ಸಿನಿಮಾ ಲೇಖನ

ಡವ್ ಸೆಟ್

ಸ್ಟಾರ್ ನಟರ ಚಿತ್ರಗಳಲ್ಲಿ ಅವರಷ್ಟೇ ಪ್ರಭಾವಿ ನಟರು ಗೆಸ್ಟ್ ಆಗಿ ಕಾಣಿಸಿಕೊಳ್ಳುವುದು ಕಾಮನ್. ಆದರೆ ಇತ್ತೀಚೆಗೆ ನವರಸ ನಾಯಕ ಜಗ್ಗೇಶ್ ಫುಲ್ ಜೋಶ್ ಆಗಿ ಸ್ಟೆಪ್ಸ್ ಹಾಕಿದ್ದು ಹೊಸಬರ ಚಿತ್ರಕ್ಕೆ. ಈ ಹಿಂದೆ 'ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ' ಎನ್ನುವ ಚಿತ್ರಕ್ಕೆ ಅಮೆರಿಕದಲ್ಲಿ ಜೋರಾಗಿಯೇ ಕುಣಿದ ಜಗ್ಗೇಶ್, ಈಗ ಏಕಾಏಕಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹೌದು, 'ಡವ್‌' ಚಿತ್ರದ ಐಟಂ ಬೆಡಗಿ ಜೊತೆ ತಮ್ಮದೇ ಸ್ಟೈಲಿನಲ್ಲಿ ಕುಣಿದ್ದಾರೆ.
ಜಗಮಗಿಸುವ ಕಲರ್‌ಫುಲ್ ಸೆಟ್‌ನಲ್ಲಿ 'ಮೈ' ಸ್ಪರ್ಶವಾಗುಂತೆ ಬಟ್ಟೆ ತೊಟ್ಟ ನಾರಿ. ಆಕೆಯ ಪಕ್ಕ ನಾಯಕ ಅನೂಪ್, ಮತ್ತೊಂದೆಡೆ ಜಗ್ಗೇಶ್... ಐಟಂ ರಾಣಿಯ ಸೊಂಟ ಹಿಡಿದು ಕುಣಿಯುತ್ತಿದ್ದರೆ ತುಸು ದೂರದಲ್ಲಿದ್ದ ಪ್ರಮೀಳಾ ಜಗ್ಗೇಶ್ ನಾಚಿ ನಗುತ್ತಿದ್ದರು. ಸಂತು ನಿರ್ದೇಶನದ ಈ ಚಿತ್ರಕ್ಕೆ ಬಿ.ಕೆ. ಶ್ರೀನಿವಾಸ್ ನಿರ್ಮಾಪಕರು. ಸಾ.ರಾ. ಗೋವಿಂದು ಪುತ್ರ ಅನೂಪ್ ಹಾಗೂ ರಾಕೇಶ್ ಅಡಿಗ ಚಿತ್ರದ ನಾಯಕರು. ಅದಿತಿ ರಾವ್ ಚಿತ್ರದ ನಾಯಕಿ. ಚಂದ್ರಶೇಖರ್ ಅವರ ಛಾಯಾಗ್ರಾಹಣ ಚಿತ್ರಕ್ಕಿದೆ. '50 ದಿನಗಳ ಚಿತ್ರೀಕರಣ ಪೂರ್ಣಗೊಂಡಿದೆ' ಎನ್ನುವ ಮಾತಿನೊಂದಿಗೆ ನಿರ್ದೇಶಕರು ಮೈಕ್ ಹಿಡಿದು ಎದ್ದು ನಿಂತರು. 'ನಮ್ಮ ನಿರೀಕ್ಷೆಯಂತೆ ಸಿನಿಮಾ ಮೂಡಿ ಬಂದಿದೆ. ನಿರ್ಮಾಪಕರು ಚಿತ್ರಕ್ಕೆ ಏನು ಬೇಕೋ ಅದನ್ನು ಕೊಟ್ಟಿದ್ದಾರೆ. ಇನ್ನು ನಮ್ಮ ಚಿತ್ರದಲ್ಲಿ ಜಗ್ಗೇಶ್ ಸಾರ್ ಬಂದು ಡ್ಯಾನ್ಸ್ ಮಾಡಿದ್ದು ನಮ್ಮ ಅದೃಷ್ಟ. ಪಕ್ಕಾ ಮಾಸ್ ಚಿತ್ರಕ್ಕೆ ಏನು ಬೇಕೋ ಅದನ್ನು ಇಲ್ಲಿ ಕೊಡುತ್ತೇವೆ' ಎಂದರು ಸಂತು.

ನವರಸ ನಾಯಕನ ಸ್ಟೆಪ್ಸ್ ನೋಡಿ ಫುಲ್ ಖುಷಿಯಾಗಿದ್ದ ಬಿ.ಕೆ. ಶ್ರೀನಿವಾಸ್, ಮುಂದೆ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ತುಂಬಾ ಅದ್ಧೂರಿಯಾಗಿ ಮಾಡುವುದಾಗಿ ಘೋಷಿಸಿದರು. ಸೆಪ್ಟೆಂಬರ್ ಎರಡನೇ ವಾರದಲ್ಲಿ ಆಡಿಯೋ ಬಿಡುಗಡೆ ಮಾಡಿದ ನಂತರ ದಸರಾಕ್ಕೆ 'ಡವ್‌' ಚಿತ್ರವನ್ನು ತೆರೆಗೆ ತರುವುದಾಗಿ ನಿರ್ಮಾಪಕರು ಹೇಳಿಕೊಂಡರು. 'ಐಟಂ ಹಾಡಿಗೆ ಹೆಜ್ಜೆ ಹಾಕಿದ್ದು ಒಳ್ಳೆಯ ಅನುಭವ. ಇಂಥ ಸಾಂಗ್ಸ್ ಆಗಾಗ ಸಿಗಲಿ' ಎಂದು ತಮ್ಮ ಸ್ಟೈಲಿನಲ್ಲಿ ಜಗ್ಗೇಶ್ ಮಾತಿನ ಕಾಗೆ ಹಾರಿಸಿದರು. ಅನೂಪ್‌ಗೆ ಇದು ಮೊದಲ ಚಿತ್ರವಾಗಿರುವುದರಿಂದ ತುಂಬಾ ಖುಷಿಯಲ್ಲಿದ್ದರು. ಸಾ.ರಾ. ಗೋವಿಂದು ಕೂಡ ಮಗನಿಗೆ ಮೊದಲ ಹೆಜ್ಜೆಯಲ್ಲೇ ಒಳ್ಳೆಯ ಸಿನಿಮಾ ಸಿಕ್ಕಿದೆ ಎನ್ನುವ ತೃಪ್ತಿಯಲ್ಲಿದ್ದರು.
ತಮ್ಮ ಮಗ ಅನೂಪ್ ಸಾಹಸ ದೃಶ್ಯಗಳಲ್ಲಿ ತುಂಬಾ ಚೆನ್ನಾಗಿ ಕಾಣುತ್ತಾನೆ. ಅವನಿಂದ ಒಳ್ಳೆಯ ಸಿನಿಮಾಗಳನ್ನು ಮಾಡಿಸಬಹುದೆಂದು ಸಾ.ರಾ. ಸಾರಿಕೊಂಡರು. ಛಾಯಾಗ್ರಾಹಕ ಚಂದ್ರಶೇಖರ್‌ರದ್ದು ಮಾತಿಗಿಂತ ಕೆಲಸ ಹೆಚ್ಚು ಮಾಡಬೇಕೆಂಬುದು ನಿಲುವು. ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಕೇಶ್ ಅಡಿಗ 'ಅಲೆಮಾರಿ' ಚಿತ್ರದಂತೆ ಇಲ್ಲೂ ಭಿನ್ನ ಪಾತ್ರ ಸಿಕ್ಕಿರುವುದಾಗಿ ಹೇಳಿಕೊಂಡರು. ನಾಯಕಿ ಅದಿತಿ ಅವಕಾಶ ಕೊಟ್ಟ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.

-  ಕೇಶು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!