ಟೈಗರ್ ಶ್ರಾಫ್ 
ಬಾಲಿವುಡ್

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಹಲವರಿಗೆ ಗಾಯ; ನಟ ಪ್ರಾಣಾಪಾಯದಿಂದ ಪಾರು, Video!

ಮುಂಬೈನ ಜುಹು ಕ್ಯಾಂಪಸ್‌ನಲ್ಲಿರುವ ಪುಷ್ಪಾ ಪಾರ್ಕ್‌ನಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಮತ್ತು ಅವರ ಚಾಲಕನ ಮೇಲೆ ಮೂವರು ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ಮುಂಬೈನ ಜುಹು ಕ್ಯಾಂಪಸ್‌ನಲ್ಲಿರುವ ಪುಷ್ಪಾ ಪಾರ್ಕ್‌ನಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಮತ್ತು ಅವರ ಚಾಲಕನ ಮೇಲೆ ಮೂವರು ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಹಠಾತ್ ದಾಳಿಯಲ್ಲಿ ನಟ ಟೈಗರ್ ಶ್ರಾಫ್, ಅವರ ಚಾಲಕ ಮತ್ತು ರಿಕ್ಷಾ ಚಾಲಕ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಬಂದಿದೆ. ಮೂವರು ಅಪರಿಚಿತ ವ್ಯಕ್ತಿಗಳು ಟೈಗರ್ ಶ್ರಾಫ್ ಮೇಲೆ ಹಠಾತ್ತನೆ ಗುಂಡು ಹಾರಿಸಿದ್ದಾರೆ. ದಾಳಿಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪ್ರಸ್ತುತ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ನಟನ ಕಾರಿನತ್ತ ವ್ಯಕ್ತಿಯೊಬ್ಬ ಗುಂಡು ಹಾರಿಸುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಟ ಸುರಕ್ಷಿತವಾಗಿದ್ದು, ಈ ಘಟನೆಯಲ್ಲಿ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯ ಕುರಿತ ಹೆಚ್ಚಿನ ವಿವರಗಳು ಹಾಗೂ ಗಾಯಗೊಂಡವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಘಟನೆಯಲ್ಲಿ ಭಾಗಿಯಾದವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಸುಳಿವುಗಳನ್ನು ಕಂಡುಕೊಳ್ಳಲು ವಿಶೇಷ ಪೊಲೀಸ್ ತಂಡಗಳು ಆ ಪ್ರದೇಶದ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಟ ಸುದೀಪ್‌-ಪ್ರಿಯಾ ದಾಂಪತ್ಯಕ್ಕೆ ಬೆಳ್ಳಿ ಹಬ್ಬದ ಸಂಭ್ರಮ; ಆಪ್ತರ ಸಮ್ಮುಖದಲ್ಲಿ ಅದ್ದೂರಿ ಸೆಲೆಬ್ರೇಷನ್! Video ನೋಡಿ

'ಬಿಜೆಪಿ ಅಂದ್ರೆ ಭಾರತ ಅಲ್ಲ, BJP ವಿರುದ್ಧ ಮಾತನಾಡುವುದೂ ದೇಶದ್ರೋಹವಲ್ಲ': CJP ಪ್ರತಿಭಟನೆ ಬೆಂಬಲಿಸಿ ನಟಿ ಪೂಜಾ ಬೇಡಿ Video

ರಾವಣನ ಹತ್ತು ತಲೆಗಳಲ್ಲಿ ರಾಹುಲ್ ಗಾಂಧಿ, ಅಖಿಲೇಶ್, ಎಲಾನ್ ಮಸ್ಕ್; ವಿವಾದಾತ್ಮಕ ಪೋಸ್ಟರ್‌ ವೈರಲ್

ಮೈಸೂರು: ಅರ್ಕೇಶ್ವರ ದೇವಸ್ಥಾನದ ಮೇಲೆ ಶಿಲುಬೆ, ಮಸೀದಿ ಚಿತ್ರ ವಿವಾದ; ಇದು ಕಲಬೆರಕೆ ಹಿಂದೂಗಳ ಕೆಲಸ, ಪ್ರತಾಪ್ ಸಿಂಹ ಆಕ್ರೋಶ, Video!

ಮತದಾರರ ಪಟ್ಟಿಯಲ್ಲಿ ಕೈ ಬಿಟ್ಟ ಹೆಸರು ಮರುಸೇರ್ಪಡೆಗೊಳಿಸಲು 'ನಮೂನೆ 6' ಬಳಸಬಹುದು: ಹೈಕೋರ್ಟ್‌ಗೆ ಚುನಾವಣಾ ಆಯೋಗದ ಮಾಹಿತಿ