ಸಿನಿಮಾ ಲೇಖನ

ದಾಸ ಧಾರಾವಾಹಿ

ಹಿರಿಯ ನಟ ಶ್ರೀನಿವಾಸಮೂರ್ತಿ ಕಿರುತೆರೆಯಲ್ಲಿ ಮತ್ತೊಮ್ಮೆ ನಿರ್ದೇಶಕರಾಗುತ್ತಿದ್ದಾರೆ. ಎಚ್‌ಡಿ ಕುಮಾರಸ್ವಾಮಿ ಅವರಿಗಾಗಿ ಕನಕದಾಸ ಎಂಬ ಧಾರಾವಾಹಿಯ ಚಿತ್ರೀಕರಣವನ್ನು ಇದೇ ಜನವರಿಯಲ್ಲಿ ಆರಂಭಿಸಲಿದ್ದಾರೆ ಮೂರ್ತಿ ಅವರು.

ವಿಶೇಷ ಎಂದರೆ ಈ ಧಾರಾವಾಹಿಯಲ್ಲಿ ಬಾಲ ಕನಕನಾಗಿ ಮೂರ್ತಿಗಳ ಮೊಮ್ಮಗ, ನಟ ನವೀನ್‌ಕೃಷ್ಣ ಅವರ ಪುತ್ರ ಹರ್ಷ ಅಭಿನಯಿಸುತ್ತಿದ್ದರೆ, ಹರೆಯದ ಕನಕನಾಗಿ ನವೀನ್‌ಕೃಷ್ಣ ಮತ್ತು ಹಿರಿಯ ಕನಕನಾಗಿ ಸ್ವತಃ ಶ್ರೀನಿವಾಸಮೂರ್ತಿ ಅವರೇ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಕನಕನ ಹಿತೈಷಿಯಾಗಿ ನಟ ರಮೇಶ್‌ಭಟ್ ಅವರಿಗೊಂದು ವಿಶೇಷ ಪಾತ್ರವಿದೆ.
ಈ ವಿಷಯ ಹೇಳಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ಇಂದು ಕೌಟುಂಬಿಕ ಧಾರಾವಾಹಿಗಳೇ ಹೆಚ್ಚಾಗಿವೆ. ಹಾಗಾಗಿ ಇಂಥ ಹೊಸತನದ ಧಾರಾವಾಹಿಗಳು ಬೇಕು ಅನಿಸಿದ್ದರಿಂದ ಕನಕದಾಸರ ಕಥೆ ಹೇಳಲು ಪ್ರಯತ್ನ ಮಾಡುತ್ತಿದ್ದೇವೆ, ನಾನೂ ಕೂಡ ಕನಕದಾಸರ ಬಗ್ಗೆ ಸಾಕಷ್ಟು ಓದಿ ತಿಳಿದುಕೊಂಡಿದ್ದೇನೆ ಎಂದರು ನಿರ್ಮಾಪಕರಾದ ಎಚ್‌ಡಿ. ಕುಮಾರಸ್ವಾಮಿ.

ನಿರ್ದೇಶಕ ಶ್ರೀನಿವಾಸಮೂರ್ತಿ ಅವರು ಈ ಕಥೆಯಲ್ಲಿ ವೈವಿಧ್ಯಮಯ ಅಂಶಗಳಿವೆ. ಇದೊಂದು ಜನಪ್ರಿಯ ಧಾರಾವಾಹಿ ಆಗುತ್ತದೆ ಎಂಬ ನಂಬಿಕೆ ನನಗಿದೆ ಎಂದರು. ದೊಡ್ಡವರ ಜೊತೆ ಕುಳಿತಿದ್ದೇನೆ. ಏನು ಮಾತನಾಡಬೇಕೆಂದು ತಿಳಿಯುತ್ತಿಲ್ಲ. ಆದರೆ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ ಎಂಬ ನಂಬಿಕೆ ಇದೆ ಎಂದಿದ್ದು ನಟ ನವೀನ್ ಕೃಷ್ಣ. ಇದರ ಜೊತೆಗೆ ಇಲ್ಲಿಯವರೆಗೂ ಅವರಿಗೆ ಇಂಥ ಪಾತ್ರ ಸಿಕ್ಕಿಲ್ಲ ಎಂಬುದು ರಮೇಶ್ ಭಟ್ ಅವರ ಪರವಾಗಿ ಸ್ವತಃ ಕುಮಾರಸ್ವಾಮಿ ಮತ್ತು ಶ್ರೀನಿವಾಸ, ಮೂರ್ತಿ ಅವರೇ ಹೇಳಿದ ಮಾತು. ಮುಂದಿನ ವರ್ಷದ ಯುಗಾದಿಯ ಹೊತ್ತಿಗೆ ಧಾರಾವಾಹಿ ಕಸ್ತೂರಿ ವಾಹಿನಿಯಲ್ಲಿ ಪ್ರಸಾರ ಆರಂಭಿಸಲಿದೆಯಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!