ಸಿನಿಮಾ ಲೇಖನ

ಸೈಕಲ್ ಸ್ಟ್ಯಾಂಡ್

ಖಾಸಗಿ ವಾಹನಿಯ ಸಿನಿಮಾ ವರದಿಗಾರನಾಗಿದ್ದ ಶಿವಾರ್ಜುನ ಮಸ್ತು ಮೂರು ವರ್ಷದ ಹಿಂದೆ 'ಸೈಕಲ್‌' ತುಳಿಯಲಾರಂಭಿಸಿದರು! ಆರಂಭದಲ್ಲಿ 'ಸೈಕಲ್‌' ರೇಸ್ ಚೆನ್ನಾಗಿಯೇ ಇತ್ತು. ಆದರೆ ಯಾಕೋ ಇದ್ದಕ್ಕಿದ್ದಂತೆ 'ಸೈಕಲ್‌' ಪಂಕ್ಚರ್ ಆದಂತೆ ಕಂಡಿತು. ಸದ್ದಿಲ್ಲದೆ 'ಸೈಕಲ್‌' ಶಾಪ್ ಬಾಗಿಲು ಹಾಕ್ಕೊಳ್ತು ಎಂದೇ ಎಲ್ಲರೂ ಭಾವಿಸಿದರು. ಆದರೆ ನಿರ್ಮಾಣ ವಿಭಾಗದಲ್ಲಿ ಆದ ದೋಷಗಳಿಂದ ತಡವಾಗಿದ್ದು, ಚಿತ್ರವನ್ನು ಈ ವಾರ ಬಿಡುಗಡೆ ಮಾಡುತ್ತಿರುವುದಾಗಿ ಶಿವಾರ್ಜುನ್ ಮೊನ್ನೆಯಷ್ಟೇ ಸತ್ಯ ಬಿಚ್ಚಿಟ್ಟರು.

ಮೂರು ವರ್ಷಗಳ ನಂತರ 'ಸೈಕಲ್‌' ಚಿತ್ರಕ್ಕೆ ಬಿಡುಗಡೆಯ ಭಾಗ್ಯ. ಚಿತ್ರಕ್ಕೆ ಶಿವಾರ್ಜುನ್ ನಾಯಕ ಮತ್ತು ನಿರ್ದೇಶಕ. ರಮೇಶ್ ಬಿ. ರೆಡ್ಡಿ ನಿರ್ಮಾಪಕ. ಅಂದಹಾಗೆ ಆಗ 'ಸೈಕಲ್‌' ಮೇಲೆ ಕೂತು ನಾಯಕಿ ಪಟ್ಟದಲ್ಲಿ ಸವಾರಿ ಮಾಡಿದ ನಟಿ ಹರ್ಷಿಕಾ ಪೂಣಚ್ಚ ಈಗ ಚಿತ್ರದ ಪ್ರಚಾರಕ್ಕೆ ಬಾರದೆ ಕೈ ಕೊಟ್ಟಿದ್ದಾರೆ ಎಂಬ ಬೇಸರದೊಂದಿಗೆ ಚಿತ್ರ ಬಿಡುಗಡೆಯಾಗುತ್ತಿದೆ. ಅಲ್ಲದೆ ಹರ್ಷಿಕಾಳ ಮೇಲೆ ನಿರ್ಮಾಪಕರ ಸಂಘದಲ್ಲಿ ದೂರು ದಾಖಲಾಗಿದೆ. 'ಪಾತ್ರಕ್ಕೆ ಸಂಭಾವನೆ ತೆಗೆದುಕೊಂಡು, ಪ್ರೊಮೋಷನ್‌ಗೆ ಬಾರದೆ ಬೇಜವಾಬ್ದಾರಿಯಾಗಿ ನಡೆದುಕೊಳ್ಳುವ ಹರ್ಷಿಕಾಳಿಗೆ ಸರಿಯಾದ ಪಾಠ ಕಲಿಸಬೇಕು' ಎನ್ನುವ ಮಾತಿನೊಂದಿಗೆ 'ಸೈಕಲ್‌' ಬಗ್ಗೆ ಮಾತಿಗಿಳಿದರು ಶಿವಾರ್ಜುನ್.

'ತಡವಾಗಿದ್ದು ನಿಜ. ಆದರೆ, ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡವರೊಬ್ಬರು ದೂರ ಸರಿದ ಮೇಲೆ ರಮೇಶ್ ಅವರೇ ಎಲ್ಲ ಜವಾಬ್ದಾರಿ ಹೊತ್ತರು. ಪೂರ್ತಿ ಮುಗಿಸಿದರು. ಚಿತ್ರಕಥೆ, ಕ್ವಾಲಿಟಿ, ಪಾತ್ರಗಳ ಆಯ್ಕೆ, ನಿರ್ದೇಶನ ಹೀಗೆ ಯಾವುದರಲ್ಲೂ ಸಿನಿಮಾ ಕಳಪೆಯಾಗಿಲ್ಲ. ಮನಸ್ಸಿಗೆ ಫೀಲ್ ಕೊಡುವಂಥ ಚಿತ್ರ ಇದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ತಮಿಳಿನ ಪ್ರಸಿದ್ಧ ನಿರ್ದೇಶಕ ಚೇರನ್‌ರ ಸಿನಿಮಾಗಳಲ್ಲಿನ ಫೀಲ್ ಮತ್ತು ನರೇಶನ್ ಅನ್ನು ಇಲ್ಲಿ ಕಾಣಬಹುದು. ಅವರ ಸಿನಿಮಾಗಳ ಸ್ಫೂರ್ತಿ ಅಷ್ಟೇ, ಯಾವುದನ್ನೂ ಕಾಪಿ ಮಾಡಿಲ್ಲ. ಆದರೆ ಇತ್ತೀಚೆಗೆ ತಮಿಳಿನ ಅಂಥ ನೇಟಿವಿಟಿ ಸಿನಿಮಾಗಳನ್ನು ಕನ್ನಡಕ್ಕೆ ರೀಮೇಕ್ ಮಾಡುತ್ತಿದ್ದಾರೆ. ಆದರೆ ನಾನು ನಮ್ಮದೇ ನೇಟಿವಿಟಿ ಕಥೆಯನ್ನು ಅವರಂತೆಯೇ ಮಾಡಿದ್ದೇನೆ. ಎಲ್ಲ ವರ್ಗದ ಪ್ರೇಕ್ಷಕರು ನೋಡುವಂಥ ಚಿತ್ರವಿದು' ಎನ್ನುತ್ತಾರೆ ಶಿವಾರ್ಜುನ್. ಅಮಾಯಕ ಹುಡುಗ, ಮುಸ್ಲಿಂ ಹುಡುಗಿ ಇವರಿಬ್ಬರ ನಡುವಿನ ಕಥೆಯೇ 'ಸೈಕಲ್‌'. ಅದರಲ್ಲೂ ಫೆ.14ರಂದು ನಡೆಯುವ ಕೆಲ ಘಟನೆಗಳೇ ಚಿತ್ರದ ಜೀವಾಳ. ಲವ್, ಆ್ಯಕ್ಷನ್, ಫೀಲ್ ಇರುವಂಥ ಈ ಚಿತ್ರದಲ್ಲಿ ಶಿವಾರ್ಜುನ್‌ರ ಜೀವನದಲ್ಲಿ ನಡೆದ ಕೆಲ ಘಟನೆಗಳನ್ನೂ ಸೇರಿಸಲಾಗಿದೆಯಂತೆ. 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಸೈಕಲ್‌' ಬಿಡುಗಡೆಯಾಗಲಿದೆ. 4 ಹಾಡುಗಳಿವೆ.
'ಸೈಕಲ್‌' ನಂತರ ತಮಿಳಿನ 'ಪೊರತ್ತಿವೀರನ್‌' ಚಿತ್ರವನ್ನು ಕನ್ನಡಕ್ಕೆ ತರುವ ಯೋಜನೆ ರೂಪಿಸಿದ್ದಾರೆ ಶಿವಾರ್ಜುನ್. ಈ ಚಿತ್ರಕ್ಕೂ ತಾನೇ ನಾಯಕ ಮತ್ತು ನಿರ್ದೇಶಕನಾಗುವ ಉಮೇದು ಅವರದ್ದು. ಇನ್ನು ರಮೇಶ್ 'ಸೈಕಲ್‌' ಚಿತ್ರಕ್ಕೆ ಧಾರಾಳವಾಗಿ ಬಂಡವಾಳ ಹಾಕಿದ್ದಾರಂತೆ.

ಹರ್ಷಿಕಾ ಐರನ್‌ಲೆಗ್
'ಸೈಕಲ್‌' ಕಥೆ ನಡೆಯುವುದು ನಾಯಕಿಯ ಮೇಲೆಯೇ. ಹೀಗಾಗಿ ಈ ಚಿತ್ರದ ಮೇಲೆ ಆಕೆಗೆ ಗೌರವ ಇರಬೇಕಿತ್ತು. ಚಿತ್ರದ ಪ್ರಚಾರಕ್ಕೆ ಬರುವಂತೆ ಎರಡ್ಮೂರು ಸಲ ಕೇಳಿದ್ದೇವೆ. ಈಗ 'ನನ್ನ ಯಾರೂ ಕರೆಯಲಿಲ್ಲ' ಎಂದು ರಾಗ ಎಳೆಯುತ್ತಿದ್ದಾಳೆ. ನಾವು ಆಕೆಗೆ ಪಲ್ಲಂಗ ಹಿಡಿದು ಹೋಗಬೇಕಿತ್ತೇ? ಕೇಳಿದಷ್ಟು ಸಂಭಾವನೆ ಕೊಟ್ಟಿದ್ದೇವೆ. ಆದರೆ ಈಗ ದೊಡ್ಡ ಸ್ಟಾರ್ ಥರ ಪೋಸು ಕೊಡುತ್ತಿದ್ದಾಳೆ. ಈಕೆ ಅಭಿನಯದ ಯಾವ ಚಿತ್ರ ಗೆದ್ದಿದೆ ಹೇಳಿ? ಈಕೆ ದೊಡ್ಡ ಐರನ್ ಲೆಗ್. 'ಚಿತ್ರ ಗೆದ್ದರೆ ಪ್ರಚಾರಕ್ಕೆ ಬರುತ್ತೇನೆ. ಚಿತ್ರದಲ್ಲಿ ನನ್ನ ವಲ್ಗಾರಿಟಿಯಾಗಿ ತೋರಿಸಿದ್ದಾರೆ' ಅಂತ ಸುಳ್ಳು ಸುಳ್ಳು ಪ್ರಚಾರ ಮಾಡುತ್ತಿದ್ದಾಳೆ.... ಹೀಗೆ ಹರ್ಷಿಕಾ ಪೂಣಚ್ಚ ಮೇಲೆ ಒಂದೇ ಸಮನೆ ಸಿಟ್ಟು ಮಾಡಿಕೊಳ್ಳುತ್ತಾರೆ ಶಿವಾರ್ಜುನ್.

-ಕೇಶವ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!