ಸಂಗ್ರಹ ಚಿತ್ರ 
ಬಾಲಿವುಡ್

ಪ್ರೊಪಗಾಂಡಗಳನ್ನು ತುಳಿದು ಮುನ್ನುಗಿದ Dhurandhar 2: 8ನೇ ದಿನಕ್ಕೆ 1000 ಕೋಟಿ ರೂ ಕಲೆಕ್ಷನ್; ಪಠಾಣ್, ಕಲ್ಕಿ ದಾಖಲೆ ಉಡೀಸ್!

ರಣವೀರ್ ಸಿಂಗ್ ಅವರ ಧುರಂಧರ್ 2 (Dhurandhar: The Revenge) ವಿಶ್ವಾದ್ಯಂತ 1,067 ಕೋಟಿ ಗಳಿಸುವ ಮೂಲಕ 8ನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ. ಇದು ಪಠಾಣ್ (1,055 ಕೋಟಿ) ಮತ್ತು ಕಲ್ಕಿ 2898 AD (1,042 ಕೋಟಿ) ಗಳನ್ನು ಮೀರಿಸಿದೆ.

ರಣವೀರ್ ಸಿಂಗ್ ಅವರ ಧುರಂಧರ್ 2 (Dhurandhar: The Revenge) ವಿಶ್ವಾದ್ಯಂತ 1,067 ಕೋಟಿ ಗಳಿಸುವ ಮೂಲಕ 8ನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ. ಇದು ಪಠಾಣ್ (1,055 ಕೋಟಿ) ಮತ್ತು ಕಲ್ಕಿ 2898 AD (1,042 ಕೋಟಿ) ಗಳನ್ನು ಮೀರಿಸಿದೆ.

ವ್ಯಾಪಾರ ವೆಬ್‌ಸೈಟ್ ಸ್ಯಾಕ್‌ನೀಲ್ಕ್ ಪ್ರಕಾರ, ಈ ಚಿತ್ರವು ಬಿಡುಗಡೆಯಾದ ಎಂಟನೇ ದಿನದಂದು ಭಾರತದಲ್ಲಿ 49.70 ಕೋಟಿ ನಿವ್ವಳ ಸಂಗ್ರಹವನ್ನು ಗಳಿಸಿದೆ. ಧುರಂಧರ್ 2 ಚಿತ್ರವು ಭಾರತದಲ್ಲಿ 674.17 ಕೋಟಿ ಮತ್ತು ಒಟ್ಟು ಸಂಗ್ರಹ 805.32 ಕೋಟಿ ತಲುಪಿದೆ. ಈ ಚಿತ್ರ ವಿದೇಶಗಳಲ್ಲಿ 261.92 ಕೋಟಿ ಗಳಿಸಿದೆ. ಒಟ್ಟಾರೆ ಚಿತ್ರ ವಿಶ್ವಾದ್ಯಂತ 1,067.24 ಕೋಟಿಗೆ ತಲುಪಿದೆ.

ಎಂಟನೇ ದಿನ ಹಿಂದಿ ಆವೃತ್ತಿ ₹46 ಕೋಟಿ ಗಳಿಸಿ ಅತಿ ಹೆಚ್ಚು ಗಳಿಸಿತು. ತೆಲುಗು ₹2.50 ಕೋಟಿ, ತಮಿಳು 9 ಮಿಲಿಯನ್, ಕನ್ನಡ 2 ಮಿಲಿಯನ್ ಮತ್ತು ಮಲಯಾಳಂ 1 ಮಿಲಿಯನ್ ಗಳಿಸಿದೆ. ಧುರಂಧರ್ ಚಿತ್ರದ ಮೊದಲ ಭಾಗವು ಭಾರತೀಯ ಮತ್ತು ಅಂತರರಾಷ್ಟ್ರೀಯ ಬಾಕ್ಸ್ ಆಫೀಸ್‌ನಲ್ಲೂ ಧೂಳೆಬ್ಬಿಸಿದ್ದು ವಿಶ್ವಾದ್ಯಂತ ಸುಮಾರು 1,307 ಕೋಟಿ ಗಳಿಸಿತು.

ಭಾರತದಲ್ಲಿ ಚಿತ್ರದ ಒಟ್ಟು ಸಂಗ್ರಹ ₹1,005.85 ಕೋಟಿ, ಆದರೆ ನಿವ್ವಳ ಸಂಗ್ರಹ ಸುಮಾರು 840 ಕೋಟಿ. 894.49 ಕೋಟಿ ಗಳಿಕೆಯೊಂದಿಗೆ, ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಸಿದ ಹಿಂದಿ ಚಿತ್ರವಾಗಿ ಹೊರಹೊಮ್ಮಿತು. ಈ ಚಿತ್ರವು ವಿದೇಶಗಳಲ್ಲಿಯೂ ಬಲವಾದ ಬಲವಾದ ಬೆಂಬಲ ಸಿಕ್ಕಿತ್ತು. ಸುಮಾರು 299.5 ಕೋಟಿ ಗಳಿಸಿತು. ಇದು ಯುಎಸ್ ಮತ್ತು ಕೆನಡಾದಲ್ಲಿ 193.06 ಕೋಟಿ ಗಳಿಸುವ ಮೂಲಕ ಬಾಹುಬಲಿ 2ರ ದಾಖಲೆಯನ್ನು ಮುರಿಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ. ವಿಜಯೇಂದ್ರ

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ