ಸಿನಿಮಾ ಲೇಖನ

ಕುಂಬಾರಣ್ಣ

ಪ್ರೇಕ್ಷಕರ ಮುಂದೆ ತಮ್ಮ ಅದೃಷ್ಟ ಪರೀಕ್ಷೆ ಮಾಡಿಸಿಕೊಳ್ಳಲು ಬರುತ್ತಿರುವ ಮತ್ತೊಂದು ಚಿತ್ರ 'ಕುಂಭ ರಾಶಿ'. ಚೇತನ್ ನಾಯಕನಾಗಿ, ರೂಪಿಕಾ ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರ ಇದೇ ಮೇ.17ಕ್ಕೆ ತೆರೆ ಕಾಣುತ್ತಿದೆ. ಚಂದ್ರಹಾಸ ನಿರ್ದೇಶನದ ಈ ಚಿತ್ರದ ನಿರ್ಮಾಪಕರು ನಾಗಮ್ಮ ಸಿದ್ದು ಪಾಟೀಲ್. ನಾಯಕನ ಸಿಕ್ಸ್ ಪ್ಯಾಕ್ ಮೂಲಕ ಮೊದಲು ಗಮನ ಸೆಳೆದ ಚಿತ್ರವಿದು. 'ತುಂಬಾ ನಿರೀಕ್ಷೆ, ಆಸೆ, ಆಕಾಂಕ್ಷೆ ಇಟ್ಟುಕೊಂಡು ನಾನು ಅಭಿನಯಿಸಿರುವ ಚಿತ್ರವಿದು. ಕೌರವ ವೆಂಕಟೇಶ್‌ರ ಸಾಹಸದಂತೆ ಚಿತ್ರದಲ್ಲಿ ಎಲ್ಲ ಅಂಶಗಳೂ ಹೈಲೆಟ್. ನಿರ್ದೇಶಕರು ನೀಟಾಗಿರುವ ಕಥೆಯನ್ನು ನಿರೂಪಣೆ ಮಾಡಿದ್ದಾರೆ. ನನಗೆ ಈ ಹಂತದಲ್ಲಿ ಇಂಥ ಕಥೆ ಸಿಕ್ಕಿರುವುದು ನನ್ನ ಪುಣ್ಯ. ಯಾವುದಕ್ಕೂ ಕಡಿಮೆ ಮಾಡದೆ ನಿರ್ಮಾಪಕರು ಚಿತ್ರವನ್ನು ಅದ್ದೂರಿಯಾಗಿ ಮಾಡಿದ್ದಾರೆ. ಈ ವಾರ ನಿಮ್ಮ ಮುಂದೆ ಬರುತ್ತಿದೆ. ನೀವು ಚಿತ್ರವನ್ನು ನೋಡಿ ಗೆಲ್ಲಿಸಬೇಕು' ಎಂದರು ನಟ ಚೇತನ್
 ಚಿತ್ರತಂಡದ ಮೊಗದಲ್ಲಿ 'ರಾಶಿ ಫಲ ಚೆನ್ನಾಗಿದೆ' ಎನ್ನುವ ವಿಶ್ವಾಸವಿತ್ತು. ಹೀಗಾಗಿ ಕುಂಬಾರಣ್ಣನನ್ನು ಪ್ರೇಕ್ಷಕರು ಸ್ವೀಕರಿಸುತ್ತಾರೆಂಬ ನಂಬಿಕೆ ನಿರ್ಮಾಪಕರದ್ದಾಗಿತ್ತು. 'ಒಳ್ಳೆಯ ನಿರ್ಮಾಪಕರು, ಕಥೆ ಮತ್ತು ಪಾತ್ರಕ್ಕೆ ನ್ಯಾಯ ಸಲ್ಲಿಸುವ ಕಲಾವಿದರು, ತಂತ್ರಜ್ಞರು ಈ ಚಿತ್ರದ ಹಿಂದೆ ಇದ್ದಾರೆ. ಹೀಗಾಗಿ ಸಿನಿಮಾ ನಮ್ಮ ನಿರೀಕ್ಷೆಯಂತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾ ನೋಡಿದವರು 'ಕುಂಭ ರಾಶಿ'ಯನ್ನು ಭೇಷ್ ಎನ್ನದೆ ಇರಲಾರರು' ಎಂಬುದು ನಿರ್ದೇಶಕ ಚಂದ್ರಹಾಸರ ಮಾತು. ನಾಯಕಿ ರೂಪಿಕಾ ಸಿಕ್ಕಾಪಟ್ಟೆ ಖುಷಿಯಲ್ಲಿದ್ದರು. 'ಈ ಚಿತ್ರ ನಿಜಕ್ಕೂ ನಮಗೆ ದೊಡ್ಡ ಮಟ್ಟದಲ್ಲಿ ಗೆಲುವು ತಂದುಕೊಡುತ್ತದೆ. ಹೊಸಬರ ಚಿತ್ರಗಳು ಗೆಲ್ಲುತ್ತಿವೆ. ನಮ್ಮ ಚಿತ್ರ ಕೂಡ ಹೊಸತನದಿಂದ ಕೂಡಿದೆ' ಎಂಬ ಅಭಿಪ್ರಾಯ ರೂಪಿಕಾಳದ್ದು.
 ಶ್ರೀವತ್ಸ ಸಂಗೀತ, ಜೈ ಆನಂದ್ ಛಾಯಾಗ್ರಹಣ ಚಿತ್ರಕ್ಕಿದೆ. ಎಸ್. ಕೆ. ಸಾಲಿ ಅವರ ಸಂಭಾಷಣೆ ಚಿತ್ರದ ಮತ್ತೊಂದು ಹೈಲೆಟ್. ಶರತ್ ಲೋಹಿತಾಶ್ವ, ಹರೀಶ್ ರಾಯ್, ಬಿರಾದರ್, ರವಿ ತೇಜ, ಮೋಹನ್ ಜುನೇಜಾ, ಗುರುರಾಜ್ ಹೊಸಕೋಟೆ ಮುಂತಾದವರು ಚಿತ್ರದ ಪ್ರಮುಖ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ