ಸಿನಿಮಾ ಲೇಖನ

ದಯಾಳ್ ಕಂಪನಿಯ ಒಳಗೆ ಸೇರಿದ ಹಾಡು

ನಿರ್ದೇಶಕ ದಯಾಳ್ ಏನೇ ಮಾಡಿದರೂ ಒಂಚೂರು ಗಿಮಿಕ್‌ನ ಜೊತೆಗೆ ಡಿಫರೆಂಟ್ ಎನಿಸುತ್ತಾರೆ. ಸಿನಿಮಾ ಶುರುವಿನಿಂದಲೇ ಪಕ್ಕಾ ಪ್ಲಾನ್ ಮಾಡಿಕೊಂಡು ಹೊರಡುವ ದಯಾಳ್, ಚಿತ್ರದ ಪ್ರತಿ ಹಂತದಲ್ಲೂ 'ಪ್ಲಾನರ್‌' ಥರಾ ಕಾಣಿಸುತ್ತಾರೆ. ತಮ್ಮ ಸಿನಿಮಾದ ಸೋಲು, ಗೆಲುವು ಏನೇ ಇರಲಿ, ದಯಾಳ್ ಪ್ಲಾನ್‌ನಲ್ಲಿ ಬದಲಾವಣೆ ಆಗಲ್ಲ. ಸದ್ಯ ಬಿಡುಗಡೆಯ ಹಂತಕ್ಕೆ ಬಂದಿರುವ 'ಘರ್ಷಣೆ' ಚಿತ್ರದಲ್ಲೂ ಅವರ ಪ್ಲಾನ್ ಮುಂದುವರಿದಿದೆ ಎಂಬುದಕ್ಕೆ ಮೊನ್ನೆ ನಡೆದ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವೇ ಸಾಕ್ಷಿ. ಈ ಚಿತ್ರ ಕ್ರೈಮ್ ಆಂಡ್ ಥ್ರಿಲ್ಲರ್ ಕಥೆಯನ್ನು ಹೊಂದಿದ್ದರಿಂದ ಆಡಿಯೋ ಬಿಡುಗಡೆ ಕೂಡ ಥ್ರಿಲ್ಲಿಂಗ್ ಆಗಿರಬೇಕೆಂದುಕೊಂಡರು. ಹೀಗಾಗಿ ಕಾರ್ಯಕ್ರಮದ ನಿರೂಪಕರಾಗಿದ್ದ ನಟ ನವೀನ್ ಕೃಷ್ಣ ನಿರೂಪಣೆಯ ನಡು ನಡುವೆ ಆಡಿಯೋ ಸಿಡಿ ಬಾಕ್ಸ್ ಅನ್ನು ಎಲ್ಲಿ ಅಡಗಿಸಲಾಗಿದೆ ಎನ್ನುವುದರ ಬಗ್ಗೆ ಹುಡುಕಾಟ ಮಾಡಿಸಿದರು. ಆ ಮೂಲಕ ಸಿನಿಮಾ ಕೂಡ ಇಂಥ ಹುಡುಕಾಟವೇ ಎಂಬುದನ್ನು ಹೇಳುವ ಪ್ರಯತ್ನ ನಿರ್ದೇಶಕರದ್ದು.
ಅಂದ ಹಾಗೆ ನಟಿ ಮಾಲಾಶ್ರೀ ಅಭಿನಯದ 'ಘರ್ಷಣೆ' ಚಿತ್ರದ ಮೂಲ ತಮಿಳು. ಚೇರನ್ ನಟಿಸಿದ 'ಯದ್ಧಂ ಸೈ' ಚಿತ್ರದ ರಿಮೇಕು. ಶಂಕರ್ ರೆಡ್ಡಿ ಮತ್ತು ಶಂಕರ್ ಗೌಡ ಸೇರಿ ನಿರ್ಮಿಸುತ್ತಿರುವ ಚಿತ್ರದ ಆಡಿಯೋ ಮಾರುಕಟ್ಟೆ ಹಕ್ಕುಗಳನ್ನು ಆನಂದ್ ಆಡಿಯೋ ಕೊಂಡಿದೆ. ಮಣಿಕಾಂತ್ ಕದ್ರಿ ಹಾಗೂ ಎಸ್.ಎನ್. ಅಭಿಷೇಕ್ ಜೋಡಿ ಚಿತ್ರಕ್ಕೆ ಸಂಗೀತ ನೀಡಿದ್ದು, ಒಟ್ಟು ನಾಲ್ಕು ಹಾಡುಗಳಿವೆ. 'ಮೊದಲ ಬಾರಿಗೆ ಬೇರೆ ಬ್ಯಾನರ್‌ನಲ್ಲಿ ಮಾಲಾಶ್ರೀ ಅವರು ಅಭಿನಯಿಸುತ್ತಿದ್ದಾರೆ. ಅದು ನಮ್ಮಲ್ಲಿ ಎನ್ನುವುದು ಖುಷಿಯ ಸಂಗತಿ. ದಯಾಳ್ ತುಂಬಾ ಪ್ಲಾನ್ ಮಾಡಿಕೊಂಡು ಸಿನಿಮಾ ಮಾಡುತ್ತಾರೆ. ಅವರು ಬಂದು ಕಥೆ ಹೇಳಿದಾಗಲೇ ನಿರ್ಮಾಣ ಮಾಡಲು ಒಪ್ಪಿಕೊಂಡೆ. ದಯಾಳ್ ಅವರಲ್ಲಿ ನಾನು ಮೆಚ್ಚಿಕೊಂಡ ಗುಣ ಅದು. ಒಂದು ಅದ್ಭುತ ಕಥೆ, ಪ್ರೇಕ್ಷಕನಿಗೆ ಇಷ್ಟವಾಗುವಂಥ ಸಿನಿಮಾ' ಎಂದರು ಶಂಕರ್ ಗೌಡ.  ಶುಭ ಕೋರಲು ನಿರ್ಮಾಪಕ ಕೆ. ಮಂಜು ಬಂದಿದ್ದರು. 'ಈ ಚಿತ್ರವನ್ನು ನಾನೇ ನಿರ್ಮಾಣ ಮಾಡಬೇಕಾಗಿತ್ತು. ಜಸ್ಟ್ ಮಿಸ್ ಆಗಿದೆ. ಶಂಕರ್ ನನ್ನ ಗೆಳೆಯ. ಅವನ ಸಿನಿಮಾ ಗೆದ್ದೇ ಗೆಲ್ಲುತ್ತದೆ' ಎಂದರು ಮಂಜು. ಚಿತ್ರದ ಆಡಿಯೋ ಬಿಡುಗಡೆಗೆ ಮಾಲಾಶ್ರೀ ಮತ್ತು ಸುದೀಪ್ ಬರುತ್ತಾರೆ ಅಂತ ಹೇಳಿದ್ದರು. ಆದರೆ ಇಬ್ಬರು ಬರಲಿಲ್ಲ ಎಂಬುದು ಕಾರ್ಯಕ್ರಮದ ಹೈಲೈಟ್!
ನಟ ಮುನಿ ಮುಖ್ಯ ಪಾತ್ರ ಮಾಡಿದ್ದಾರೆ. 'ಮುನಿ ಪೊಲೀಸ್ ಆಗಬೇಕು, ಇಲ್ಲ ಕಳ್ಳನಾಗಬೇಕು' ಎಂದ ನವೀನ್ ಕೃಷ್ಣರ ಮಾತಿಗೆ 'ನಾನು ಪೊಲೀಸ್ ಅಥವಾ ಕಳ್ಳನ ಪಾತ್ರಕ್ಕೆ ಮಾತ್ರ ಸೀಮಿತವಲ್ಲ. ಎಲ್ಲ ರೀತಿಯ ಪಾತ್ರಗಳನ್ನು ಮಾಡಬಲ್ಲೆ. ಈಗಾಗಲೇ ಬೇರೆ ಬೇರೆ ರೀತಿಯ ಪಾತ್ರಗಳನ್ನೂ ನಿರ್ವಹಿಸಿದ್ದೇನೆ' ಎಂದು ಮುನಿ ಟಾಂಗ್ ಕೊಟ್ಟರು. 'ಖತರ್‌ನಾಕ್‌' ಚಿತ್ರದ ರೂಪಿಕಾಗೂ 'ಘರ್ಷಣೆ'ಯಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. 'ಮಾಲಾಶ್ರೀ ಅವರ ಸಿನಿಮಾಗಳಲ್ಲಿ ನಟಿಸುವುದೇ ದೊಡ್ಡ ಅದೃಷ್ಟ' ಎಂಬುದು ರೂಪಿಕಾ ಮಾತು. 'ನನ್ನ ಕನಸಿನಂತೆ ಸಿನಿಮಾ ಮೂಡಿ ಬಂದಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ನಿರ್ಮಾಪಕರಿಂದ ಹಿಡಿದು ಪ್ರತಿಯೊಬ್ಬರು ನನ್ನ ಬೆನ್ನಿಗೆ ನಿಂತು ಈ ಚಿತ್ರವನ್ನು ಮಾಡಿಸಿದ್ದಾರೆ. ಪ್ರೇಕ್ಷಕರಿಗೆ ಈ ಬಾರಿ ನಾನು ಮೋಸ ಮಾಡಲ್ಲ' ಎಂದರು ದಯಾಳ್. 'ಒಳಗೆ ಸೇರಿದರೆ ಗುಂಡು' ಹಾಡನ್ನು ಮತ್ತೆ ಇಲ್ಲಿ ಬಳಸಲಾಗಿದೆ ಎನ್ನುವುದು ಮತ್ತೊಂದು ಪ್ರಮುಖ ವಿಷಯ.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ