ಸಿನಿಮಾ ಲೇಖನ

ಕರ್ನಾಟಕದ ಪಾಲಿಗೆ ನಿರಾಶಾದಾಯಕ

ಈ ವರ್ಷದ ರಾಷ್ಟ್ರಪ್ರಶಸ್ತಿಯ ವಿಷಯದಲ್ಲಿ ವಿವಾದದ ಹೊಗೆ ಏಳುತ್ತಿದ್ದಂತೆ ಅಂತಿಮ ಸುತ್ತಿನ ತೀರ್ಪುಗಾರರಾಗಿದ್ದ ಶಿವಶಂಕರ್...

ಈ ವರ್ಷದ ರಾಷ್ಟ್ರಪ್ರಶಸ್ತಿಯ ವಿಷಯದಲ್ಲಿ ವಿವಾದದ ಹೊಗೆ ಏಳುತ್ತಿದ್ದಂತೆ ಅಂತಿಮ ಸುತ್ತಿನ ತೀರ್ಪುಗಾರರಾಗಿದ್ದ ಸಿ.ವಿ.ಶಿವಶಂಕರ್ ತಮ್ಮ ಅನಾರೋಗ್ಯದ ನಡುವೆಯೂ ಕಳೆದ ಮಂಗಳವಾರ ಪತ್ರಿಕಾಗೋಷ್ಟಿ ಕರೆದು ಮಾತನಾಡುವ ಉತ್ಸಾಹ ತೋರಿಸಿದರು.
ಪತ್ರಿಕಾಗೋಷ್ಠಿ ನಡೆಸುವ ಸುದ್ದಿ ತಿಳಿದ ಕೂಡಲೇ ದೆಹಲಿಯಿಂದ ಅಲ್ಲಿ ಯಾವ ವಿಷಯ ಹೇಳಹೊರಟಿದ್ದೀರಿ ಎಂಬ ಪ್ರಶ್ನೆಗಳು, ಯಾವ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಬೇಡಿ ಎಂಬ ಒತ್ತಡಬಂದವು ಆದರೆ ನಾನು ಅವರಿಗೆ ಇದು ಕೇವಲ ವೈಯಕ್ತಿಕ ವಿಷಯಗಳ ಅನಾವರಣ ಎಂದು ಹೇಳಿದೆ ಎಂಬ ಮಾತುಗಳಿಂದಲೇ ಪತ್ರಿಕಾಗೋಷ್ಠಿ ಶುರುಮಾಡಿದ ಅವರು ತಾವೇ ಬರೆದಿದ್ದ ಒಂದು ಪತ್ರ ಮತ್ತು ತಮ್ಮ ಪುತ್ರ ಲಕ್ಷ್ಮಣ್ ಅವರ ಸಹಾಯದಿಂದ ಮಾತನಾಡಿದರು.
ಒಂದು ಹಂತದಲ್ಲಿ ಭಾವುಕರಾದ ಶಿವಶಂಕರ್, ಅಂತಿಮ ಹಂತದಲ್ಲಿ ಯಾವ ಚಿತ್ರಗಳಿದ್ದವು, ಯಾವು ಇರಲಿಲ್ಲ ಎಂಬುದರ ಮಾಹಿತಿ ಈಗಾಗಲೇ ಕೆಲವು ಪತ್ರಿಕೆಗಳಲ್ಲಿ ಬಂದಿದೆ. ಹಾಗಾಗಿ ನಾನು ಹೇಳುವ ಅಗತ್ಯವಿಲ್ಲ, 14 ದಿನ ಎಷ್ಟೊಂದು ಸಿನಿಮಾಗಳನ್ನು ನೋಡಿ ಎಲ್ಲ ಚಿತ್ರಗಳ ಬಗೆಗೂ ಪುಟಗಟ್ಟಲೆ ವಿವರಗಳನ್ನು ಬರೆದಿಟ್ಟುಕೊಂಡು ಕಾದಿದ್ದೆ. ಆದರೆ ನನ್ನ ಮಾತುಗಳಿಗೆ ಬೆಲೆ ಸಿಗಲಿಲ್ಲ ಎಂದು ತಮ್ಮ ವೈಯಕ್ತಿಕ ನೋವನ್ನು ತೋಡಿಕೊಂಡರು.     ಹಿಂದಿಯ 'ಕಹಾನಿ' ಚಿತ್ರ ಬಿಟ್ಟರೆ ಕನ್ನಡದ 'ಎದೆಗಾರಿಕೆ' ಅತ್ಯುತ್ತಮ ಚಿತ್ರ ಎಂಬ ಮಾತುಗಳು ಚಿತ್ರ ವೀಕ್ಷಣೆ ಮತ್ತು ಆಯ್ಕೆಯ ಸಂದರ್ಭದಲ್ಲಿ ಕೇಳಿಬಂದಿದ್ದರೂ ಅಂತಿಮ ಫಲಿತಾಂಶ ಹೊರಬಿದ್ದಾಗ ವಾಸ್ತವ ಬೇರೆಯೇ ಇತ್ತು ಎನ್ನುತ್ತಾರೆ ಶಿವಶಂಕರ್. ಯಾರೂ ನನ್ನ ಮೇಲೆ ಪ್ರಭಾವ ಬೀರಬಾರದು ಎಂಬ ಕಾರಣಕ್ಕೆ ನನ್ನ ಬಳಿ ಇದ್ದ 2 ಮೊಬೈಲ್‌ಗಳಲ್ಲಿ ಒಂದನ್ನು ಸ್ವಿಚ್ ಆಫ್ ಮಾಡಿಕೊಂಡು, ಕೇವಲ ಮನೆಯವರ ಜೊತೆ ಮಾತ್ರ ಸಂಪರ್ಕದಲ್ಲಿದ್ದು ಅಷ್ಟು ದಿನ ಕೆಲಸ ಮಾಡಿದೆ, ನನ್ನ ಅನಾರೋಗ್ಯದ ವಿಷಯದಲ್ಲಿ ಅಲ್ಲಿನ ಯಾವ ಅಧಿಕಾರಿಗಳೂ ಸಹಾಯ, ಸಹಕಾರ ಕೊಡಲಿಲ್ಲ. ನನ್ನ ಪ್ರಾಮಾಣಿಕ ಕರ್ತವ್ಯಕ್ಕೆ ಸಿಕ್ಕ ಪ್ರತಿಫಲ ಇದು ಎಂಬುದು ಅವರ ಅಳಲು.
ಇನ್ನು ಇದೇ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಇಲ್ಲಿಂದ ಹೋಗುವಾಗಲೇ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಈ ಬಾರಿ ಒಳ್ಳೆಯ ಚಿತ್ರಗಳಿವೆ, ಆದಷ್ಟು ಹೆಚ್ಚು ಕನ್ನಡ ಚಿತ್ರಗಳಿಗೆ ಪ್ರಶಸ್ತಿ ಬರುವಂತೆ ಶಿಫಾರಸು ಮಾಡಿ ಎಂದು ಹೇಳಿದ್ದರು. ನಾನೂ ಕೂಡ ಸ್ಫರ್ಧೆಯಲ್ಲಿದ್ದ ಚಿತ್ರಗಳನ್ನು ನೋಡಿ ಖುಷಿಪಟ್ಟಿದ್ದೆ. ಆದರೆ ಅಲ್ಲಿ 'ಸಂಗೊಳ್ಳಿರಾಯಣ್ಣ' ಎಂದರೆ ಯಾರು ಎಂದು ಕೇಳುವ ಪರಿಸ್ಥಿತಿ ಇದ್ದುದು ನಿರಾಶೆ. ಆದರೆ, ಕನ್ನಡ ಚಿತ್ರಗಳ ಗುಣಮಟ್ಟ ಸರಿ ಇರಲಿಲ್ಲ ಎಂದು ಹೇಳಿದ ತೀರ್ಪುಗಾರ ಶಾಸ್ತ್ರಿ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಅದನ್ನು ಹೇಳುವ ಅಧಿಕಾರ, ಅರ್ಹತೆ ಶಾಸ್ತ್ರಿ ಅವರಿಗಿದೆಯೇ?
ಅವರ ಮಾತುಗಳ ವಿರುದ್ಧದ ಪ್ರತಿಭಟನೆ ನಮ್ಮೆಲ್ಲ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರಲಿ ಎಂದರು.
ಈ ವಿಷಯವಾಗಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಸಿ.ವಿ.ಶಿವಶಂಕರ್ ನೀಡಿದ ಲಿಖಿತ ಹೇಳಿಕೆಯ ಸಾರಾಂಶ.
60ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಆಯ್ಕೆಯ ಕಮಿಟಿಯಲ್ಲಿ ನಾನು ಕರ್ನಾಟಕದ ಪರವಾದ ಜ್ಯೂರಿ ಆಗಿ ದೆಹಲಿಗೆ ಹೋಗಿದ್ದೆ. ತಾ॥ 2-3-2013 ರಂದು ಚಿತ್ರಗಳನ್ನು ನೋಡಲು ಪ್ರಾರಂಭಿಸಿದೆವು. 14ನೇ ತಾರೀಖಿನವರೆಗೂ ನಾನು ಸುಮಾರು 57 ಚಿತ್ರಗಳನ್ನು ವೀಕ್ಷಿಸಿದೆನು. 14ನೇ ತಾರೀಖಿನ ದಿನ ನನಗೆ ತಲೆ ಸುತ್ತು ಬಂದು ಹತ್ತಿರದ ಆಸ್ಪತ್ರೆಗೆ ಸೇರಿಕೊಂಡೆ. ನನ್ನ ಬಿ.ಪಿ. ಅತಿರೇಕಕ್ಕೆ ಹೋಗಿ ನಾನು ಪ್ರಜ್ಞಾಶೂನ್ಯನಾಗಿ ಐಸಿಯುನಲ್ಲಿ ಡಾಕ್ಟರ್ ನನ್ನನ್ನು ದಾಖಲು ಮಾಡಿದರು.
ಅಂದು ಸಂಜೆ ನನ್ನ ಮಗ ಲಕ್ಷ್ಮಣ ದೆಹಲಿಗೆ ಬಂದು ನನ್ನನ್ನು ನೋಡಿಕೊಂಡ. ನಾಲ್ಕು ದಿವಸ ನಾನು ಐಸಿಯುನಲ್ಲೇ ಇದ್ದ ಕಾರಣ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಜೂರಿಗಳಾಗಲೀ, ಸರ್ಕಾರಿ ಅಧಿಕಾರಿಗಳಾಗಲೀ ನನ್ನನ್ನು ನೋಡಲೂ ಸಹ ಬರಲಿಲ್ಲ. 17 ಮತ್ತು 18ನೇ ತಾರೀಖು ಪ್ರಶಸ್ತಿಗಳ ಪಟ್ಟಿಯನ್ನು ಸಿದ್ಧಪಡಿಸಿ ಅದನ್ನು ಬಿಡುಗಡೆ ಮಾಡಿದ್ದಾರೆ.ಕಡೇಪಕ್ಷ ಜವಾಬ್ದಾರಿಯುಳ್ಳ ನನ್ನ ಗಮನಕ್ಕೆ ತಾರದೆ ನನ್ನ ಕಡೆಯಿಂದ ಸೆಲೆಕ್ಟ್ ಚಿತ್ರಗಳ ಪಟ್ಟಿಯನ್ನಾಗಲೀ ಪಡೆಯದೆ, ನನ್ನ ಸಹಿಯೂ ಇಲ್ಲದೆ ಪ್ರಶಸ್ತಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಎಷ್ಟೋ ಆಸೆ ಹೊತ್ತು ಕರ್ನಾಟಕದಿಂದ ದೆಹಲಿಗೆ ಹೋಗಿದ್ದ ನನಗೆ ಕಟ್ಟಡ ಚಿತ್ರಗಳಿಗೆ ಕಡೇಪಕ್ಷ 4-5 ಪ್ರಶಸ್ತಿಗಳಾದರೂ ಬಂದೇ ಬರುತ್ತದೆಂಬ ನಂಬಿಕೆ ಇತ್ತು. ಆ ನಂಬಿಕೆ ನುಚ್ಚು ನೂರಾಯಿತು. ನನ್ನನ್ನು ಬಿಟ್ಟರೆ ಕನ್ನಡ ಚಿತ್ರಗಳನ್ನು ನೋಡುವ ಹಾಗೂ ಸಂಭಾಷಣೆಗಳನ್ನು ಅರ್ಥ ಮಾಡಿಕೊಳ್ಳುವ ಯಾವೊಬ್ಬ ಕನ್ನಡದವರೂ ಆ ಜ್ಯೂರಿಗಳ ತಂಡದಲ್ಲಿ ಇರಲಿಲ್ಲ, ಶಾಸ್ತ್ರಿಗಳೆಂಬ ಓರ್ವ ವ್ಯಕ್ತಿ ತೆಲುಗು ಚಿತ್ರಗಳ ಜ್ಯೂರಿ, ಕೆ.ಜಿ.ಎಫ್.ನಲ್ಲಿ ಇದ್ದವರೆಂಬ ಕಾರಣಕ್ಕೆ. "ಭಾರತ ಸ್ಟೋರ್ಸ್‌" ಚಿತ್ರವೊಂದನ್ನು ಬಿಟ್ಟರೆ ಮತ್ತಾವ ಕನ್ನಡ ಚಿತ್ರಗಳಲ್ಲೂ ಗುಣಮಟ್ಟ ಇಲ್ಲದೇ ಇರುವುದರಿಂದ ಕನ್ನಡ ಚಿತ್ರಗಳು ಮತ್ತಾವುದೇ ವಿಭಾಗದಲ್ಲಿ ಪ್ರಶಸ್ತಿಗೆ ಅರ್ಹವಾಗಿಲ್ಲ ಎಂಬ ಅವರ ಹೇಳಿಕೆಯನ್ನು ಬೆಂಗಳೂರಿನ ಕನ್ನಡ ಪತ್ರಿಕೆಯಲ್ಲಿ ಓದಿ ನನಗೆ ತುಂಬಾ ವೇದನೆ ಆಯಿತು. 59 ವರ್ಷಗಳು ಕನ್ನಡ ಚಿತ್ರರಂಗದಲ್ಲಿ ಸಾಹಿತಿ, ನಿರ್ದೇಶಕ, ನಿರ್ಮಾಪಕ ಆಗಿದ್ದು ಅಪಾರ ಅನುಭವ ಹೊಂದಿರುವ ನನಗೆ ಕನ್ನಡ ಚಿತ್ರಗಳಲ್ಲಿ ಗುಣಮಟ್ಟ ಇಲ್ಲ ಎಂಬ ವಿಚಾರ ಓದಿ ಅತ್ಯಂತ ನೋವಾಯಿತು.
ನಾನು ಐಸಿಯುಯಲ್ಲಿ ಇದ್ದ ಕಾರಣ ನನ್ನ ಗೈರು ಹಾಜರಿಯಲ್ಲೇ ಪ್ರಶಸ್ತಿ ಪಟ್ಟಿ  ತಯಾರಿಸಿದವರು, ಕಡೇ ಪಕ್ಷ ನನ್ನ ಸಹಿ ಪಡೆಯದೇ ಉಪೇಕ್ಷಿಸಿ, ಕನ್ನಡ ಚಿತ್ರಗಳು ಗುಣಮಟ್ಟ ಇಲ್ಲ ಎಂದು ಕಥೆ ಕಟ್ಟಿದ್ದು ನೋಡಿ, ರಾಷ್ಟ್ರೀಯ ಪ್ರಶಸ್ತಿಯ ಆಯ್ಕೆಯ ಕ್ರಮ ಇಷ್ಟೊಂದು ಏಕಪಕ್ಷೀಯವಾಗಿ ಇರುತ್ತದೆ ಎಂದು ನಾನು ಭಾವಿಸುವಂತಾಗಿದೆ.  ಆದರೆ ಕನ್ನಡ ಚಿತ್ರಗಳು ಗುಣಮಟ್ಟ ಇಲ್ಲ ಎಂದು ಕಣ್ಣೊರೆಸಿದ ಕ್ರಮ ಅಕ್ಷಮ್ಯ ಅಪರಾಧ. ಕನ್ನಡದ ವ್ಯಕ್ತಿಯಾದ ನಾನು ದೆಹಲಿಗೆ ಹೋಗಿ ಅನಾರೋಗ್ಯಕ್ಕೆ ತುತ್ತಾದುದಷ್ಟೇ ಬಹುಮಾನ. ನನ್ನ ಪ್ರೀತಿಯ ಕನ್ನಡ ಚಿತ್ರ ನಿರ್ಮಾಪಕರುಗಳಿಗೆ, ನಿರ್ದೇಶಕರುಗಳಿಗೆ ಆಗಿರುವ ಅನ್ಯಾಯಕ್ಕೆ ನಾನು ಕ್ಷಮೆಯಾಚಿಸುತ್ತೇನೆ.
ನನ್ನ ಸಹಿ ಇಲ್ಲದೆ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದ್ದು ಅಕ್ಷಮ್ಯ ಅಪರಾಧ. ಒಟ್ಟಾರೆ, ಈ ಬಾರಿಯ ರಾಷ್ಟ್ರೀಯ  ಚಲನಚಿತ್ರ ಪ್ರಶಸ್ತಿಗಳು ಕನ್ನಡಿಗರ ಪಾಲಿಗೆ ನಿರಾಶಾದಾಯಕವಾಯಿತು. "ಭಾರತ ಸ್ಟೋರ್ಸ್‌" ಒಂದು ಚಿತ್ರ ಮಾತ್ರ ಉದಾರ ದಾನವಾಯಿತು.

- ಹ್ಯಾರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!