ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಸಮಾರಂಭ ಎಂದರೆ ಅದು ಹಾಗೇ. ಅಲ್ಲಿ ಹಳೆಯ ನೆನಪುಗಳ ಮೆರವಣಿಗೆ. ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಹಿರಿಯರನ್ನು ಸನ್ಮಾನಿಸುವ ಚಿತ್ರವಾಣಿಯ ಸಂಪ್ರದಾಯ ಇಂದಿಗೂ ಮುಂದುವರೆದಿರುವ ಕಾರಣಕ್ಕೆ, ಒಂದು ಕಾಲದಲ್ಲಿ ಏನೂ ಅಲ್ಲದೆ ಇದ್ದು, ಈಗ ದೊಡ್ಡ ಮನುಷ್ಯರಾಗಿರುವವರೆಲ್ಲ ಅಲ್ಲಿ ಬಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಮೊನ್ನೆ ಕೂಡ ಅದೇ ಆಗಿದ್ದು. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಯಿಸುತಿ ್ತದ್ದ ಕಾಲವನ್ನು ನೆನಪಿಸಿಕೊಂಡ ಪ್ರಕಾಶ್ ರೈ ಇನ್ನೊಬ್ಬ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಅವರ ಜೊತೆಗಿನ ತಮ್ಮ ಹಳೆಯ ನೆನಪುಗಳಿಗೆ ಮತ್ತೆ ಒಗ್ಗರಣೆ ಹಾಕಿದರು. ಪ್ರಕಾಶ್ ರೈ ಅವರೊಂದಿಗೆ ಅಂದು ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಚ್.ಡಿ ಗಂಗರಾಜು, ವಿಜಯಮ್ಮ, ಶಿವರಾಮ್ರಂಥ ಹಿರಿಯರೂ, ಗಿರಿರಾಜ್, ಪವನ್ ಕುಮಾರ್, ಅನಿರುದ್ಧ, ಸಂಗೀತಾ ಕಟ್ಟಿ, ಗಡ್ಡ ವಿಜಿ ಮುಂತಾದ ಈಗಿನ
ತಲೆಮಾರೂ ಹಾಜರಿತ್ತು. ಸಮಾರಂಭದ ಉಸ್ತುವಾರಿಯನ್ನು ಸುಧೀಂದ್ರ ವೆಂಕಟೇಶ್, ವಾಸು ಮತ್ತು ಸುನಿಲ್ ಹೊತ್ತಿದ್ದರು.