ಸಿನಿಮಾ ಲೇಖನ

ಆರ್ಯ ಆಹ್ವಾನ

ಒಂದು 'ಬ್ರೇಕ್ ಅಪ್‌' ಆದ ಮೇಲೆ ಮತ್ತೊಂದು 'ಟೇಕ್ ಅಪ್‌' ಆಗಬೇಕೆಂಬ ಪ್ರಕೃತಿಯ ನಿಯಮವನ್ನು ಪಕ್ಕದಲ್ಲೇ ಇಟ್ಟುಕೊಂಡು...

ಒಂದು 'ಬ್ರೇಕ್ ಅಪ್‌' ಆದ ಮೇಲೆ ಮತ್ತೊಂದು 'ಟೇಕ್ ಅಪ್‌' ಆಗಬೇಕೆಂಬ ಪ್ರಕೃತಿಯ ನಿಯಮವನ್ನು ಪಕ್ಕದಲ್ಲೇ ಇಟ್ಟುಕೊಂಡು ಮಲಗುತ್ತಿರುವವರು ಸಿನಿಮಾ ನಟಿಯರು. 'ಹೌದು' ಎನ್ನುವುದಕ್ಕೆ ಸಾಕಷ್ಟು ನಟ, ನಟಿಯರ ಹೆಸರುಗಳು ಸಾಲುಗಟ್ಟಿದರೂ ಸದ್ಯಕ್ಕೆ ಬೇಗ ನೆನಪಾಗುವುದು ಬಹುಭಾಷಾ ನಟಿ ನಯನತಾರಾ. ಕನ್ನಡದಲ್ಲೂ ಒಮ್ಮೆ 'ಉಪ್ಪಿ'ಟು ತಿಂದು ಲೊಚಗುಟ್ಟಿದ ಈ ತೆಲುಗು ನಟಿಯ ಪ್ರೇಮ ವ್ಯವಹಾರ ದಿನೇ ದಿನೇ ವಿಸ್ತರಣೆಯಾಗುತ್ತಿದೆ.
ಹೀಗಾಗಿ 'ಎಲ್ಲಿಯೂ ನಿಲ್ಲದಿರು' ಕವಿಯ ಕರೆಗೆ ಕಿವಿಗೊಟ್ಟ ನಯನಾಳ ಪ್ರೇಮಪಾಶದಲ್ಲಿ ಒಬ್ಬರ ನಂತರ ಒಬ್ಬರು ಮುಳುಗೇಳುತ್ತಿದ್ದಾರೆ. ಮೊದಲು ತಮಿಳಿನ ಸಿಂಬು ಜೊತೆ ಪ್ರೇಮದಾಟವಾಡಿದಳು. ಆಗ ಪ್ರೇಮದ ಜೊತೆ ಪ್ರಯಣವೂ ನಡೆಯಿತು ಎಂಬುದು ಚೆನ್ನೈ ಟಾಕ್. ಇದಕ್ಕೆ ತಕ್ಕಂತೆ ಸಿಂಬು ಮತ್ತು ನಯನಾಳ 'ಕಿಸ್ ಫೋಟೋಗಳು ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ಹಿಟ್ ಆದವು. ಇದರ ನಂತರ ಒಂದಷ್ಟು ದಿನ ಖಾಲಿಯಾಗಿಯೇ ಇದ್ದಳು. ಆಗ ಈಕೆಯ ಬಾಳಿನಲ್ಲಿ ಪ್ರವೇಶ ಕೊಟ್ಟ ದೊಡ್ಡ ನಟ ಪ್ರಭುದೇವ. ಎರಡನೇ ಇನ್ನಿಂಗ್ಸ್‌ನಲ್ಲಿ ಮದುವೆಯೂ ಆದಳು. ಇದಕ್ಕಾಗಿ ಪ್ರಭು ತಮ್ಮ ಮೊದಲ ಹೆಂಡತಿಗೆ ಡೈವೋರ್ಸ್ ಕೊಟ್ಟರು. ಆದರೆ, ಅದೇನಾಯಿತೋ ಗೊತ್ತಿಲ್ಲ... ಪ್ರೀತಿ, ಪ್ರೇಮ, ಮದುವೆ ಮೂರೂ ಬ್ರೇಕ್ ಆಯಿತು.
ಎರಡು ದೊಡ್ಡ ಪ್ರೇಮಬಲೆಯಿಂದ ವಂಚಿತಳಾದ ಮೇಲೆ ನಯನತಾರಾ ಕಣ್ಣೀರು ಹಾಕಿದ್ದು ನಿಜ. ಆದರೆ, ಈಗಾಕೆ ಮತ್ತೊಬ್ಬನೊಂದಿಗೆ ಸುತ್ತುತ್ತಿದ್ದಾಳೆನ್ನುವ ಸುದ್ದಿಗಳು ಅತ್ತ ಮಾಧ್ಯಮಗಳಲ್ಲೂ, ಇತ್ತ ಚಿತ್ರರಂಗದಲ್ಲೂ ತೇಲಾಡುತ್ತಿವೆ. ಆತ ಬೇರ್ಯಾರೂ ಅಲ್ಲ, ತಮಿಳು ನಟ ಆರ್ಯ. ಹಾಗೆ ನೋಡಿದರೆ ಆರ್ಯ ಮತ್ತು ನಯನಾ 'ಬಾಸ್ ಎಂಗಿರಾ ಬಾಸ್ಕರನ್‌' ಚಿತ್ರದ ಸಂದರ್ಭದಲ್ಲೇ ಇಬ್ಬರ ನಡುವೆ ರಿಯಲ್ ಲವ್ವು ಡವ್ವು ಶುರುವಾಗಿತ್ತಂತೆ. ಆರ್ಯ ನೀಡಿದ ಪ್ರೇಮದ ಅಹ್ವಾನದಿಂದ ನಯನತಾರಾಗೆ ವೃತ್ತಿ ವಿಚಾರದಲ್ಲೂ ಸಾಕಷ್ಟು ಲಾಭವಾಗುತ್ತಿದೆಯಂತೆ. ಸ್ವತಃ ಆರ್ಯನೇ ಕೆಲ ನಿರ್ದೇಶಕರಿಗೆ ಫೋನ್ ಮಾಡಿ 'ನಿಮ್ಮ ಚಿತ್ರಕ್ಕೆ ಈಕೆಯನ್ನು ನಾಯಕಿಯಾಗಿಸಿ' ಎಂದು ರೆಕಮೆಂಡ್ ಮಾಡುತ್ತಿದ್ದಾರಂತೆ. ಅಲ್ಲದೆ ಇತ್ತೀಚೆಗೆ ನಯನಾಳ ಹುಟ್ಟುಹಬ್ಬವನ್ನು ಆರ್ಯ ಸೆಟ್‌ನಲ್ಲೇ ಮಾಡಿ ಸಂಭ್ರಮಿಸಿದ್ದಾರಂತೆ. ಹೀಗಾಗಿ ಮೂರನೇ ಪ್ರೇಮದ ಇನ್ನಿಂಗ್ಸ್ ಒಳ್ಳೆಯ ಕೆಮಿಸ್ಟ್ರಿಯಲ್ಲಿದ್ದು, ಅದು ಯಾವಾಗ 'ಜೀವ'ಶಾಸ್ತ್ರವಾಗುತ್ತದೋ ಎಂಬುದು ಅವರ ಅಭಿಮಾನಿಗಳ ಕುತೂಹಲ.

- ಕೇಶು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!