ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ, ಕೃತಿ ಸನೋನ್ 
ಬಾಲಿವುಡ್

Awkward Moment: ರಶ್ಮಿಕಾಗೆ ಹಿಂಭಾಗದಿಂದ 'ಕಚಗುಳಿ' ಇಟ್ಟ ಶಾಹಿದ್ ಕಪೂರ್! Video ವೈರಲ್, ನೆಟ್ಟಿಗರು ಏನಂತಿದ್ದಾರೆ?

ಶಾಹಿದ್ ಕಪೂರ್ ಹಿಂಬದಿಯಿಂದ ರಶ್ಮಿಕಾ ಭುಜದ ಮೇಲೆ ಕೈ ಇಟ್ಟು ಕಚಗುಳಿ ಕೊಟ್ಟಿದ್ದಾರೆ. ಇದಕ್ಕೆ ನಗು ನಗುತ್ತಾ ರಶ್ಮಿಕಾ ಪಕ್ಕಕ್ಕೆ ಸರಿಯುವುದು ವಿಡಿಯೋದಲ್ಲಿದೆ.

ಇತ್ತೀಚಿಗೆ ಕಾಕ್ ಟೇಲ್ 2 ( Cocktail) ಸಾಂಗ್ ಬಿಡುಗಡೆ (Music launch) ವೇಳೆಯಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ನಡುವಿನ ತೀರಾ ಆಪ್ತತೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಮದುವೆಯಾಗಿ ಇನ್ನೂ ಆರು ತಿಂಗಳು ಕಳೆದಿಲ್ಲ. ಆದರೆ, ಇದೇನಿದು ಎಂದು ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುವ ಮೂಲಕ ಸಾಕಷ್ಟು ಊಹಪೋಹಗಳಿಗೆ ಕಾರಣವಾಗಿದೆ.

ಅಂತಹುದು ಏನಿದೆ?

ಶಾಹಿದ್ ಕಪೂರ್ ಹಿಂಬದಿಯಿಂದ ರಶ್ಮಿಕಾ ಭುಜದ ಮೇಲೆ ಕೈ ಇಟ್ಟು ಕಚಗುಳಿ ಕೊಟ್ಟಿದ್ದಾರೆ. ಇದಕ್ಕೆ ನಗು ನಗುತ್ತಾ ರಶ್ಮಿಕಾ ಪಕ್ಕಕ್ಕೆ ಸರಿಯುವುದು ವಿಡಿಯೋದಲ್ಲಿದೆ. ಕೆಲವೇ ಗಂಟೆಗಳಲ್ಲಿ ಈ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಗಿ ವೈರಲ್ ಆಗಿದ್ದು, ಅವರಿಬ್ಬರ ಸಂಬಂಧದ ಬಗ್ಗೆ ನೆಟ್ಟಿಗರು ಅನುಮಾನ ವ್ಯಕ್ತಪಡಿಸಲು ಶುರು ಮಾಡಿದ್ದಾರೆ.

ಘಟನೆ ನಡೆದಾಗ ಶಾಹಿದ್ ಕಪೂರ್ ಏನನ್ನು ಹೇಳಿರಲಿಲ್ಲ. ಅವರು ಮತ್ತೊಂದು ಸುತ್ತಿನ ಪ್ರಚಾರಕ್ಕಾಗಿ ಶುಕ್ರವಾರ ಸೇರಿದಾಗ ವೈರಲ್ ವಿಡಿಯೋ ವಿಚಾರ ಕುರಿತು ಮಾತನಾಡಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ನಟಿ ಕೃತಿ ಸನೋನ್ ಜೊತೆಗೆ ನಿಂತು ಮೊದಲ ಕ್ಲೀಪ್ ನಲ್ಲಿ ಇರುವಂತೆ ಶಾಹಿದ್ ಕಪೂರ್ ಮತ್ತೆ ತಮಾಷೆ ಮಾಡಿದ್ದಾರೆ. ಇದಕ್ಕೆ ಕೃತಿ ಸನೋನ್ ಹಾಗೂ ರಶ್ಮಿಕಾ ಮಂದಣ್ಣ ನಗುತ್ತಾ ಪ್ರತಿಕ್ರಿಯಿಸುವುದು ವಿಡಿಯೋದಲ್ಲಿದೆ.

ಹೋಮಿ ಅಡಜಾನಿಯಾ ನಿರ್ದೇಶನದ ಕಾಕ್ ಟೇಲ್ 2 ಚಿತ್ರದಲ್ಲಿ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಜೂನ್ 19, 2026 ರಂದು ಚಿತ್ರಮಂದಿರಗಳಿಗೆ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲೋಕಭವನಕ್ಕೆ ತೆರಳಿದ ಡಿಕೆ ಶಿವಕುಮಾರ್: ಸರ್ಕಾರ ರಚನೆಗೆ ರಾಜ್ಯಪಾಲರ ಆಹ್ವಾನ; ಜೂ. 3ಕ್ಕೆ ಸಿಎಂ ಆಗಿ ಪ್ರಮಾಣವಚನ!

ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಅಥವಾ ಗೋಹತ್ಯೆ ನಿಷೇಧಿಸುವ ಯಾವುದೇ ಪ್ರಸ್ತಾಪವಿಲ್ಲ: ಕೇಂದ್ರ ಸಚಿವ

ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್; ಎರಡು ಅಕ್ರಮ ಅದಿರು ಸಾಗಾಟ ಪ್ರಕರಣ​ ಕೈಬಿಟ್ಟ ಕೋರ್ಟ್

Karnataka CM News LIVE Updates | ಲೋಕಭವನಕ್ಕೆ ತೆರಳಿದ ಡಿಕೆ ಶಿವಕುಮಾರ್: ಸರ್ಕಾರ ರಚನೆಗೆ ಹಕ್ಕು ಮಂಡನೆ; ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ರಾಜ್ಯಪಾಲರ ಆಹ್ವಾನ!

ಸಿದ್ದರಾಮಯ್ಯಗೆ ವಿಶ್ರಾಂತಿ ನೀಡಲ್ಲ, ಅವರ ಸೇವೆ ಇನ್ನೂ ಅಗತ್ಯವಿದೆ: CLP ಸಭೆಯಲ್ಲಿ ವೇಣುಗೋಪಾಲ್ ಭಾವುಕ

SCROLL FOR NEXT