷ: ಯೋಜನೆಗಳನ್ನು ನೆತನ್ಯಾಹು ಅವರಿಂದ ಮುಚ್ಚಿಟ್ಟ ಟ್ರಂಪ್; ಇಸ್ರೇಲ್ ಪ್ರಧಾನಿ ಬೆನ್ನಿಗೆ ಅಮೆರಿಕ ಅಧ್ಯಕ್ಷರ ಚೂರಿ?

SCROLL FOR NEXT