ಕಾಕ್‌ಟೇಲ್ 2 ಪೋಸ್ಟರ್ 
ಬಾಲಿವುಡ್

'Cocktail 2' ಭರ್ಜರಿ ಓಟ; ₹100 ಕೋಟಿಗೂ ಅಧಿಕ ಗಳಿಕೆ ಕಂಡ ಶಾಹಿದ್ ಕಪೂರ್, ಕೃತಿ ಸನೋನ್, ರಶ್ಮಿಕಾ ಮಂದಣ್ಣ ನಟನೆಯ ಚಿತ್ರ

ಈ ಚಿತ್ರವನ್ನು ಹೋಮಿ ಅಡಜಾನಿಯಾ ನಿರ್ದೇಶಿಸಿದ್ದು, ಜೂನ್ 19 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ನವದೆಹಲಿ: ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಕಾಕ್‌ಟೇಲ್ 2' ಜಾಗತಿಕವಾಗಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಟ ಮುಂದುವರಿಸಿದ್ದು, ₹100 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ.

ಈ ಚಿತ್ರವನ್ನು ಹೋಮಿ ಅಡಜಾನಿಯಾ ನಿರ್ದೇಶಿಸಿದ್ದು, ಜೂನ್ 19 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ನಿರ್ಮಾಣ ಬ್ಯಾನರ್ ಮ್ಯಾಡಾಕ್ ಫಿಲ್ಮ್ಸ್ ಬುಧವಾರ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶಾಹಿದ್, ಕೃತಿ ಮತ್ತು ರಶ್ಮಿಕಾ ಅವರ ಪೋಸ್ಟರ್‌ನೊಂದಿಗೆ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಚಿತ್ರವು ಬಿಡುಗಡೆಯಾದ ಮೊದಲ ದಿನದಂದು ₹24 ಕೋಟಿ ಗಳಿಸಿತು ಮತ್ತು ನಂತರದ ದಿನಗಳಲ್ಲಿ ₹29.4 ಕೋಟಿ, ₹29.4 ಕೋಟಿ, ₹32.19 ಕೋಟಿ, ₹10 ಕೋಟಿ ಮತ್ತು ₹11.01 ಕೋಟಿ ಗಳಿಸಿತು. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಒಟ್ಟು ಸಂಗ್ರಹ ₹106.61 ಕೋಟಿಗಳಾಗಿವೆ.

ಈ ಚಿತ್ರವು 2012ರ ಹಿಟ್ ಚಿತ್ರ 'ಕಾಕ್‌ಟೇಲ್'ನ ಮುಂದುವರಿದ ಭಾಗವಾಗಿದ್ದು, ಈ ಚಿತ್ರದಲ್ಲಿ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ನಟಿಸಿದ್ದಾರೆ.

ಕಾಕ್‌ಟೇಲ್ 2 ಚಿತ್ರದಲ್ಲಿ ಕುನಾಲ್ ಪಾತ್ರದಲ್ಲಿ ಶಾಹಿದ್, ದಿಯಾ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಆಲಿ ಪಾತ್ರದಲ್ಲಿ ಕೃತಿ ಸನೋನ್ ನಟಿಸಿದ್ದು, ಸಂಕೀರ್ಣ ತ್ರಿಕೋನ ಪ್ರೇಮದ ಸುತ್ತ ಸುತ್ತುತ್ತದೆ.

'ಕಾಕ್‌ಟೇಲ್ 2' ಅನ್ನು ದಿನೇಶ್ ವಿಜನ್, ಲವ್ ರಂಜನ್, ಪ್ರಮಿತಾ ಆರ್ ವಿಜನ್ ಮತ್ತು ಅಂಕುರ್ ಗರ್ಗ್ ನಿರ್ಮಿಸಿದ್ದಾರೆ.

ಕೋಲ್ಕತ್ತಾ: ಕುಸಿದು ಬಿದ್ದ ನಿರ್ಮಾಣ ಹಂತದ ಗೋದಾಮು; ಹಲವರು ಸಾವು ಶಂಕೆ, ರಕ್ಷಣಾ ಕಾರ್ಯ ಆರಂಭ

ಕುಸಿತದ ಬಳಿಕ ಪುಟಿದೆದ್ದ Indian Stock Market: ಸೆನ್ಸೆಕ್ಸ್ 790 ಅಂಕ ಏರಿಕೆ, 24 ಸಾವಿರ ಗಡಿ ದಾಟಿದ Nifty!

ಸುಪ್ರೀಂ ಲೀಡರ್ ಖಮೇನಿ ಅಂತ್ಯಕ್ರಿಯೆ: ಪ್ರಧಾನಿ ಮೋದಿಗೆ ಆಹ್ವಾನ ನೀಡಿದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

'ಕಾಶ್ಮೀರ ಎಂದಿಗೂ ಭಾರತದ್ದೇ, ಭಾರತದ್ದಾಗಿಯೇ ಉಳಿಯಲಿದೆ': ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಭಾರತ ತಿರುಗೇಟು..!

ICC ODI Rankings: ವಿರಾಟ್ ಕೊಹ್ಲಿ ಹಿಂದಿಕ್ಕಿದ ಶುಭಮನ್ ಗಿಲ್; ಬುಮ್ರಾ ಜತೆ ಅಗ್ರ ಸ್ಥಾನಕ್ಕೇರಿದ ಹೆನ್ರಿ