ಸಿನಿಮಾ ಲೇಖನ

She ರಿಯಲ್ ಡಾನ್!

ಸೌಮ್ಯಲತಾ, ವಾಣಿಶ್ರೀ, ಸ್ವಪ್ನಾರಾಜ್, ಸ್ವಾತಿ ಸದ್ಯದ ಮಟ್ಟಿಗೆ ಫೇಮಸ್ ಸೀರಿಯಲ್ ಡಾನ್‌ಗಳು. ಇವರ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಕಲಾವಿದೆ ಪ್ರಿಯಾ...

ಕನ್ನಡದ ಸಿನಿಮಾದ ಮಟ್ಟಿಗೆ ಖಳನಾಯಕಿಯರು ಎಂದರೆ ಬಹುಬೇಗ ನೆನಪಾಗುವ ಒಂದು ಹೆಸರು ಬಡ್ಡಿಬಂಗಾರಮ್ಮ ಎಂದೇ ಖ್ಯಾತರಾಗಿದ್ದ ಉಮಾ ಶಿವಕುಮಾರ್. ಇವರ ಹೊರತಾಗಿ ಖಳನಾಯಕಿಯರು ಕಾಣಿಸುವುದಿಲ್ಲ. ಆದರೆ, ಕಿರುತೆರೆ ಮಾತ್ರ ಇದಕ್ಕೆ ಅಪವಾದ. ಒಂದು ಧಾರವಾಹಿಯಲ್ಲಿ ಕನಿಷ್ಠ ಒಬ್ಬ ವಿಲನ್ ಇದ್ದೇ ಇರುತ್ತಾರೆ. ಅದರಲ್ಲೂ ಮಹಿಳಾ ವಿಲನ್‌ಗಳೇ ಇಲ್ಲಿ ಹೆಚ್ಚು ಫೇಮಸ್. 'ನೀನಾ, ನಾನಾ' ಎನ್ನುವಷ್ಟರ ಮಟ್ಟಿಗೆ ಈ ಲೇಡಿ ಡಾನ್‌ಗಳ ಅಬ್ಬರ ವರ್ಷಗಳ ಕಾಲ ಸಾಗುತ್ತದೆ.

ಸೌಮ್ಯಲತಾ, ವಾಣಿಶ್ರೀ, ಸ್ವಪ್ನಾರಾಜ್, ಸ್ವಾತಿ ಸದ್ಯದ ಮಟ್ಟಿಗೆ ಫೇಮಸ್ ಸೀರಿಯಲ್ ಡಾನ್‌ಗಳು. ಇವರ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಕಲಾವಿದೆ ಪ್ರಿಯಾ. ಈಕೆಯ ಪಾತ್ರಗಳು ಹೆಸರಿನಷ್ಟು ಮೃದು ಅಲ್ಲ ಎಂಬುದು ಪುಟ್ಟ ಪರದೆ ಮೇಲೆ ಈಕೆಯನ್ನು ನೋಡಿದವರಿಗೆ ಗೊತ್ತು. 'ಸಿಂಧೂರ' ಧಾರವಾಹಿಯ ಸಿಂಚನಾ, 'ಬಂಗಾರ'ದ ರಾಗಿಣಿ, 'ಅಮ್ಮ ನಿನಗಾಗಿ' ಧಾರಾವಾಹಿಯ ಸಂಭ್ರಮ, 'ಕಾರ್ತಿಕಾ ದೀಪ'ದ ಸೀಮಾ, 'ಕನಕ'ದ ಪ್ರಿಯಾ, 'ಸಾವಿತ್ರಿ'ಯ ಸ್ವಾತಿ, 'ಅಶ್ವಿನಿ ನಕ್ಷತ್ರ'ದ ಭಾವನಾ ಪಾತ್ರಗಳ ಖದರ್ ನೋಡಿದರೆ ಅದು ಗೊತ್ತಾಗುತ್ತದೆ.

ನಿಮ್ಮ ಹಿನ್ನೆಲೆ ಹೇಳಿ?
ಊರು ಸಾಗರ. ಓದಿದ್ದು ಅಲ್ಲೇ. ಪತ್ರಿಕೋದ್ಯಮ ಪದವಿ ಮುಗಿಸಿಕೊಂಡು ಸುವರ್ಣ ವಾಹಿನಿಯಲ್ಲಿ ಇಂಟರ್ನ್‌ಶಿಪ್ ಮಾಡಿದೆ.  ಆ ನಂತರ ಉತ್ಥಾನ ಪತ್ರಿಕೆಯಲ್ಲಿ ಬರವಣಿಗೆ. ಕನ್ನಡಪ್ರಭದ ಕಾಲೇಜು ರಂಗ ಸೇರಿದಂತೆ ಬೇರೆ ಬೇರೆ ಪತ್ರಿಕೆಗಳಲ್ಲಿ ನಿರಂತರವಾಗಿ ಲೇಖನಗಳನ್ನು ಬರೆಯುತ್ತಿದ್ದೆ. ಓದುವ ಹವ್ಯಾಸ ಹೆಚ್ಚು. ನ್ಯೂಸ್ ರೀಡರ್ ಆಗುವ ಆಸೆ ಇತ್ತು.

ಪತ್ರಕರ್ತರಾಗಬೇಕಿದ್ದವರು ನಟಿಯಾಗಿದ್ದು ಹೇಗೆ?
'ಉತ್ಥಾನ' ಪತ್ರಿಕೆಯಲ್ಲಿದ್ದಾಗಲೇ ರಂಗಭೂಮಿ ನಂಟು ಸಿಕ್ಕಿತು. ನಾಟಕ ಪ್ರದರ್ಶನಗಳಿಗೆ ಹೋಗುತ್ತಿದ್ದೆ. ನಾಟಕ ನೋಡುವ ಅಭ್ಯಾಸ ಸೀದಾ 'ಅಭಿನಯತರಂಗ'ದವರೆಗೂ ಕರೆದುಕೊಂಡು ಹೋಯಿತು. ಅಲ್ಲಿ ಒಂದು ವರ್ಷ ತರಬೇತಿ ತೆಗೆದುಕೊಂಡ ಮೇಲೆ ಧಾರಾವಾಹಿ ಎಡಿಟಿಂಗ್ ಕೆಲಸ ಮಾಡಿದೆ. ಊರಿಗೆ ಬಂದವಳು ನೀರಿಗೆ ಬಾರದೆ ಇರುತ್ತಾಳೆಯೇ? ಕಿರುತೆರೆಯ ಕ್ಯಾಮೆರಾ ಮುಂದೆ ನಿಂತೆ.

ನಿಮ್ಮ ನಟನಾ ಪಯಣ ಆರಂಭವಾಗಿದ್ದು ಎಲ್ಲಿಂದ?
ಮೊದಲ ಧಾರಾವಾಹಿ 'ಸಿಂಧೂರ'. ಇಲ್ಲಿ ಎಂ.ಡಿ ಪಾತ್ರ. ಅಲ್ಲಿಂದ ಇಲ್ಲಿವರೆಗೂ 15ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಪಾತ್ರ ಮಾಡಿದ್ದೇನೆ. ವಿಶೇಷ ಅಂದರೆ ಇಲ್ಲಿವರೆಗೂ ಖಳನಾಯಕಿಯಾಗಿಯೇ ಕಾಣಿಸಿಕೊಂಡಿದ್ದೇನೆ.

ಸಿನಿಮಾ ವಿಲನ್‌ಗೂ, ಧಾರಾವಾಹಿ ಡಾನ್‌ಗೂ ಏನ್ ವ್ಯತ್ಯಾಸ?
ಅವರು ದಿನದ ಒಂದೆರಡು ಗಂಟೆಯ ಡಾನ್. ನಾವು ವರ್ಷಪೂರ್ತಿ ಡಾನ್. ನಮಗೆ ಎಕ್ಸ್‌ಪೈರಿ ಡೇಟ್ ಇಲ್ಲ. ವರ್ಷಗಳರ ಕಾಲ ಪ್ರೇಕ್ಷಕರಿಂದ ಬೈಸಿಕೊಳ್ಳುತ್ತಿರುತ್ತೇವೆ.

ಹೀಗೆ ಖಳನಾಯಕಿ ಪಾತ್ರಗಳಿಗೆ ಸೀಮಿತವಾಗುತ್ತೀರಾ?
ಬೇರೆ ರೀತಿಯ ಪಾತ್ರಗಳನ್ನು ಮಾಡುವ ಆಸೆ ಇದೆ. ಆದರೆ, ಡಾನ್ ಪಾತ್ರಕ್ಕೆ ಸಿಗುವ ಸ್ಕೋಪ್ ಬೇರೆ ಪಾತ್ರಕ್ಕೆ ಸಿಗಲ್ಲ. ಹೀಗಾಗಿ ಡಾನ್ ಆಗಿಯೇ ಉಳಿದುಕೊಂಡಿದ್ದೇನೆ. ನಿಜ ಹೇಳಬೇಕು ಅಂದ್ರೆ, ಅಭಿನಯನ ಕಲಿಯಲು ನೆಗೆಟಿವ್ ಪಾತ್ರಗಳನ್ನೇ ಮಾಡಬೇಕು.

ನಿಮ್ಮ ಹವ್ಯಾಸಗಳೇನು?
ಜಾಲಿ ಮೂಡಿನಲಿದ್ದಾಗ ಶಾಪಿಂಗ್, ಮನೆಯಲ್ಲಿದ್ದಾಗ ಓದುವುದು, ಬರೆಯುವುದು. ತುಂಬಾ ಕವನಗಳನ್ನು ಬರೆದಿದ್ದೇನೆ. ಎಸ್.ಎಲ್. ಬೈರಪ್ಪ ಕಾದಂಬರಿಗಳು ಹೆಚ್ಚು ಓದುತ್ತೇನೆ.

ನೀವು ಮೆಚ್ಚುವ ನಟ, ನಟಿ ಯಾರು?
ಡಾ.ರಾಜ್‌ಕುಮಾರ್ ಹಾಗೂ ಕಲ್ಪನಾ.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ