ಸಬಾ ಆಜಾದ್ - ಹೃತಿಕ್ ರೋಷನ್ 
ಬಾಲಿವುಡ್

ಪ್ರೇಯಸಿ ಸಬಾ ಆಜಾದ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡ ಹೃತಿಕ್ ರೋಷನ್; ಮಾಜಿ ಪತ್ನಿ ಸುಸಾನೆ ಖಾನ್ ಕ್ಯೂಟ್ ಪ್ರತಿಕ್ರಿಯೆ

ಸಬಾ ಮತ್ತು ಹೃತಿಕ್ 2022ರಲ್ಲಿ ಕರಣ್ ಜೋಹರ್ ಅವರ 50ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ಬಹಿರಂಗಪಡಿಸಿದರು.

ಹೃತಿಕ್ ರೋಷನ್ ತಮ್ಮ ಗೆಳತಿ ಸಬಾ ಆಜಾದ್ ಅವರೊಂದಿಗೆ ಒಟ್ಟಿಗಿರುವ ಕೆಲವು ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ, ತಾವು ಒಟ್ಟಾಗಿ ಕಳೆದ ಐದು ವರ್ಷಗಳ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಹೃತಿಕ್ ಅವರ ಮಾಜಿ ಪತ್ನಿ ಸುಸಾನೆ ಖಾನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

'ಇದು ನಮ್ಮ ಹುಟ್ಟುಹಬ್ಬ. 5ನೇ ವರ್ಷದ ಸಂಭ್ರಮದ ಶುಭಾಶಯಗಳು ನನ್ನ ಪ್ರೀತಿಯೇ' ಎಂದು ಬರೆದುಕೊಂಡಿದ್ದಾರೆ. 'ಕ್ರಿಶ್' ನಟ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಹಂಚಿಕೊಂಡ ತಕ್ಷಣವೇ ಅದು ನೆಟ್ಟಿಗರ ಗಮನ ಸೆಳೆದಿದ್ದು, ಮೆಚ್ಚುಗೆ ಹಾಗೂ ಶುಭಾಶಯಗಳ ಮಹಾಪೂರವೇ ಹರಿದಿದೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸುಸಾನೆ, 'ತುಂಬಾ ಮುದ್ದಾಗಿದೆ, ವಾರ್ಷಿಕೋತ್ಸವದ ಶುಭಾಶಯಗಳು' ಎಂದು ಬರೆದಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ, ಹೃತಿಕ್ ರೋಷನ್ ಅವರ ಸೋದರಸಂಬಂಧಿ ಇಶಾನ್ ರೋಷನ್ ಅವರ ವಿವಾಹ ಸಮಾರಂಭವು ಮುಂಬೈನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹೃತಿಕ್ ಅವರು ತಮ್ಮ ಗೆಳತಿ ಸಬಾ ಆಜಾದ್ ಅವರೊಂದಿಗೆ ರೋಷನ್ ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆ ಸಮಯದಲ್ಲಿ ಸಬಾ ಅವರು ಐಶ್ವರ್ಯಾ ಸಿಂಗ್ ಅವರನ್ನು ರೋಷನ್ ಕುಟುಂಬಕ್ಕೆ ಸ್ವಾಗತಿಸಲು ಇನ್‌ಸ್ಟಾಗ್ರಾಂನಲ್ಲಿ, 'ನಿಮ್ಮ ಜೀವನದ ಅತ್ಯಂತ ಮಹತ್ವದ ಬಾಂಧವ್ಯದ ಆರಂಭವಿದು; ನಮ್ಮ ಪ್ರೀತಿಯ ಐಶೂ ಐಶ್ವರ್ಯಾ ಸಿಂಗ್‌) ಅವರೇ, ಈ ಕುಟುಂಬಕ್ಕೆ ನಿಮಗೆ ಸುಸ್ವಾಗತ. ಈ ಸುದೀರ್ಘ ಪಯಣದಲ್ಲಿ ನೀವಿಬ್ಬರೂ ಅತ್ಯುತ್ತಮ ಸ್ನೇಹಿತರಾಗಿ ಮುಂದುವರಿಯಿರಿ ಮತ್ತು ಸಹಾನುಭೂತಿ, ಹಾಸ್ಯ ಹಾಗೂ ಹಗುರವಾದ ಮನಸ್ಥಿತಿ ಎಂದಿಗೂ ನಿಮ್ಮೊಂದಿಗೆ ಇರಲಿ' ಎಂದು ಬರೆದಿದ್ದಾರೆ.

ಸಬಾ ಮತ್ತು ಹೃತಿಕ್ 2022ರಲ್ಲಿ ಕರಣ್ ಜೋಹರ್ ಅವರ 50ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ಬಹಿರಂಗಪಡಿಸಿದರು. ಸಬಾ ಅವರು ಹೃತಿಕ್ ಅವರ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ ಮತ್ತು ಸುಸಾನೆ ಖಾನ್ ಅವರೊಂದಿಗಿನ ವಿವಾಹದಿಂದ ಜನಿಸಿದ ಹೃತಿಕ್ ಅವರ ಪುತ್ರರಾದ ಹ್ರೆಹಾನ್ ಹಾಗೂ ಹೃಧಾನ್ ಅವರೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶಾಸನಬದ್ಧ ಕಾರ್ಯವಿಧಾನ ಅನುಸರಿಸದೆ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವಂತಿಲ್ಲ: ಚುನಾವಣಾ ಆಯೋಗದ ವಿರುದ್ಧ ಹೈಕೋರ್ಟ್ ಕೆಂಡ..!

Flydubai ವಿಮಾನ ಹೈಜಾಕ್'ಗೆ ಯತ್ನ; ಕಾಕ್‌ಪಿಟ್‌ನಲ್ಲೇ ಡೆಡ್ಲಿ ಫೈಟ್; 174 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಸಾಹಸಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ..!

ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: ವಾಣಿಜ್ಯ ಸಿಲಿಂಡರ್ ಬೆಲೆ 62.50 ರೂ. ಹೆಚ್ಚಳ, ವಿಮಾನ ಇಂಧನವೂ ದುಬಾರಿ..!

ಕಾಂಗ್ರೆಸ್‌ನಲ್ಲಿ ಮತ್ತೆ ಸಂಪುಟ ಸರ್ಕಸ್: ದೆಹಲಿಯಲ್ಲಿ ವೇಣುಗೋಪಾಲ್ ಭೇಟಿಯಾದ ಸಿದ್ದರಾಮಯ್ಯ, ಖಾಲಿ ಇರೋ 2 ಸಚಿವ ಸ್ಥಾನ ಭರ್ತಿಗೆ ಪಟ್ಟು..!

ಡಿಕೆಶಿ ಕನಸಿನ ಅವಳಿ ಸುರಂಗ ಮಾರ್ಗಕ್ಕೆ ಹೊಸ ಕಂಟಕ: ಹೆಬ್ಬಾಳ ಕೆರೆಯ 3.45 ಎಕರೆ ಜೌಗು ಪ್ರದೇಶ ನಾಶಕ್ಕೆ ಯತ್ನ, ಎದುರಾಯ್ತು ಕಾನೂನು ಸಂಕಷ್ಟ..!