ಶ್ರೀಸಾಯಿಬಾಲಾಜಿ ಕಂಬೈನ್ಸ್ ಲಾಂಛನದಲ್ಲಿ ದಿನಕರ್ ಗಿರಿರಾಜು ಹಾಗೂ ಸುನಿತಾದಿನಕರ್ ಅವರು ನಿರ್ಮಿಸಿರುವ ಬಿಲಿಯನ್ ಡಾಲರ್ ಬೇಬಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಿರಿ ವಯಸ್ಸಿನಲ್ಲೇ ತನ್ನ ಸಾಧನೆಗಳಿಂದ ಖ್ಯಾತಿ ಪಡೆದಿರುವ ಶ್ರೀಯಾ ದಿನಕರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲೂ ಶ್ರೀಯಾ ದಿನಕರ್ ಕಾಣಿಸಿಕೊಂಡಿದ್ದಾರೆ. ಸುರೇಶ್ ಹೆಬ್ಳಿಕರ್, ಶಿವಧ್ವಜ್, ಸಂಗೀತ, ಯಮುನಮೂರ್ತಿ, ನವರಸ ರಾಮಕೃಷ್ಣ, ಬ್ಯಾಂಕ್ ಜನಾರ್ಧನ್, ಪುಷ್ಪಸ್ವಾಮಿ, ಅರವಿಂದ್, ಪ್ರೇಮಲತಾ, ಅಶ್ವಿನಿ, ಬೇಬಿ ಶಾರದ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. <
ಮತ್ತೆ ಸತ್ಯಾಗ್ರಹ
ಆತ್ಮಬಿಂದು ವಿಷನ್ಸ್ ಅರ್ಪಿಸುತ್ತಿರುವ ಮತ್ತೆ ಸತ್ಯಾಗ್ರಹ ಚಲನಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಬಿ. ಶಿವಾನಂದ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ದತ್ತಾತ್ರೇಯ, ಯೋಗೀಶ್, ನೇಹ ಪಾಟಿಲ್, ಅನಿಲಲ್ಕುಮಾರ್, ಅಂಬುಜಾಕ್ಷಿ, ಎಸ್.ಗೋವಿಂದ್ ಮತ್ತಿತರರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಮ್ಯಾಥ್ಯೂರಾಜನ್ ಛಾಯಾಗ್ರಹಣ, ಬಿ.ಆರ್.ಹೇಮಂತ್ಕುಮಾರ್ ಸಂಗೀತ ಹಾಗೂ ಸಂಕಲನ ಸಂಜೀಮ್ ರೆಡ್ಡಿ ಅವರದಾಗಿದೆ. ನಿರ್ಮಾಣ ಸಾರಥ್ಯದಲ್ಲಿ ಶ್ರೀನಿವಾಸ್, ಕೆ. ದತ್ತಾತ್ರೇಯ, ಎಸ್.ಕೆ. ಅನಂತ್, ಬಿ.ಹೆಚ್. ಸುರೇಶ್, ಕೇಶವ, ಶ್ರೀನಿಧಿ ಹಾಗೂ ಮೋಹನ್ ನಾಗಮ್ಮನವರ್ ನಿರ್ದೇಶಕ ಬಿ. ಶಿವಾನಂದ ಅವರೊಂದಿಗೆ ಕೈಜೋಡಿಸಿದ್ದಾರೆ.