ಪಾಕ್ ನಟಿ ಮಹಿರಾ ಖಾನ್ 
ಬಾಲಿವುಡ್

41ನೇ ವಯಸ್ಸಿನಲ್ಲಿ ಎರಡನೇ ಮಗು: ಬೇಬಿ ಬಂಪ್‌ ಫೋಟೊ ಹಂಚಿಕೊಂಡ ಪಾಕಿಸ್ತಾನಿ ನಟಿ ಮಹಿರಾ ಖಾನ್‌

41 ವರ್ಷದ ನಟಿ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2026ರಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೇಬಿ ಬಂಪ್‌ ಕಾಣುವ ಫೋಟೊವನ್ನು ಪೋಸ್ಟ್‌ ಮಾಡಿದ್ದಾರೆ.

ಲಾಹೋರ್: ಪಾಕಿಸ್ತಾನದ ಖ್ಯಾತ ನಟಿ ಮಹಿರಾ ಖಾನ್ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

41 ವರ್ಷದ ನಟಿ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2026ರಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೇಬಿ ಬಂಪ್‌ ಕಾಣುವ ಫೋಟೊವನ್ನು ಪೋಸ್ಟ್‌ ಮಾಡಿದ್ದಾರೆ.

ಬಿಳಿ ಬಣ್ಣದ ಉದ್ದನೆಯ ಗೌನ್‌ ಧರಿಸಿರುವ ನಟಿ, ಒಂದು ಕೈಯನ್ನು ಹೊಟ್ಟೆಯ ಮೇಲಿಟ್ಟು ನಗುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫೋಟೊಗೆ, "ನಾವು ಪ್ಲಾನ್ ಗಳನ್ನು ರೂಪಿಸುತ್ತೇವೆ. ಆದರೆ ಅಲ್ಲಾಹನ ಯೋಜನೆಯೇ ಅಂತಿಮ" ಎಂದು ಮಹಿರಾ ಖಾನ್‌ ಶೀರ್ಷಿಕೆ ನೀಡಿದ್ದಾರೆ.

ಟೊರೊಂಟೊ ಚಲನಚಿತ್ರೋತ್ಸವದಲ್ಲಿ ಗೌರವ

ಮಹಿರಾ ಖಾನ್‌ ಅವರು ಪ್ರಸ್ತುತ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಉತ್ಸವದ ‘ಕಮ್ಯುನಿಟಿ ಇಂಪ್ಯಾಕ್ಟ್‌’ ಕಾರ್ಯಕ್ರಮದ ಅಂಗವಾಗಿ ನಡೆದ ಸಂವಾದವನ್ನು ಅವರು ನಿರ್ವಹಿಸಿದ್ದಾರೆ. ಇದೇ ವೇಳೆ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಅವರನ್ನು ಗೌರವಿಸಲಾಗಿದೆ.

2016ರಲ್ಲಿ ಶಾರುಖ್‌ ಖಾನ್‌ ಅಭಿನಯದ ‘ರಾಯೀಸ್‌’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ಮಹಿರಾ ಖಾನ್‌, ಸುಮಾರು ಒಂದು ದಶಕದ ಬಳಿಕ ಮತ್ತೆ ಟೊರೊಂಟೊ ಚಲನಚಿತ್ರೋತ್ಸವದಲ್ಲಿ ಗಮನ ಸೆಳೆದಿದ್ದಾರೆ.

ಉದ್ಯಮಿ ಸಲೀಂ ಕರೀಂ ಜೊತೆ ಮೊದಲ ಮಗು

ಮಹಿರಾ ಖಾನ್‌ ಅವರು ಉದ್ಯಮಿ ಸಲೀಂ ಕರೀಂ ಅವರನ್ನು 2023ರ ಅಕ್ಟೋಬರ್‌ನಲ್ಲಿ ವಿವಾಹವಾಗಿದ್ದು, ಇದೀಗ ದಂಪತಿಗೆ ಮೊದಲ ಮಗುವಿನ ನಿರೀಕ್ಷೆಯಿದೆ. ಆದರೆ ಮಹಿರಾ ಖಾನ್‌ ಅವರಿಗೆ ಇದು ಎರಡನೇ ಮಗು. ನಟಿ ತಮ್ಮ ಮೊದಲ ಪತಿ ಅಲಿ ಅಸ್ಕರಿ ಅವರೊಂದಿಗಿನ ವಿವಾಹದಿಂದ 17 ವರ್ಷದ ಅಜ್ಲಾನ್‌ ಎಂಬ ಮಗನನ್ನು ಹೊಂದಿದ್ದಾರೆ.

ಮಹಿರಾ ಖಾನ್‌ ಅವರ ಎರಡನೇ ವಿವಾಹದಲ್ಲೂ ಅಜ್ಲಾನ್‌ ಪ್ರಮುಖ ಪಾತ್ರ ವಹಿಸಿದ್ದರು. ಸಲೀಂ ಕರೀಂ ಅವರೊಂದಿಗಿನ ವಿವಾಹದ ಸಂದರ್ಭದಲ್ಲಿ ಅವರು ತಾಯಿಯ ಜೊತೆಗಿದ್ದರು. ಅಲ್ಲದೆ, ತಾಯಿಯನ್ನು ವಿವಾಹ ವೇದಿಕೆಯತ್ತ ಕರೆತಂದಿದ್ದರು.

ಸಿನಿಮಾ ಕ್ಷೇತ್ರದಲ್ಲಿ ಮಹಿರಾ ಖಾನ್‌

ಸಿನಿಮಾ ಕ್ಷೇತ್ರದಲ್ಲಿ ಮಹಿರಾ ಖಾನ್‌ ಅವರು ಕೊನೆಯದಾಗಿ ಬಿಲಾಲ್‌ ಆತಿಫ್‌ ಖಾನ್‌ ನಿರ್ದೇಶನದ ‘ಆಗ್‌ ಲಗಾಯ್‌ ಬಸ್ತಿ ಮೇನ್‌’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪಾಕಿಸ್ತಾನದ ಉರ್ದು ಭಾಷೆಯ ಈ ಚಿತ್ರದಲ್ಲಿ ಫಹಾದ್‌ ಮುಸ್ತಫಾ ನಾಯಕನಾಗಿ ನಟಿಸಿದ್ದಾರೆ.

ಜಾವೇದ್‌ ಶೇಖ್‌, ತಬಿಶ್‌ ಹಶ್ಮಿ, ಸಲಾಹುದ್ದೀನ್‌ ಟುನಿಯೊ, ಅಲಿ ಅಬ್ದುಲ್ಲಾ, ಸಮ್ರಾ ಶೆಹಜಾದಿ ಹಾಗೂ ಹಫೀಜ್‌ ರಝಾ ಅಹ್ಮದ್‌ ಕೂಡ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟಿ.ನರಸೀಪುರ ಪೊಲೀಸ್ ಠಾಣೆ ಮುಂದೆ ಭಾರೀ ಹೈಡ್ರಾಮಾ: ಆರ್ ಅಶೋಕ್, ಯದುವೀರ್, ಪ್ರತಾಪ್ ಸಿಂಹ ಸೇರಿ ಬಿಜೆಪಿ ನಾಯಕರು ಪೊಲೀಸರ ವಶಕ್ಕೆ

ಸತೀಶ್ ಜಾರಕಿಹೊಳಿಗೆ ಸಿದ್ದರಾಮಯ್ಯನವ್ರ 'ಶಾಪ' ತಟ್ಟಿದೆ!: ಯತ್ನಾಳ್ ಹೊಸ 'ಬಾಂಬ್'

ದಲಿತರು, ಅಲ್ಪಸಂಖ್ಯಾತರೇ ಬಿಜೆಪಿಗೆ ಸೇರಬೇಡಿ: ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿ.ಕೆ ಹರಿಪ್ರಸಾದ್ ಕರೆ

252 ಮದರಸಾಗಳನ್ನು ಮುಚ್ಚಲು ಪಶ್ಚಿಮ ಬಂಗಾಳ ಸರ್ಕಾರ ಆದೇಶ; 100 ಮದರಸಾಗಳಿಗೆ ಶೋ-ಕಾಸ್ ನೋಟಿಸ್!

ಇಡೀ ಸರಣಿಯಲ್ಲಿ ಒಂದೂ ಶತಕವಿಲ್ಲ; 138 ವರ್ಷಗಳ ಬಳಿಕ ಅಪರೂಪದ ರೆಕಾರ್ಡ್, ಇಂಗ್ಲೆಂಡ್‌-ಪಾಕಿಸ್ತಾನ ಹೀನಾಯ ದಾಖಲೆ!