ಪೆದ್ದಿ ಚಿತ್ರದ ವಿವಾದದ ಬಗ್ಗೆ ಮೌನ ಮುರಿದ ಜಾನ್ವಿ ಕಪೂರ್ Online Desk
ಬಾಲಿವುಡ್

ಆ ದೃಶ್ಯ ಸಮಾಜಕ್ಕೆ ಕೆಟ್ಟ ಸಂದೇಶ ನೀಡಿತ್ತು, ನನ್ನ ಆತ್ಮಸಾಕ್ಷಿ ಕಾಡುತ್ತಿದೆ: ಪೆದ್ದಿ ಚಿತ್ರದ ವಿವಾದದ ಬಗ್ಗೆ ಮೌನ ಮುರಿದ ಜಾನ್ವಿ ಕಪೂರ್

ರಾಮ್ ಚರಣ್ ನಟನೆಯ ಮತ್ತು ಬುಚ್ಚಿ ಬಾಬು ಸನಾ ನಿರ್ದೇಶನದ ತೆಲುಗು ಕ್ರೀಡಾ ಆಕ್ಷನ್ ಚಿತ್ರ ಪೆದ್ದಿನಲ್ಲಿ ತಮ್ಮ ಪಾತ್ರದ ಅತಿಯಾದ ವಸ್ತುಕರಣ ಮತ್ತು ಲೈಂಗಿಕ ದೌರ್ಜನ್ಯವನ್ನು ಉತ್ತೇಜಿಸುವಂತಿದ್ದ ದೃಶ್ಯಗಳ ಲೋಪಗಳನ್ನು ನಟಿ ಜಾನ್ವಿ ಕಪೂರ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಮುಂಬೈ (ಮಹಾರಾಷ್ಟ್ರ): ರಾಮ್ ಚರಣ್ ನಟನೆಯ ಮತ್ತು ಬುಚ್ಚಿ ಬಾಬು ಸನಾ ನಿರ್ದೇಶನದ ತೆಲುಗು ಕ್ರೀಡಾ ಆಕ್ಷನ್ ಚಿತ್ರ ಪೆದ್ದಿನಲ್ಲಿ ತಮ್ಮ ಪಾತ್ರದ ಅತಿಯಾದ ವಸ್ತುಕರಣ ಮತ್ತು ಲೈಂಗಿಕ ದೌರ್ಜನ್ಯವನ್ನು ಉತ್ತೇಜಿಸುವಂತಿದ್ದ ದೃಶ್ಯಗಳ ಲೋಪಗಳನ್ನು ನಟಿ ಜಾನ್ವಿ ಕಪೂರ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಸೀಸನ್ 9ರ ಚಾಟ್ ಶೋನಲ್ಲಿ ಭಾಗವಹಿಸಿದ್ದ ಅವರು ಈ ವಿವಾದದ ಕುರಿತು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಏನಿದು ವಿವಾದ?

ರಾಮ್ ಚರಣ್ ನಾಯಕರಾಗಿ ನಟಿಸಿರುವ, ಬುಚ್ಚಿ ಬಾಬು ಸನಾ ನಿರ್ದೇಶನದ ಪೆದ್ದಿ ಕ್ರೀಡಾ ಆಧಾರಿತ ಸಿನಿಮಾವಾಗಿದ್ದರೂ, ಅದರಲ್ಲಿ ಜಾನ್ವಿ ಕಪೂರ್ ಅವರ ಅಚಿಯಮ್ಮ ಪಾತ್ರವನ್ನು ತೋರಿಸಿದ ರೀತಿ ತೀವ್ರ ಟೀಕೆಗೆ ಒಳಗಾಗಿತ್ತು. ಚಿತ್ರ ಬಿಡುಗಡೆಯಾದಾಗ, ಕಥೆಗಿಂತ ಹೆಚ್ಚಾಗಿ ಅವರ ಜಾನ್ವಿ ದೇಹವನ್ನು ಪ್ರದರ್ಶಿಸುವ ಕ್ಯಾಮೆರಾ ಆ್ಯಂಗಲ್‌ಗಳನ್ನು ಬಳಸಲಾಗಿದೆ ಎಂದು ಪ್ರೇಕ್ಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರಮುಖವಾಗಿ, ನಾಯಕಿ ಇಷ್ಟಪಡದಿದ್ದರೂ ವಿದ್ಯುತ್ ಕೈಕೊಟ್ಟಾಗ ನಾಯಕ ಆಕೆಗೆ ಬಲವಂತವಾಗಿ ಮುತ್ತಿಕ್ಕುವ ದೃಶ್ಯವು ಲೈಂಗಿಕ ದೌರ್ಜನ್ಯವನ್ನು ಸಾಮಾನ್ಯೀಕರಿಸುವಂತೆ ಮತ್ತು ಉತ್ತೇಜಿಸುವಂತೆ ಇದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು.

ಆ ದೃಶ್ಯ ಸಮಾಜಕ್ಕೆ ಕೆಟ್ಟ ಸಂದೇಶ ನೀಡಿತ್ತು

ಮುಂದುವರೆದು, ಕಾಫಿ ವಿತ್ ಕರಣ್ ಶೋನಲ್ಲಿ ಈ ಕುರಿತ ಚಿತ್ರಕಥೆಯು ನಿರೂಪಣೆಯ ದೃಷ್ಟಿಯಿಂದ ಲೈಂಗಿಕ ದೌರ್ಜನ್ಯವನ್ನು ಉತ್ತೇಜಿಸುವಂತಿತ್ತೇ ಎಂಬ ಪ್ರಶ್ನೆಗೆ, "ಹೌದು, ಕಥೆಯ ಪ್ರಕಾರ ಅದು ಲೈಂಗಿಕ ದೌರ್ಜನ್ಯವನ್ನೇ ಬಿಂಬಿಸುವಂತಿತ್ತು ಮತ್ತು ಅದು ತೀವ್ರವಾದ ವಸ್ತುೀಕರಣವಾಗಿತ್ತು" ಎಂದು ಒಪ್ಪಿಕೊಂಡ ಜಾನ್ವಿ, "ಚಿತ್ರದಲ್ಲಿನ ಆ ನಿರೂಪಣೆ ಸಮಾಜದ ಮೇಲೆ, ವಿಶೇಷವಾಗಿ ಮಹಿಳೆಯರ ಮೇಲೆ ಬೀರಬಹುದಾದ ನಕಾರಾತ್ಮಕ ಪ್ರಭಾವ ನನ್ನ ಆತ್ಮಸಾಕ್ಷಿಯನ್ನು ಕಾಡುತ್ತಿದೆ. ಆ ಅಪರಾಧ ಪ್ರಜ್ಞೆಯನ್ನು ನಾನು ಯಾವಾಗಲೂ ಹೊರಬೇಕಾಗುತ್ತದೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಪರೀಕ್ಷಾ ಮಾನಿಟರ್ ನೋಡಿ ಪ್ರತಿಭಟಿಸಬೇಕಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು 100% ಹೆಚ್ಚು ಜಾಗರೂಕರಾಗಿರಬೇಕಿತ್ತು. ಶೂಟಿಂಗ್ ಸಮಯದಲ್ಲಿ ನನಗೆ ಅಸಹಜತೆ ಮತ್ತು ಮುಜುಗರ ಅನಿಸುತ್ತಿತ್ತು. ನಾನು ಸ್ಟಾರ್ ಕಿಡ್ ಆಗಿ ಚಿತ್ರರಂಗದಲ್ಲಿ ಪ್ರಭಾವಿ ಸ್ಥಾನದಲ್ಲಿದ್ದರೂ, ಆ ಪ್ರಭಾವವನ್ನು ಬಳಸಿ ನಿರ್ದೇಶಕರನ್ನು ಪ್ರಶ್ನಿಸದೇ ಹೋದದ್ದು ನನ್ನ ತಪ್ಪು, ಇದರ ಅರ್ಧ ಜವಾಬ್ದಾರಿಯನ್ನು ನಾನು ಹೊರುತ್ತೇನೆ" ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಈ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಚಿತ್ರದ ನಿರ್ದೇಶಕ ಬುಚಿ ಬಾಬು ಸನಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಮಹಿಳೆಯರನ್ನು ಕೀಳಾಗಿ ಬಿಂಬಿಸುವ ಯಾವುದೇ ಉದ್ದೇಶ ತಮಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದ ಅವರು, ಒಟಿಟಿ ಮತ್ತು ಚಿತ್ರಮಂದಿರಗಳ ಪ್ರದರ್ಶನದಲ್ಲಿ ವಿವಾದಾತ್ಮಕ ದೃಶ್ಯಗಳನ್ನು ಕತ್ತರಿಸಿ ಮರು-ಅಪ್‌ಲೋಡ್ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನಾಸೀರುದ್ದೀನ್ ಶಾ ಸೈದ್ಧಾಂತಿಕ ಒಲವುಗಳನ್ನು ನಾನು ತಪ್ಪಾಗಿ ಅರ್ಥೈಸಿದ್ದೆ: ಅವರೊಬ್ಬ ಅಪಾಯಕಾರಿ ದಿಮಾಗಿ ನಕ್ಸಲ್, ವಿನಾಶಕಾರಿ ಚಿಂತಕ'

ವಿದೇಶದಲ್ಲಿರುವ ಭಾರತೀಯರು ಉದ್ಯೋಗವಿಲ್ಲದೆ ಭಾರತಕ್ಕೆ ಮರಳಲು ಎಷ್ಟು ಹಣ ಬೇಕು? (ಹಣಕ್ಲಾಸು)

ಹಾಸನಾಂಬ ದರ್ಶನಕ್ಕೆ ಕ್ಷಣಗಣನೆ, ಇಂದು ಗರ್ಭಗುಡಿ ಬಾಗಿಲು ಓಪನ್! ಈ ಬಾರಿ ಸುಮಾರು 30 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ

ಅಮೆಜಾನ್ ನಿಂದ ಮತ್ತೆ 250 ಉದ್ಯೋಗ ಕಡಿತ: ಬೆಳ್ಳಂಬೆಳಿಗ್ಗೆ ಉದ್ಯೋಗಿಗಳಿಗೆ ಇ-ಮೇಲ್ ಶಾಕ್, ಆಘಾತ!

ದೇವರಿಲ್ಲ ಎಂದು ನಾನು ಹೇಳಿಲ್ಲ: ಕೆಟ್ಟ ಕೆಲಸ ಮಾಡಿ ಪೂಜೆ ಮಾಡಿದರೆ ದೇವರು ಒಳ್ಳೆಯದು ಮಾಡಲ್ಲ; ಸಿದ್ದರಾಮಯ್ಯ