ಸಿನಿಮಾ ಲೇಖನ

ರಾಧಾ ಕಲ್ಯಾಣ 700

ಸಿನಿಮಾದಲ್ಲಿ ನಂಜುಂಡಿ ಕಲ್ಯಾಣ ದಾಖಲೆ ಬರೆದಂತೆ, ಕಿರುತೆರೆಯಲ್ಲಿ ರಾಧಾಕಲ್ಯಾಣ ಇತಿಹಾಸ ಸೃಷ್ಟಿಸಿದೆ. ಸಂಜೆ ಆರೂವರೆಯ ಗೋಧೂಳಿ ಮುಹೂರ್ತ ಕಲ್ಯಾಣಪ್ರಶಸ್ತ ಎಂಬುದು ಅಲ್ಲಿಗೆ ಖಾತ್ರಿಯಾಗಿದೆ. ಇದು ಝೀ ಕನ್ನಡ ವಾಹಿನಿಗೂ ಒಂದು ಹಿರಿಮೆಯ ವಿಷಯ. ಈವರೆಗೆ  ಝೀ ಕನ್ನಡದಲ್ಲಿ ಯಾವ ಧಾರಾವಾಹಿಯೂ ಇಷ್ಟೊಂದು ದೀರ್ಘಸವಾರಿ ಮಾಡಿದ್ದಿಲ್ಲ. ಅಶು ಬೆದ್ರಾ ನಿರ್ಮಾಣ ಹಾಗೂ ನಿರ್ದೇಶನದ ರಾಧಾಕಲ್ಯಾಣ ಇದೀಗ ಏಳುನೂರು ಕಂತು ಪೂರೈಸಿ  'ಸಾವಿರದ'ತ್ತ ಪಯಣ ಹೊರಟಿದೆ. ಈ ಸಂತಸವನ್ನು ಹಂಚಿಕೊಳ್ಳಲು ಇಡೀ ತಂಡ ಕಳೆದ ವಾರ ರೇಣುಕಾಂಬಾ ಸ್ಟುಡಿಯೋದಲ್ಲಿ ಒಂದುಗೂಡಿತ್ತು.
ರೀಮೇಕ್ ಧಾರಾವಾಹಿಯಾಗಿ ಶುರುವಾಗಿ ಕೆಲವೇ ವಾರಗಳ ನಂತರ ಸ್ವತಂತ್ರವಾಗಿ ಬೆಳೆದುಕೊಂಡು ಇಲ್ಲಿಯದೇ ಕಥೆಯಾಗಿ ಹೋದ ರಾಧಾಕಲ್ಯಾಣ, ಅಪಾರ ಜನಪ್ರಿಯತೆ ಪಡೆದದ್ದು ಮುಖ್ಯ ಪಾತ್ರಗಳಾದ ವಿಶು ಮತ್ತು ರಾಧಾ ನಡುವಣ ಪ್ರೀತಿ ಎಳೆಯಿಂದ. ಅದಕ್ಕೆ ಬೆಸೆದಂತೆ ಹಲವು ಪೋಷಕ ಪಾತ್ರಗಳೂ ಜನರಿಗೆ ಹತ್ತಿರವಾದದ್ದು ಮತ್ತೊಂದು ಪ್ರಮುಖ ಅಂಶ. ಕನ್ನಡ ಕಿರುತೆರೆ ಇತಿಹಾಸದಲ್ಲೇ ಮೊದಲ ಬಾರಿಗೆ ದುಬೈ, ಗೋವಾ ಮತ್ತು ಧೂದ್ ಸಾಗರ್‌ನಲ್ಲಿ ಚಿತ್ರೀಕರಣಗೊಂಡ ಧಾರಾವಾಹಿ ಎಂಬುದು ರಾಧಾಕಲ್ಯಾಣದ ಹೆಗ್ಗಳಿಕೆ.
ಕಟ್ಟಡ ನಿರ್ಮಾಣದಲ್ಲಿ ಸ್ಪೆಷಲಿಸ್ಟ್ ಆಗಿದ್ದ ಅಶುಬೆದ್ರಾ ಧಾರಾವಾಹಿ ನಿರ್ಮಾಣದಲ್ಲೂ  ಬೆಸ್ಟ್ ಅನಿಸಿಕೊಂಡ ಬಗ್ಗೆ ಇಡೀ ತಂಡ ಮೆಚ್ಚುಗೆಯ ಮಾತುಗಳನ್ನಾಡಿತು. ಏಳುನೂರು ಕಂತುಗಳ ನಂತರವೂ ಧಾರಾವಾಹಿ ತನ್ನ ಸೆಳೆತವನ್ನು ಕಾಪಾಡಿಕೊಂಡಿರುವ ಬಗ್ಗೆ, ತಂಡದ ಎಲ್ಲ ಸದಸ್ಯರನ್ನೂ ಕುಟುಂಬದವರಂತೆ ನೋಡಿಕೊಳ್ಳುತ್ತಾ ಬಂದಿರುವ ಬಗ್ಗೆ, ಬಜೆಟ್ ಬಗ್ಗೆ ಯೋಚಿಸದೆ ಕ್ವಾಲಿಟಿಗೆ ಪ್ರಾಶಸ್ತ್ಯ ಕೊಡುವ ನಿರ್ಮಾಪಕರ ಪ್ಯಾಶನ್ ಬಗ್ಗೆ ಪ್ರತಿಯೊಬ್ಬರಿಂದಲೂ ಹೊಗಳಿಕೆ ಬಂತು. ಸೀತಾಕೋಟೆ, ಶ್ರೀಕಾಂತ್ ಹೆಬ್ಳಿಕರ್, ವೆಂಕಟಾದ್ರಿ, ಪಲ್ಲವಿ, ಸಂದೀಪ್, ನವೀನ್, ರೂಪೇಶ್ ಮುಂತಾದ ಕಲಾವಿದರು ಯಶಸ್ವೀ ಧಾರಾವಾಹಿಯ ಭಾಗವಾಗಿರುವ ಖುಷಿ ಹಂಚಿಕೊಂಡರೆ, ತೆರೆ ಹಿಂದಿನ ಶ್ರಮಿಕರಾದ ಕಲಾನಿರ್ದೇಶಕ ಚೇತನ್ ಮುಂಡಾಡಿ, ಕ್ಯಾಮರಾಮನ್ ರುದ್ರಮುನಿ, ಸಂಚಿಕೆ ನಿರ್ದೇಶಕ ರಾಘವೇಂದ್ರ ಮೌನವಾಗಿದ್ದುಕೊಂಡು ಸಾರ್ಥಕ ಕ್ಷಣಕ್ಕೆ ಸಾಕ್ಷಿಯಾದರು. ಧಾರಾವಾಹಿಯ ಯಶಸ್ಸಿಗೆ ಹಾಗೂ ದೀರ್ಘಾಯಸ್ಸಿಗೆ ಕಾರಣೀಭೂತರಾದ ಝೀ ವಾಹಿನಿಯನ್ನು ವಿಶೇಷವಾಗಿ ಸ್ಮರಿಸಿದ ಅಶು ಬೆದ್ರಾ, ವಾಹಿನಿಯ ಪರವಾಗಿ ಝೀ ಕಾರ್ಯಕ್ರಮ ನಿರ್ಮಾಪಕ ಪುನೀತ್ ಬಾರ್ಕೂರ್ ಅವರಿಗೆ ಕೃತಜ್ಞತೆ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಅಶು ಬೆದ್ರಾ ತಮ್ಮ ಬ್ಯಾನರ್‌ನ ದ್ವಿತೀಯ ಕಾಣಿಕೆಯಾಗಿ 'ಸಾಗರ ಸಂಗಮ' ಎಂಬ ಹೊಸ ಧಾರಾವಾಹಿ ಪ್ರಾರಂಭಿಸುತ್ತಿರುವ ಸಂತಸವನ್ನೂ ಹಂಚಿಕೊಂಡರು.

= ನವೀನ್ ಸಾಗರ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!