ಸಿನಿಮಾ ಲೇಖನ

ಶ್ವೇತಾ ಪರದೆ

ಆಕೆಯ ಹೈಟು, ನಗು ಎರಡೂ ಸ್ವೀಟು. ತುಂಟ ಕಣ್ಣೋಟವೂ ಅಷ್ಟೇ ಆಕರ್ಷಕ. ಹೀಗಾಗಿ, ಶ್ವೇತಾ ಪಂಡಿತ್ ಫೇಸ್‌ಬುಕ್ ಮೂಲಕವೇ...

ಆಕೆಯ ಹೈಟು, ನಗು ಎರಡೂ ಸ್ವೀಟು. ತುಂಟ ಕಣ್ಣೋಟವೂ ಅಷ್ಟೇ ಆಕರ್ಷಕ. ಹೀಗಾಗಿ, ಶ್ವೇತಾ ಪಂಡಿತ್ ಫೇಸ್‌ಬುಕ್ ಮೂಲಕವೇ ಫಿಲ್ಮಿನ ಗಿಟ್ಟಿಸಿಕೊಂಡಳು. 'ಪರಮಾತ್ಮ'ದಲ್ಲಿ ದರ್ಶನ ನೀಡಿ, ತೆಲುಗು ಚಿತ್ರಗಳಲ್ಲೂ ನಟಿಸಿ 'ದ್ವಿಭಾಷಾ ನಟಿ' ಎಂಬ ಕಿರೀಟ ತೊಟ್ಟಳು. ಈಗ ಶ್ವೇತಾಗೆ ಕಿಚ್ಚ ಸುದೀಪ್ ಜತೆ ನಟಿಸುವಾಸೆ.
 ಬಿಗ್‌ಬಾಸ್‌ನಿಂದಲೇ ಈ ಹುಚ್ಚು ಹಿಡಿದಿದ್ದು ಹೌದು. ಶ್ವೇತಾ ವಿನಾಯಕ್- ವೈಶಾಲಿ ದಂಪತಿ ಪುತ್ರಿ. ಹುಟಿದ್ದು ಹೈದರಾಬಾದ್‌ನಲ್ಲಾದರೂ ಬೆಳೆದದ್ದು ನಮ್ಮ ಕರಾವಳಿಯ ಕಾರ್ಕಳದಲ್ಲಿ. ಚಿಕ್ಕಂದಿನಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೆ ಮೋಹ. ಕಾಲೇಜು ದಿನಗಳಲ್ಲಿ ಫೇಸ್‌ಬುಕ್ ಮುಂದೆ ಕೂತಿದ್ದೂ ಒಳ್ಳೆಯದೇ ಆಯಿತು. ಗಾಂಧಿನಗರದಿಂದ ದಿಢೀರನೆ ಆಫರ್ ಬಂತು. ಆದರೆ, ಚಿತ್ರ ಚಿತ್ರೀಕರಣಗೊಳ್ಳಲೇ ಇಲ್ಲ. ಇದೇ ಟೈಮಲ್ಲಿ ಯೋಗರಾಜ ಭಟ್ಟರು 'ಪರಮಾತ್ಮ' ಚಿತ್ರಕ್ಕೆ ಆಡಿಶನ್ ಶುರುಮಾಡಿದ್ದರು. ಇದಕ್ಕೆ ಹಾಜರಾದ ಹುಡುಗಿಯರ ಸಂಖ್ಯೆ 200. ಅವರೆಲ್ಲರನ್ನೂ ಹಿಂದಿಕ್ಕಿದ ಪಟ ಪಟ ಮಾತುದುರಿಸೋ ಶ್ವೇತಾ ಅಧಿಕೃತವಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಳು.
ತೆಲುಗಿನ ಶ್ರೀನಿವಾಸ್ ನಿರ್ದೇಶನದಲ್ಲಿ ಬರುತ್ತಿರುವ ಒಂದೇ ಒಂದು ಹಾಡಿಲ್ಲದ 'ಥಿಯೇಟರ್ ಲೋ' ಚಿತ್ರದಲ್ಲಿ ನಾಲ್ಕು ನಾಯಕರಿಗೆ ಈಕೆಯೊಬ್ಬಳೇ ನಾಯಕಿ. ಈ ಚಿತ್ರ ಥ್ರಿಲ್ಲರ್ ಕಾಮಿಡಿ. ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಮೇ ತಿಂಗಳಲ್ಲಿ ಚಿತ್ರಮಂದಿರ ಪ್ರವೇಶಿಸಲಿದೆ.
 ಕರವೇ ಪ್ರವೀಣ್‌ಶೆಟ್ಟಿ ನಿರ್ಮಿಸುತ್ತಿರುವ, ಮಹೇಶ್ ರಾವ್ ನಿರ್ದೇಶನದ 'ಕೇಸ್ ನಂ. 18/9'ನಲ್ಲಿ ಸಿಂಧು ಲೋಕನಾಥ್ ಜತೆಯಲ್ಲಿ ನಾಯಕಿಯಾಗಿರುವ ಶ್ವೇತಾ, ಅಪ್ರಾಪ್ತೆ ಪ್ರೇಮದ ಬ್ಲ್ಯಾಕ್‌ಮೇಲ್‌ನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುವ ಪಾತ್ರವನ್ನು ನಿರ್ವಹಿಸಲಿದ್ದಾರೆ. ತಮಿಳಿನ '18/9' ಚಿತ್ರದ ರೀಮೇಕ್ ಇದಾಗಿದ್ದು, ಹೋಟೆಲ್ ಮಾಣಿಯೊಬ್ಬನ ಕಥೆಯನ್ನೊಳಗೊಂಡಿದೆ.
ತಮಿಳು ಚಿತ್ರರಂಗದಿಂದಲೂ ಆಹ್ವಾನಗಳು ಸಿಗುತ್ತಿರುವ ಈಕೆ ತ್ರಿಭಾಷಾ ನಟಿಯಾಗಲು ಇನ್ನೇನು ಹೆಚ್ಚು ದಿನಗಳಿಲ್ಲ. ಯೋಗರಾಜ್ ಭಟ್ ಹೊಸದಾಗಿ ನಿರ್ಮಿಸುತ್ತಿರುವ 'ಪಾಪಸ್ ಕಳ್ಳಿ'ಯಲ್ಲಿ ವಿಶೇಷ ಪಾತ್ರದ ಅವಕಾಶ ಸಿಕ್ಕಿದ್ದು, ಡ್ಯಾನ್ಸೊಂದರಲ್ಲಿ ಕಾಣಿಸಿಕೊಳ್ಳಲಿದ್ದಾಳೆ.
 'ಜೇಡ್ರಳ್ಳಿ', 'ಸಂಕ್ರಾಂತಿ', 'ಲೈಫು ಇಷ್ಟೇನೆ' ಚಿತ್ರಗಳಲ್ಲೂ ಮಿಂಚಿದ ಶ್ವೇತಾ, ಸ್ಕ್ರಿಪ್ಟ್ ನೋಡಿಯೇ ಪಾತ್ರಗಳಿಗೆ ಒಪ್ಪಿಗೊಳ್ಳುತ್ತೇನೆ ಎನ್ನುತ್ತಾಳೆ. ಹೊಸಬರೊಂದಿಗೆ ನಟಿಸಲು ಈಕೆಗೆ ಭಯವಂತೆ. ಆದರೆ, ಅಚ್ಚ ಕನ್ನಡದ ಹುಡುಗಿಗೆ ಕನ್ನಡದಲ್ಲಿ ಅವಕಾಶ ಕಡಿಮೆ ಎನ್ನುವುದು ಬೇಸರದ ಸಂಗತಿ. ತೆಲುಗಿನ ಎರಡು ಚಿತ್ರಗಳು ಕೈಯಲ್ಲಿವೆ. ಕನ್ನಡದ ಇನ್ನೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಕನಸು ಅಗಾಧವಿದೆ.

ಬಿಗ್‌ಬಾಸ್‌ನಿಂದ  ಜನಪ್ರಿಯ
21 ದಿನ ಬಿಗ್‌ಬಾಸ್ ಮನೆಲ್ಲಿದ್ದು, ಮೂರನೇ ವಾರಾಂತ್ಯದಲ್ಲಿ ಇನ್ನ್ಯಾರೋ ಹೊರಬರುತ್ತಾರೆಂದು ಪ್ರೇಕ್ಷಕರು ಎಣಿಸುತ್ತಿರುವಾಗಲೇ ಶ್ವೇತಾ ಪಂಡಿತ್ ಹೊರಬಿದ್ದರು. 'ಬಿಗ್‌ಬಾಸ್ ಮನೆಯಲ್ಲಿ ಇರಬೇಕು ಅಂದ್ರೆ ಜಗಳ ಮಾಡಬೇಕು. ಯಾರು ಜಗಳ ಮಾಡುತ್ತಾರೋ ಅವರನ್ನು ಜನ ಇಷ್ಟಪಡುತ್ತಾರೆ. ಯಾರು ಡಿಗ್ನಿಫೈಯ್ಡ್ ಆಗಿ ವರ್ತಿಸುತ್ತಾರೋ ಅವರನ್ನು ಜನ ಇಷ್ಟಪಡುವುದಿಲ್ಲ. ತುಂಬಾ ಸೈಲೆಂಟ್ ಕ್ಯಾರೆಕ್ಟರ್ ಅಂತ ಅನಿಸಿಕೊಂಡಿದ್ದಕ್ಕೆ ಬಿಗ್‌ಬಾಸ್ ಕಾರ್ಯಕ್ರಮದಿಂದ ಹೊರ ಬಂದೆ' ಎನ್ನುವ ಶ್ವೇತಾ, 'ನಟಿಯಾಗಿ ಗುರುತಿಸದ ಜನ ಬಿಗ್‌ಬಾಸ್‌ನಿಂದಾಗಿ ಎಲ್ಲೇ ಓಡಾಡುತ್ತಿದ್ದರೂ ಮಾತನಾಡಿಸಲು ಶುರುಮಾಡಿದ್ದಾರೆ' ಎಂದು ನಗುತ್ತಾರೆ.
ತಂಗಿ ಶ್ರುತಿ ಬಿ.ಕಾಂ. ಓದುತ್ತಿದ್ದು, ಮುಂದೆ ಐಐಎಂಬಿಯಲ್ಲಿ ಓದಿಸುವ ಆಸೆ. ಆದರೆ ಅದಕ್ಕೆ ಹೆಚ್ಚು ಹಣ ಬೇಕಾಗಿರುವುದರಿಂದ 50 ಲಕ್ಷ ಗೆಲ್ಲುವ ಕನಸು ಕಂಡು ಬಿಗ್‌ಬಾಸ್‌ನಲ್ಲಿ ಪಾಲ್ಗೊಂಡಿದ್ದರು.
  'ನನಗೆ ತಂಗಿಯೇ ಪ್ರಪಂಚ. ನಾನು ಹಣ ಗೆಲ್ಲದೇ ಇದ್ದರೂ, ಬಿಗ್‌ಬಾಸ್‌ನಲ್ಲಿ ಸುದೀಪ್ ಅವರ ಮನ ಗೆದಿದ್ದೀನಿ. ಅವರು ತಂಗಿಯ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತೇನೆಂದು ಹೇಳಿರುವುದು ಬಹಳ ಖುಷಿ ತಂದಿದೆ' ಎಂದು ಹರ್ಷ ಉಕ್ಕಿಸುತ್ತಾರೆ ಶ್ವೇತಾ.

- ಶ್ರೀನಿಧಿ ಎನ್. ಪುತ್ತೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!